More

    ರೈತರಿಂದ ಖರೀದಿಸುವ ಉತ್ಪನ್ನಕ್ಕೆ ಸೆಸ್ ತೆಗೆಯದಿದ್ದರೆ ಮುಷ್ಕರ; ಸಿಂಧನೂರು ತಾಲೂಕು ವರ್ತಕರ ಕಲ್ಯಾಣ ಸಂಘ ಎಚ್ಚರಿಕೆ

    ಸಿಂಧನೂರು: ರೈತರಿಂದ ಖರೀದಿಸಿದ ಭತ್ತ ಸೇರಿ ಇತರ ಬೆಳೆಗೆ ಸಂಪೂರ್ಣ ಸೆಸ್ ತೆಗೆದು ಹಾಕಬೇಕೆಂದು ಒತ್ತಾಯಿಸಿ ತಾಲೂಕು ವರ್ತಕರ ಕಲ್ಯಾಣ ಸಂಘ ತಹಸಿಲ್ ಕಚೇರಿ ಶಿರಸ್ತೇದಾರ್ ವೀಣಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

    ಎಪಿಎಂಸಿ ಮಾರ್ಕೆಟ್‌ನಲ್ಲಿ ರೈತರಿಂದ ಖರೀದಿ ಮಾಡುವಂತೆ ಉತ್ಪನ್ನಕ್ಕೆ ಸೆಸ್ ವಿಧಿಸಿದ್ದಿರಿ. ಆದರೆ ಮಾರ್ಕೆಟ್ ಬಿಟ್ಟು ಹೊರಗಡೆ ಖರೀದಿಸಿದ ಉತ್ಪನ್ನಕ್ಕೆ ಸೆಸ್ ವಿಧಿಸಿರುವುದಿಲ್ಲ. ಎಪಿಎಂಸಿಯಲ್ಲಿ ಲೈಸೆನ್ಸ್ ಪಡೆದು ಅಂಗಡಿ ಬಾಡಿಗೆ ಕಟ್ಟಿ ನಿಯಮಾವಳಿ ಅನ್ವಯ ಖರೀದಿ ಮಾಡಿದರೆ ಸೆಸ್ ಕೊಡಬೇಕು. ಕೂಡಲೇ ವರ್ತಕರ ಬೇಡಿಕೆಗೆ ಸ್ಪಂದಿಸಿ ಸೆಸ್ ಪ್ರಮಾಣ ಸಂಪೂರ್ಣ ತೆಗೆದು ಹಾಕಲು ಕ್ರಮಕೈಗೊಳ್ಳಬೇಕು.

    ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಎಂದು ಮನವಿಯಲ್ಲಿ ಒತ್ತಾಯಿಸಿದರು. ತಾಲೂಕು ವರ್ತಕರ ಕಲ್ಯಾಣ ಸಂಘದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ, ಪ್ರಧಾನ ಕಾರ್ಯದರ್ಶಿ ಪೂಜಪ್ಪ ಪೂಜಾರಿ, ಅಮರೇಶ ಮಾಡಸಿರವಾರ, ಅಮರೇಶ ತಿಡಿಗೋಳ, ದೊಡ್ಡನಗೌಡ ಕಲ್ಲೂರು, ನಾಗರಾಜಶ್ರೇಷ್ಠಿ, ಹನುಮಂತರಾಯ, ಪ್ರಕಾಶ, ಸಿದ್ದರಾಮೇಶ ಮನ್ನಾಪುರ, ಅಯ್ಯನಗೌಡ ವಿರೂಪಾಪುರ, ಮಲ್ಲಿಕಾರ್ಜುನ ಮುದ್ದಾಪುರ, ಮಲ್ಲಿಕಾರ್ಜುನ ಕಲ್ಲೂರು, ರಮೇಶ ಮಾಡಸಿರವಾರ, ಮಲ್ಲಿಕಾರ್ಜುನ ಗೋಮರ್ಸಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts