More

    ರೈತರು, ಯೋಧರಿಗೆ ಗೌರವ ನೀಡಿ

    ಹುಕ್ಕೇರಿ: ಸಂಘ-ಸಂಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ, ಅವುಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ಬಹಳ ಕಷ್ಟಕರ. ಸಹಕಾರಿ ಕ್ಷೇತ್ರ ರಾಜಕೀಯ ರಹಿತವಾಗಿದ್ದರೆ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸಹಕಾರಿ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ ಅವಶ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದ್ದಾರೆ.

    ಶುಕ್ರವಾರ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ನಾಡಿಗೆ ಅನ್ನ ನೀಡುವ ರೈತ ಮತ್ತು ದೇಶ ಕಾಯುತ್ತಿರುವ ಯೋಧರಿಂದ ಮಾತ್ರ ದೇಶದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ಸಲ್ಲುತ್ತಿದೆ. ಕಾರಣ ಅವರನ್ನು ಸಮಾಜ ಎರಡು ಕಣ್ಣುಗಳಂತೆ ಕಾಪಾಡಿಕೊಳ್ಳಬೇಕು. ರೈತರಿಗೆ ಹೆಚ್ಚಿನ ಆರ್ಥಿಕ ನೆರವು ದೊರಕುವುದು ಸಹಕಾರಿ ಕ್ಷೇತ್ರದಿಂದ ಮಾತ್ರ ಎಂದರು.

    ಪಿಕಿಪಿಎಸ್‌ಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ, ರೈತರು ಸದುಪಯೋಗ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು. 314 ಸದಸ್ಯರಿಗೆ 1.92 ಕೋಟಿ ರೂ. ಪತ್ತು ವಿತರಿಸಿದರು. ಸಂಘದ ಪರವಾಗಿ ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು.

    ಸಂಗಂ ಶುಗರ್ಸ್‌ ಅಧ್ಯಕ್ಷ ರಾಜೇಂದ್ರ ಪಾಟೀಲ, ಸಂಕೇಶ್ವರ ಶುಗರ್ಸ್‌ ನಿರ್ದೇಶಕ ಶಿವನಾಯಿಕ ನಾಯಿಕ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ನಿರ್ದೇಶಕ ಅಶೋಕ ಚಂದಪ್ಪಗೋಳ, ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಬಸವರಾಜ ಸುಲ್ತಾನಪುರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಚಯ್ಯ ಹಿರೇಮಠ,ನಿರ್ದೇಶಕ ಪರಗೌಡ ಪಾಟೀಲ, ಜಯಗೌಡ ಪಾಟೀಲ, ಗಜಾನನ ಕೊಳ್ಳಿ, ಗುರುರಾಜ ಕುಲಕರ್ಣಿ, ರಾಜೇಶ ಮುನ್ನೋಳಿ, ಅಸ್ಲಂ ಜಮಖಂಡಿ, ಅಧ್ಯಕ್ಷ ವಿರೂಪಾಕ್ಷಿ ಚೌಗಲಾ, ಹುಸೇನ ಮುಲ್ಲಾ, ಸಿದ್ದಣ್ಣ ನೊಗನಿಹಾಳ ಇತರರು ಉಪಸ್ಥಿತರಿದ್ದರು.

    ಹೈನೋದ್ಯಮ ಉತ್ತೇಜಿಸಲು ಶೇ.3 ಬಡ್ಡಿ ದರದಲ್ಲಿ 2 ಹಸು ಅಥವಾ 2 ಎಮ್ಮೆ ಖರೀದಿಸಲು ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಸಾಲ ನೀಡಲಾಗುತ್ತದೆ. ಅದೇ ತೆರನಾಗಿ ಜಮೀನುಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಲು ಹಾಗೂ ಟ್ರ್ಯಾಕ್ಟರ್ ಖರೀದಿ ಮಾಡಲು ಸಾಲ ನೀಡಲಾಗುತ್ತಿದೆ. ರೈತರು ಸದುಪಯೋಗ ಪಡೆದು ಆರ್ಥಿಕವಾಗಿ ಪ್ರಗತಿ ಹೊಂದಬೇಕು. ರಾಜ್ಯದಲ್ಲಿ ಸದೃಢವಾಗಿರುವ ಡಿಸಿಸಿ ಬ್ಯಾಂಕ್ ಅನ್ನು ಮುಂಬರುವ ದಿನಗಳಲ್ಲಿ ಇಡೀ ದೇಶದ ಸಹಕಾರಿ ಕ್ಷೇತ್ರದ ಅತ್ಯುತ್ತಮ ಬ್ಯಾಂಕ್ ಎಂದು ಗುರುತಿಸುವಂತೆ ಮಾಡುವುದೇ ನನ್ನ ಕನಸು.
    | ರಮೇಶ ಕತ್ತಿ ಅಧ್ಯಕ್ಷರು ಡಿಸಿಸಿ ಬ್ಯಾಂಕ್ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts