More

    ಕಾಡುಹಂದಿಗಳ ಉಪಟಳದಿಂದ ರೈತರಿಗೆ ಸಂಕಷ್ಟ


    ಮಡಿಕೇರಿ: ನಾಪೋಕ್ಲು ವೆಸ್ಟ್ ಕೊಳಕೇರಿ ಗ್ರಾಮದಲ್ಲಿ ಕಾಡುಹಂದಿಗಳು ಕೃಷಿ ಬೆಳೆಗಳಿಗೆ ತೀವ್ರ ಹಾನಿ ಉಂಟು ಮಾಡುತ್ತಿವೆ.


    ವೆಸ್ಟ್ ಕೊಳಕೇರಿ ಗ್ರಾಮ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಕಾಡುಹಂದಿಗಳು ಹಾವಳಿ ಹೆಚ್ಚಾಗಿದೆ. ಹೀಗಾಗಿ, ಭತದ ಗದ್ದೆಗಳಿಗೆ ದಾಂಗುಡಿ ಇಡುವ ಹಂದಿಗಳು ಕೊಯ್ಲಿಗೆ ಬಂದಿರುವ ಭತ್ತದ ಬೆಳೆಯನ್ನು ನಾಶ ಮಾಡುತ್ತಿವೆ. ಇದರಿಂದ ತುಂಬಾ ನಷ್ಟವಾಗುತ್ತಿದೆ ಎಂದು ರೈತರು ದೂರಿದ್ದಾರೆ.


    ವೆಸ್ಟ್ ಕೊಳಕೇರಿ ಗ್ರಾಮದ ನಿವಾಸಿ ಕಲಿಯಂಡ ದರ್ಶನ್ ಅಯ್ಯಪ್ಪ ಅವರ ಗದ್ದೆಗೆ ನಿತ್ಯ ಕಾಡು ಹಂದಿಗಳು ನುಗ್ಗುತ್ತಿವೆ. ನಾಟಿ ಮಾಡಿರುವ ಭತ್ತದ ಪೈರುಗಳನ್ನು ನಾಶಗೊಳಿಸುತ್ತಿವೆ. ಹಿಂಡು ಹಿಂಡಾಗಿ ಬರುವ ಹಂದಿಗಳು ಸುಮಾರು ಒಂದು ಎಕರೆ ಕೃಷಿ ಭೂಮಿಯನ್ನು ಒಂದು ಕಡೆಯಿಂದ ಕೆದಕಿ ಹಾಳು ಮಾಡಿವೆ. ಈ ಜಮೀನಿನಲ್ಲಿ ಬಿತ್ತಿದ್ದ ತಮಿಳುನಾಡಿನ ನಾಟಿ ಭತ್ತ ಕೊಯ್ಲಿನ ಹಂತಕ್ಕೆ ಬಂದಿತ್ತು. ಆದರೆ, ಹಂದಿಗಳ ದಾಳಿಯಿಂದ ನಾಶವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಭತ್ತದ ಕಣಜ ಎಂದೇ ಪ್ರಖ್ಯಾತಿ ಹೊಂದಿದ್ದ ಕೊಡಗು ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯ, ಕಾಡುಪ್ರಾಣಿಗಳ ಹಾವಳಿ ಹಾಗೂ ಬೆಳೆಗೆ ರೋಗಬಾಧೆಯಿಂದ ರೈತರು ನಲುಗಿದ್ದಾರೆ. ಇತ್ತ ಸರ್ಕಾರವೂ ರೈತರ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನಾದರೂ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts