More

    ರೈತರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ

    ಮೂಡಲಗಿ: ಹೊಸ ತಂತ್ರಜ್ಞಾನವನ್ನು ಕೃಷಿಯಲ್ಲಿ ರೈತರು ಅಳವಡಿಸಿಕೊಂಡು ಹೆಚ್ಚು ಆದಾಯ ಪಡೆದುಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

    ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರಯುಕ್ತ ತಾಲೂಕಿನ ಕಲ್ಲೋಳಿ ಪಟ್ಟಣದ ಹನುಮಂತ ದೇವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ, ಸ್ಥಳೀಯ ರೈತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರೈತರ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ನಾನು ರೈತರ ಸಂಕಷ್ಟ ಅರಿತಿದ್ದೇನೆ. ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

    ಪರಪ್ಪ ಕಡಾಡಿ, ಶ್ರೀಶೈಲ ತುಪ್ಪದ, ಪ್ರಭು ಕಡಾಡಿ, ಕೃಷ್ಣಪ್ಪ ಮುಂಡಗಿನಾಳ, ಕಾಡೇಶ ಗೊರೋಶಿ, ಮಹಾದೇವ ಮದಬಾವಿ, ರಾಮಲಿಂಗ ಬಿ. ಪಾಟೀಲ, ಅಡಿವೆಪ್ಪ ಕುರಬೇಟ, ಪರಶುರಾಮ ಮಕ್ಕಳಗೇರಿ, ಪರಪ್ಪ ಮಳವಾಡ, ರಾಜಪ್ಪ ಗೋಸಬಾಳ, ಅರ್ಜುನ ಚಿಕ್ಕೋಡಿ, ಶಂಕರ ಕಡಾಡಿ, ಸಹದೇವ ಹೆಬ್ಬಾಳ, ಸ್ಥಳೀಯ ರೈತರು, ಹಿರಿಯ ನಾಗರಿಕರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts