More

    ರೈತರ ಖಾತೆಗಳಿಗೆ ಪರಿಹಾರ ಹಣ ಜಮೆ

    ಕುಡಚಿ: ಬಾಗಲಕೋಟೆ- ಕುಡಚಿ ರೈಲ್ವೆ ಮಾರ್ಗಕ್ಕಾಗಿ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಸಭೆ ಗುರುವಾರ ರಾಯಬಾಗ ತಾಲೂಕಿನ ನಿಲಜಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ಜರುಗಿತು.

    ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಮಾತನಾಡಿ, ಈಗಾಗಲೆ ರೈಲ್ವೆ ಮಾರ್ಗಕ್ಕಾಗಿ ನಿಲಜಿ ಗ್ರಾಮದ 24 ಎಕರೆ, ಅಲಖನೂರದ 18, ಸುಟ್ಟಟ್ಟಿಯ 18 ಎಕರೆ ಭೂಮಿಯನ್ನು ರೈತರಿಂದ ಪಡೆದುಕೊಂಡಿದ್ದು, ಪರಿಹಾರ ಹಣವನ್ನು ರೈತರ ಖಾತೆಗಳಿಗೆ ಈಗಾಗಲೆ ಸರ್ಕಾರ ಕೊಟ್ಟಿದೆ ಎಂದರು.

    ರೈತರ ಹಿಡುವಳಿಯಲ್ಲಿ ಅರ್ಧಕ್ಕಿಂತಲೂ ಅಧಿಕ ಭೂಮಿ ರೈಲ್ವೆ ಸರ್ವೇಯಲ್ಲಿ ಹೋಗಿದ್ದರೆ, ಅಂತಹ ರೈತರಿಗೆ ಜೀವನಾಂಶವಾಗಿ 5 ಲಕ್ಷ ರೂ. ಪರಿಹಾರ ಹಣವನ್ನು ಸರ್ಕಾರ ನೀಡಲಿದೆ. ಅಂತಹವರು ಯಾರಾದರೂ ಇದ್ದರೆ ದಾಖಲೆ ಸಮೇತ ನಮಗೆ ಅರ್ಜಿ ಸಲ್ಲಿಸಿ ಎಂದು ರೈತರಲ್ಲಿ ಮನವಿ ಮಾಡಿಕೊಂಡರು.

    ರೈತರೊಬ್ಬರು ಮಾತನಾಡಿ, ನಮ್ಮ ಒಂದು ತೆಂಗಿನಮರಕ್ಕೆ 8 ನೂರು ರೂ.ಮಾತ್ರ ಪರಿಹಾರ ಕೊಟ್ಟಿದ್ದಾರೆ. ಅದೇ ಬೇರೆಯವರ ಮರಕ್ಕೆ 25 ಸಾವಿರ ರೂ. ಪರಿಹಾರ ಕೊಟ್ಟಿದ್ದಾರೆ. ಆಗಿರುವ ತಾರತಮ್ಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳು ಮಾತನಾಡಿ, ತೋಟಗಾರಿಕೆ ಇಲಾಖೆಯವರು ನೀಡಿದ ಮಾಹಿತಿಯಂತೆ ಪರಿಹಾರ ಕೊಡಲಾಗಿದೆ ಎಂದು ತಿಳಿಸಿದರು.

    ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ವಡ್ಡರ, ರೈಲ್ವೆ ಇಲಾಖೆ ಇಂಜಿನಿಯರ್ ಎಂ.ಪಿ. ನಾರಾಯಣ, ಉಪ ತಹಸೀಲ್ದಾರ್ ಐ.ಕೆ. ಹಿರೇಮಠ, ಕಂದಾಯ ನಿರೀಕ್ಷಕ ರಾಜು ದಾನೋಳಿ, ಗ್ರಾಮ ಲೆಕ್ಕಾಧಿಕಾರಿ ಎಸ್.ಜಿ. ಕಾಂಬಳೆ, ರೈತರಾದ ಮಾಯಗೌಡ ಪಾಟೀಲ, ಜೈವೀರ ಬಾಲೋಜಿ, ನಿಲಜಿ ಪಿಡಿಒ ಪಿ.ಎಸ್.ದಳವಾಯಿ ಹಾಗೂ ವಿವಿಧ ಗ್ರಾಮಗಳ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts