More

    ರೈಲು ಸಂಚಾರ ತಡೆಗೆ ಯತ್ನಿಸಿದ ರೈತರು

    ಹುಬ್ಬಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿಸಾನ್ ಮೋರ್ಚಾ ಸಂಘಟನೆ ರಾಷ್ಟ್ರದಾದ್ಯಂತ ರೈಲು ಸಂಚಾರ ತಡೆಗೆ ನೀಡಿದ್ದ ಕರೆ ಬೆಂಬಲಿಸಿ ರಾಜ್ಯ ರೈತ ಸಂಘಟನೆ ಒಕ್ಕೂಟದ ಧಾರವಾಡ ಜಿಲ್ಲಾ ಘಟಕ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಧಾರವಾಡ ಜಿಲ್ಲೆಯ ರೈತರು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ರೈಲು ಸಂಚಾರ ತಡೆಗೆ ಯತ್ನಿಸಿದರು.

    ನಿಲ್ದಾಣದ ಒಳಗೆ ನುಗ್ಗುತ್ತಿದ್ದ ರೈತರನ್ನು ಪೊಲೀಸರು ತಡೆದರು. ನಂತರ ರೈತರು ರೈಲು ನಿಲ್ದಾಣದ ಹೊರಗೆ ಕೆಲ ಸಮಯ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಪ್ರತಿಭಟನೆ ಹಿಂಪಡೆಯಲು ಒಪ್ಪದ ರೈತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

    ಉದ್ಯಮಿಗಳ ಕೋಟ್ಯಾಂತರ ರೂ. ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ, ಬೆಳೆ ನಷ್ಟದಿಂದ ಬಳಲುತ್ತಿರುವ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

    ರೈತ ಮುಖಂಡರಾದ ಪರಶುರಾಮ ಎತ್ತಿನಗುಡ್ಡ, ಉಳವಪ್ಪ ಬಳಿಗೆರ, ವಸಂತ ಡಾಖಪ್ಪನವರ, ಚನ್ನಪ್ಪಾ ಜಗದಪ್ಪನವರ, ಸಹದೇವ ನೂಲ್ವಿ, ಶಿವಪ್ಪ ತಡಸ, ಮಾಳಪ್ಪ ಹೊನ್ನಿಹಳ್ಳಿ, ಮಲ್ಲೇಶಿ ಜಿನ್ನುರ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts