More

    ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

    ಕೊರಟಗೆರೆ: ಕಸಬಾ ಹೋಬಳಿ ವ್ಯಾಪ್ತಿಯ ಹುಲಿಕುಂಟೆಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭವಾಗದಿದ್ದಕ್ಕೆ ರೈತರು ಹಾಗೂ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

    ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ವೇದಿಕೆ ಸಜ್ಜಾಗದೇ 1 ಗಂಟೆಗೆ ಶುರುವಾಗಿದ್ದು ಉರಿಬಿಸಿಲಿನಲ್ಲಿ ಕಾದುಕುಳಿತ ಜನರನ್ನು ಕೆರಳಿಸಿತು.

    ವಿವಿಧ ಇಲಾಖೆಯಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ಕೌಂಟರ್‌ಗಳನ್ನು ತೆರೆದಿದ್ದರೂ ಸಾರ್ವಜನಿಕರು ತಹಸೀಲ್ದಾರ್ ಬಳಿಯೇ ಬಂದು ನಾವು ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗುವುದಿಲ್ಲ. ತಾಲೂಕಿಗೆ ದಣಿಗಳಾದ ನಿಮಗೆ ನೇರವಾಗಿ ನಮ್ಮ ಸಮಸ್ಯೆ ಹೇಳುತ್ತೇವೆ ಎಂದು ವೇದಿಕೆ ಮುಂಭಾಗ ಅರ್ಜಿಹಿಡಿದು ನಿಂತರು.

    ತಹಸೀಲ್ದಾರ್ ಮುನಿಶಾಮಿರೆಡ್ಡಿ ಮಾತನಾಡಿ, ಸರ್ಕಾರ ರೈತರಿಗೆ ಹಲವು ಸೌಲಭ್ಯ ನೀಡುತ್ತಿದೆ.

    ಗ್ರಾಮಗಳಲ್ಲಿ ಕೂಲಿ ಕೆಲಸಕ್ಕೆ ಉತ್ತೇಜನ ನೀಡಲಾಗುತ್ತಿದೆ. ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಕೆಲಸ ಮಾಡಿಕೊಂಡಿ ಎಂದು ಸೂಚಿಸಿದರು.

    ಪಶು ಇಲಾಖೆ ಸಹಾಯಕ ನಿರ್ದೇಶ ಸಿದ್ದನಗೌಡ ಮಾತನಾಡಿ, ರಾಸುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗಿದೆ. ರಾಸುಗಳಲ್ಲಿ ರೋಗ ಕಂಡು ಬಂದಲ್ಲಿ ನೇರವಾಗಿ ಇಲಾಖೆ ಗಮನಕ್ಕೆ ತಂದು ಔಷಧೋಪಚಾರ ಮಾಡಿಸಬೇಕು, ಕೊಟ್ಟಿಗೆಗಳನ್ನು ಸ್ವಚ್ಛವಾಗಿಡಬೇಕು ಎಂದರು.

    ಹುಲಿಕುಂಟೆ ಗ್ರಾಪಂ ಅಧ್ಯಕ್ಷೆ ಪ್ರೇಮಲತಾ ಕಾಕೀಮಲ್ಲಯ್ಯ, ಕೃಷಿ ಅಧಿಕಾರಿ ನಾಗರಾಜು, ಕಸಬಾ ಆರ್‌ಐ ಪ್ರತಾಪ್, ಪಶು ಅಧಿಕಾರಿ ಡಾ.ಸಿದ್ದನಗೌಡ, ರವಿ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು, ವಲಯ ಅರಣ್ಯಾಧಿಕಾರಿ ಸುರೇಂದ್ರ, ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್, ಸಮಾಜ ಕಲ್ಯಾಣಾಧಿಕಾರಿ ಉಮಾ ದೇವಿ, ಸಾಮಾಜಿ ಅರಣ್ಯಾಧಿಕಾರಿ ಶಿಲ್ಪಾ, ಮೀನುಗಾರಿಕಾ ಸಹಾಯಕ ನಿರ್ದೇಶಕ ಮಹೇಶ್, ತೋಟಗಾರಿಕೆ ನಾಗರಾಜು, ಅಬಕಾರಿ ನಿರೀಕ್ಷಕಿ ಶ್ರೀಲತಾ ಇದ್ದರು.

    ಹಲವರ ಗೈರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಇಲಾಖೆ ಎಇಇ, ಉಪನೋಂದಣಾಧಿಕಾರಿ, ಎತ್ತಿನಹೊಳೆ ಯೋಜನೆ, ಪೊಲೀಸ್ ಇಲಾಖೆ, ಕಾರ್ಮಿಕ ನಿರೀಕ್ಷಕರು, ಎಇಇ ಬೆಸ್ಕಾಂ ಅಧಿಕಾರಿಗಳು ಗೈರಾಗಿದ್ದರು. ರೈಲ್ವೆ, ಎತ್ತಿನಹೊಳೆ, ಕಾರ್ಮಿಕ ಇಲಾಖೆಗೆ ಅಹವಾಲು ನೀಡಲು ಬಂದಿದ್ದ ಸಾರ್ವಜನಿಕರು ಬೇಸರದಿಂದಲೇ ವಾಪಾಸಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts