More

    ರೈತ, ಸೈನಿಕ ದೇಶದ ಹಿತ ರಕ್ಷಕರು

    ಅಳವಂಡಿ: ದೇಶದಲ್ಲಿ ಶಾಂತಿ ನೆಲೆಸಲು ಸೈನಿಕರು ಕಾರಣ ಹಾಗೇಯೆ ದೇಶದ ಜನತೆಗೆ ಅನ್ನ ನೀಡುವವನು ರೈತ. ಇವರಿಬ್ಬರ ಪರಿಶ್ರಮದಿಂದ ದೇಶ ಶಾಂತಿ ಸುಭಿಕ್ಷೆಯಿಂದ ಇದೆ ಎಂದು ಶ್ರೀಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು.

    ಇದನ್ನೂ ಓದಿ: ದೇಶಕ್ಕೆ ಇಂಡಿಯಾ ಒಪ್ಪಿತ, ಮರುನಾಮಕರಣ ಅಗತ್ಯವಿಲ್ಲ; ಸಿದ್ದರಾಮಯ್ಯ

    ಗ್ರಾಮದ ಶ್ರೀಸಿದ್ದೇಶ್ವರ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ಶ್ರೀಶರಣಬಸವೇಶ್ವರ ಪುರಾಣ ಅಂಗವಾಗಿ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.

    ಮನುಷ್ಯನ ಆಸೆಗಳು ಸಮುದ್ರದ ಅಲೆಗಳಿದ್ದ ಹಾಗೇ ಒಂದರ ಮೇಲೆ ಒಂದು ಬರುತ್ತವೆ ಹೋಗುತ್ತವೆ. ಆದರೆ, ಅವು ಶಾಶ್ವತವಾಗಿ ನಿಲ್ಲುವದಿಲ್ಲ ಹಾಗೇ ಜೀವನದಲ್ಲಿ ಬಡತನ ಸಿರಿತನ ಶಾಶ್ವತ ಅಲ್ಲ.

    ಡತನ ಬಂದಾಗ ಕುಗ್ಗದೇ ಸಿರಿತನ ಬಂದಾಗ ಹಿಗ್ಗದೆ ಸಮಾನ ಚಿತ್ತದಿಂದ ಜೀವನ ನಡೆಸಿ ಇದು ನಿಮ್ಮನ್ನು ಸಮಾಜದಲ್ಲಿ ಎತ್ತರದ ಸ್ಥಾನಕ್ಕೆ ಒಯ್ಯಲಿದೆ ಹಾಗೂ ಹೆಸರು ತಂದು ಕೊಡಲಿದೆ.

    ಸಂಗೀತಕ್ಕೆ ತಾಳ ಎಷ್ಟು ಮುಖ್ಯವೋ ಅದೇ ರೀತಿ ಸುಖ ಸಂಸಾರಕ್ಕೆ ತಾಳ್ಮೆ ಅಷ್ಟೆ ಮುಖ್ಯ. ತಾಳ್ಮೆ ಹಾಗೂ ಸಮಾಧಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

    ಪ್ರಮುಖರಾದ ಶೇಷಪ್ಪ ಹಕ್ಕಂಡಿ, ಹನುಮಂತಪ್ಪ ಕರಡಿ, ಶ್ರೀಶೈಲಪ್ಪ ಹಕ್ಕಂಡಿ, ಮಂಜುನಾಥಗೌಡ ಪಾಟೀಲ, ರಮೇಶ ಭಾವಿಹಳ್ಳಿ, ಬಾಳಪ್ಪ ವಾಲಿಕಾರ, ರಾಮರಡ್ಡಿ ಗದ್ದಿಕೇರಿ, ತಿಮ್ಮಮ್ಮ ಗದ್ದಿಕೇರಿ ಹಾಗೂ ನಿಂಗರಡ್ಡಿ ಗದ್ದಿಕೇರಿ ಶರಣಪ್ಪ ಪೂಜಾರ, ಬಿಲ್ಲನಗೌಡ ಮುಂಡರಗಿ, ನೀಲಪ್ಪ, ಬಸವರಾಜ ಮಡಿವಾಳರ, ಗವಿಸಿದ್ದರಡ್ಡಿ ಗದ್ದಿಕೇರಿ, ಕಲ್ಲಪ್ಪ ಎಲಿಗಾರ,
    ಛಾಯಪ್ಪ ಬಡಿಗೇರ, ಬಸವರಡ್ಡಿ ಕಾತರಕಿ, ಆನಂದ ಗದ್ದಿಕೇರಿ, ಪರಮೇಶಪ್ಪ ಶೆಟ್ಟರ, ಬಸಯ್ಯ ಶರಭಯ್ಯನಮಠ, ದೇವಪ್ಪ,
    ಬೀಮರಡ್ಡಿ, ಈಶಪ್ಪ, ಗಿರೀಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts