More

    ಆಶಸ್ ಸರಣಿಗೆ ಮುನ್ನ ಆಸೀಸ್ ಟೆಸ್ಟ್ ತಂಡಕ್ಕೆ ಹೊಸ ನಾಯಕ, ಉಪನಾಯಕ ನೇಮಕ

    ಮೆಲ್ಬೋರ್ನ್: ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರನ್ನು ಆಸ್ಟ್ರೇಲಿಯಾ ಟೆಸ್ಟ್ ತಂಡದ ಹೊಸ ನಾಯಕರನ್ನಾಗಿ ನೇಮಿಸಲಾಗಿದೆ. ಮಾಜಿ ನಾಯಕ ಸ್ಟೀವನ್ ಸ್ಮಿತ್ ಅವರನ್ನು ಉಪನಾಯಕರನ್ನಾಗಿ ಆರಿಸಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಶುಕ್ರವಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, 28 ವರ್ಷದ ಕಮ್ಮಿನ್ಸ್ ಆಸೀಸ್ ಟೆಸ್ಟ್ ತಂಡದ 47ನೇ ನಾಯಕ ಮತ್ತು ಕಳೆದ 65 ವರ್ಷಗಳಲ್ಲಿ ಟೆಸ್ಟ್ ನಾಯಕತ್ವ ವಹಿಸಿದ ಮೊದಲ ಆಸೀಸ್ ವೇಗಿ ಎನಿಸಿದ್ದಾರೆ. 1957ರಲ್ಲಿ ಕೊನೆಯದಾಗಿ ಆಸೀಸ್ ವೇಗಿ ರೇ ಲಿಂಡ್‌ವಾಲ್ ಏಕೈಕ ಟೆಸ್ಟ್‌ನಲ್ಲಿ ನಾಯಕತ್ವ ನಿರ್ವಹಿಸಿದ್ದರು.

    ಸ್ಟೀವನ್ ಸ್ಮಿತ್ 2018ರ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿ ನಾಯಕತ್ವ ಕಳೆದುಕೊಂಡಿದ್ದರು. ಆ ಬಳಿಕ ಅವರನ್ನು ನಾಯಕತ್ವಕ್ಕೆ ಪರಿಗಣಿಸಲಾಗಿರಲಿಲ್ಲ. ಇದೀಗ ಉಪನಾಯಕರಾಗಿ ಕಮ್ಮಿನ್ಸ್‌ಗೆ ನೆರವಾಗಲಿರುವ ಸ್ಮಿತ್ ಭವಿಷ್ಯದಲ್ಲಿ ಮತ್ತೆ ಆಸೀಸ್ ನಾಯಕತ್ವ ವಹಿಸುವ ಸಾಧ್ಯತೆಯೂ ಕಾಣಿಸಿದೆ. ಡಿಸೆಂಬರ್ 8ರಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಆಶಸ್ ಸರಣಿ ಕಮ್ಮಿನ್ಸ್ ನಾಯಕತ್ವಕ್ಕೆ ಮೊದಲ ಸವಾಲು ಆಗಿರಲಿದೆ. 2011ರಲ್ಲಿ ಪದಾರ್ಪಣೆ ಮಾಡಿದ್ದ ಕಮ್ಮಿನ್ಸ್ ಆಸೀಸ್ ಪರ ಇದುವರೆಗೆ 34 ಟೆಸ್ಟ್ ಆಡಿದ್ದು, 164 ವಿಕೆಟ್ ಕಬಳಿಸಿದ್ದಾರೆ. ಈ ಮುನ್ನ ಅವರು ತಂಡದ ಉಪನಾಯಕರಾಗಿದ್ದರು.

    ಆಶಸ್‌ಗೆ ಪೇನ್ ಅಲಭ್ಯ
    4 ವರ್ಷಗಳ ಹಿಂದೆ ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ವಿವಾದದಿಂದಾಗಿ ಇತ್ತೀಚೆಗೆ ಆಸೀಸ್ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿರುವ ವಿಕೆಟ್ ಕೀಪರ್-ಬ್ಯಾಟರ್ ಟಿಮ್ ಪೇನ್, ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿಗೆ ಬಿಡುವು ಪಡೆದಿದ್ದಾರೆ. ಇದರಿಂದಾಗಿ ಅವರು ಮುಂಬರುವ ಆಶಸ್ ಸರಣಿಗೆ ಅಲಭ್ಯರಾಗಿದ್ದಾರೆ. ಈ ನಿರ್ಧಾರದಿಂದಾಗಿ 36 ವರ್ಷದ ಪೇನ್ ಅವರ ಟೆಸ್ಟ್ ಕ್ರಿಕೆಟ್ ಜೀವನ ಬಹುತೇಕ ಮುಗಿದಂತಾಗಿದೆ ಎಂದೂ ಹೇಳಲಾಗುತ್ತಿದೆ. ಅಲೆಕ್ಸ್ ಕ್ಯಾರಿ ಅಥವಾ ಜೋಶ್ ಇನ್‌ಗ್ಲಿಸ್ ಆಶಸ್ ಸರಣಿಗೆ ಕೀಪರ್ ಆಗಿ ಅವಕಾಶ ಪಡೆಯುವ ನಿರೀಕ್ಷೆ ಇದೆ.

    PHOTO: ಗೆಳತಿಯೊಂದಿಗೆ ವಿವಾಹವಾದ ಕರ್ನಾಟಕದ ಕ್ರಿಕೆಟಿಗ ಶ್ರೇಯಸ್ ಗೋಪಾಲ್

    ಟೀಮ್ ಇಂಡಿಯಾ ಕ್ರಿಕೆಟಿಗ ಭುವನೇಶ್ವರ್ ಕುಮಾರ್ ದಂಪತಿಗೆ ಹೆಣ್ಣು ಮಗು

    8 ಐಪಿಎಲ್ ತಂಡಗಳು ರಿಟೇನ್ ಮಾಡಿಕೊಳ್ಳಲಿರುವ ಸಂಭಾವ್ಯ ಆಟಗಾರರ ಪಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts