More

    ಭೂ ದಾಖಲೆ ಗಣಕೀಕರಣದಿಂದ ರೈತರಿಗೆ ಅನುಕೂಲ

    ಚಿಕ್ಕಮಗಳೂರು: ಜಿಲ್ಲೆಯ ಭೂ ದಾಖಲೆಗಳನ್ನು ಡಿಜಿಟಲ್ ಗಣಕೀಕರಣ ಮಾಡುತ್ತಿರುವುದರಿಂದ ರೈತರಿಗೆ ಬೇಕಾದ ಅಗತ್ಯ ಭೂ ದಾಖಲೆಗಳು ನಿಗದಿತ ಸಮಯದಲ್ಲಿ ದೊರೆಯತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

    ನಗರದ ತಾಲೂಕು ಕಚೇರಿಯಲ್ಲಿ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಜಿಲ್ಲೆಯ ಭೂ ದಾಖಲೆಗಳ ಗಣಕೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಳೆಯ ಭೂ ದಾಖಲೆಗಳನ್ನು ಗಣಕೀಕರಣ ಮಾಡಿರುವುದರಿಂದ ಆಡಳಿತದಲ್ಲಿ ಸುಧಾರಣೆಯಾಗಲಿದೆ. ಜೊತೆಗೆ ರೈತರ ದಾಖಲೆಗಳು ಕಳೆದು ಹೋಗದೆ ಶಾಶ್ವತವಾಗಿ ಉಳಿಯಲಿವೆ ಎಂದು ಹೇಳಿದರು.
    ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ ಜಿಲ್ಲಾಡಳಿತದಿಂದ ಜಾರಿಗೊಳಿಸಿರುವ ಭೂ ಸುರಕ್ಷಾ ಯೋಜನೆಯನ್ನು ಸಚಿವರು ಉದ್ಘಾಟಿಸಿದ್ದಾರೆ. ಇದರ ಉಪಯೋಗವನ್ನು ಜಿಲ್ಲೆಯ ಜನತೆ ಪಡೆದುಕೊಳ್ಳಬೇಕು ಎಂದು ಕರೆನೀಡಿದರು.
    ತಮ್ಮ ಅಗತ್ಯ ದಾಖಲೆಗಳನ್ನು ಕೋರಿ ಅರ್ಜಿಸಲ್ಲಿಸುವ ರೈತರಿಗೆ ಭೂ ದಾಖಲೆಗಳನ್ನು ಒದಗಿಸಲು ಇದು ಪೂರಕವಾಗಿದೆ. ಜೊತೆಗೆ ಸಂಬAಧಪಟ್ಟ ಅರ್ಜಿದಾರರಿಗೆ ದಾಖಲೆ ಒದಗಿಸಿದ ಸಂಪೂರ್ಣ ಮಾಹಿತಿ ರವಾನೆಯಾಗಲಿದೆ ಎಂದು ಹೇಳಿದರು.
    ಸಾರ್ವಜನಿಕರಿಗೆ ಜನಸ್ನೇಹಿ ಆಡಳಿತ ವ್ಯವಸ್ಥೆ ಕಲ್ಪಿಸಬೇಕೆಂಬ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರ ಮೂಲಕ ಭೂ ದಾಖಲೆಗಳ ಡಿಜಿಟಲ್ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
    ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಜಿಪಂ ಸಿಇಒ ಡಾ.ಬಿ.ಗೋಪಾಲಕೃಷ್ಣ, ಎಸಿ ದಲ್ಜಿತ್ ಕುಮಾರ್, ತಹಸೀಲ್ದಾರ್ ಸುಮಂತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts