More

    ಫ್ಯಾಸಿಸ್ಟ್ ಶಕ್ತಿಗಳನ್ನು ಮಣಿಸಲು ಒಂದಾಗಿ

    ಸಿಂಧನೂರು: ಫ್ಯಾಸಿಸ್ಟ್ ಶಕ್ತಿಯಾದ ಬಿಜೆಪಿ ಕೋಮುವಾದವನ್ನು ಮುನ್ನೆಲೆಗೆ ತಂದು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದು, ಇದನ್ನು ಜನತೆ ಅರ್ಥೈಸಿಕೊಳ್ಳಬೇಕು ಎಂದು ಸಿಪಿಐ(ಎಂ.ಎಲ್) ಲಿಬರೇಷನ್ ರಾಜ್ಯ ಸಮಿತಿ ಸದಸ್ಯ ಪಿ.ಆರ್.ಎಸ್.ಮಣಿ ಹೇಳಿದರು.

    ಪ್ರಥಮ ಸಮ್ಮೇಳನ

    ನಗರದ ಎಪಿಎಂಸಿ ರೈತ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಥಮ ಸಮ್ಮೇಳನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ಮುಂಬರುವ ಸಾರ್ವಜನಿಕ ಚುನಾವಣೆಯಲ್ಲಿ ಸಂವಿಧಾನ ವಿರೋಧಿ ಹಾಗೂ ಜನವಿರೋಧಿ ಬಿಜೆಪಿಯನ್ನು ಮಣಿಸಲು ಒಗ್ಗಟ್ಟಾಗಬೇಕು. ದೈನಂದಿನ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನರು ಜೀವನ ನಿರ್ವಹಣೆಗೆ ಪರಿತಪಿಸುತ್ತಿದ್ದಾರೆ.

    ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ತಂದು ದುಡಿಯುವ ಅವಧಿಯನ್ನು ಹೆಚ್ಚುವರಿಗೊಳಿಸಲಾಗಿದ್ದು, ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ರೈತರಿಗೆ ನೀಡುತ್ತಿದ್ದ ಸಬ್ಸಿಡಿ ಕಡಿತ ಮಾಡಲಾಗಿದೆ.

    ಇದನ್ನೂ ಓದಿ:ಮಕ್ಕಳ ಮೇಲಿನ ದೌರ್ಜನ್ಯ ಕಳವಳಕಾರಿ

    ದಲಿತ, ದಮನಿತರು ಹಾಗೂ ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಿದ್ದು, ಕಡಿವಾಣ ಇಲ್ಲದಂತಾಗಿದೆ. ಕಾರ್ಪೊರೇಟ್ ಬಂಡವಾಳಿಗರ 14 ಲಕ್ಷ ಕೋಟಿ ರೂ.ಗೆ ಹೆಚ್ಚು ಸಾಲವನ್ನು ಮನ್ನಾ ಮಾಡಿ, ಜನರ ಮೇಲೆ ಇನ್ನಿಲ್ಲದ ತೆರಿಗೆ ಹೊರೆ ಹೇರಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ನಿಲುವುಗಳ ಮೂಲಕ ಭಾರತ ಫೆಡರಲ್ ವ್ಯವಸ್ಥೆಗೆ ಸವಾಲೊಡ್ಡಿದೆ ಎಂದರು.

    ಸಿಪಿಐ(ಎಂ.ಎಲ್) ಲಿಬರೇಷನ್ ಸಂಚಾಲಕ ನಾಗರಾಜ ಪೂಜಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರಗಾಲ, ಗುಳೆ, ನೀರಿನ ಸಮಸ್ಯೆ, ರೈತರ ಆತ್ಮಹತ್ಯೆಗೆ ಪರಿಹಾರ ಹುಡುಕುವಲ್ಲಿ ಸಂಪೂರ್ಣ ವಿಫಲವಾಗಿವೆ. ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಂಪತ್ತನ್ನು ಬಂಡವಾಳಿಗರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹರಾಜಿಗಿಟ್ಟಿದೆ ಎಂದರು.

    ಈ ಸಮ್ಮೇಳನದಲ್ಲಿ 11 ಜನರ ನೂತನ ತಾಲೂಕು ಸಮಿತಿಯನ್ನು ರಚಿಸಲಾಯಿತು. ಬಸವರಾಜ ಬೆಳಗುರ್ಕಿ ಅವರನ್ನು ತಾಲೂಕು ಸಮಿತಿ ಕಾರ್ಯದರ್ಶಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಮುಖರಾದ ಮಹಾದೇವ ಅಮರಾಪುರ, ಹುಸೇನಪ್ಪ, ಪಂಪಾಪತಿ ಬೆಳಗುರ್ಕಿ, ದೇವರಾಜ ಮಡಿವಾಳ, ಹನುಮಂತಪ್ಪ, ಹುಲ್ಲೇಶ, ಬಸವರಾಜ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts