More

    ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ

    ರಾಣೆಬೆನ್ನೂರ: ತಾಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ಬ್ಯಾಂಕ್​ನವರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ನಗರದ ಪೋಸ್ಟ್ ವೃತ್ತದ ಬಳಿಯಿರುವ ಕಾಪೋರೇಷನ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

    ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳ 450 ರೈತರು 2018-19ನೇ ಸಾಲಿನಲ್ಲಿ ಕಾಪೋರೇಷನ್ ಬ್ಯಾಂಕ್ ಮೂಲಕ ಬೆಳೆ ವಿಮೆ ತುಂಬಿದ್ದಾರೆ. ಆದರೆ, ಬ್ಯಾಂಕ್​ನವರು ರೈತರ ಹಣವನ್ನು ವಿಮಾ ಕಂಪನಿಗೆ ಪಾವತಿಸದೆ ತಮ್ಮಲ್ಲಿಯೇ ಜಮಾ ಮಾಡಿ ಇಟ್ಟುಕೊಂಡಿದ್ದಾರೆ.

    ರೈತರು ಹಣ ತುಂಬಿ ಮೂರು ತಿಂಗಳ ನಂತರ ಬ್ಯಾಂಕ್​ನವರು ವಿಮಾ ಕಂಪನಿಗೆ ತುಂಬಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಿ ಬೆಳೆ ವಿಮೆ ತುಂಬುವ ಅವಧಿ ಮುಗಿದು ಹೋಗಿದೆ. ಬ್ಯಾಂಕ್​ನವರು ಮಾಡಿದ ಎಡವಟ್ಟಿನಿಂದ 450 ರೈತರಿಗೆ ಈವರೆಗೂ ಬೆಳೆ ವಿಮೆ ಪರಿಹಾರ ಬಂದಿಲ್ಲ ಎಂದು ಆರೋಪಿಸಿದರು.

    ಬ್ಯಾಂಕ್​ನವರು ನಮಗೆ ನ್ಯಾಯ ಒದಗಿಸಿ ಕೊಡಬೇಕು. ರೈತರಿಗೆ ಬೆಳೆ ವಿಮೆ ಹಣ ನೀಡಬೇಕು. ಅಲ್ಲಿಯವರೆಗೂ ಪ್ರತಿಭಟನೆ ಹಿಂಪಡೆ ಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಶಹರ ಠಾಣೆ ಪಿಎಸ್​ಐ ಪ್ರಭು ಕೆಳಗಿನಮನಿ ಬ್ಯಾಂಕ್ ವ್ಯವಸ್ಥಾಪಕ ಹಾಗೂ ರೈತರ ನಡುವೆ ಸಭೆ ನಡೆಸಿದರು.

    ಬ್ಯಾಂಕ್​ನವರು ಮಾ. 2ರಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆ ದರು. ಮಂಜುನಾಥ ತಳವಾರ, ಸಂತೋಷ ಆಡಿನವರ, ಮುಲಾ ಲಸಾಬ ಪಾಟೀಲ, ಆನಂದ ಓಲೇಕಾರ, ಬಸವರಾಜ ಮಾಚೇ ನಹಳ್ಳಿ, ಮಂಜಯ್ಯ ಹಿರೇಮಠ, ಬಸವ ರಾಜ ಹರಿಹರ, ಶಿವಾನಂದಯ್ಯ ಹಿರೇಮಠ, ಬಸವ ರಾಜ ಬಣಕಾರ, ಹನುಮಂತಪ್ಪ ಕುರುಬರ, ಯಲ್ಲಪ್ಪ ಕೊಚ್ಚಿ, ಗುಡ್ಡಪ್ಪ ಸುಂಕಾಪುರ, ಬಸಲಿಂಗಪ್ಪ ಬಣಕಾರ, ವೀರಪ್ಪ ಬಣಕಾರ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ರೈತರ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts