More

    ಖುಷ್ಕಿ ಪ್ರದೇಶದಲ್ಲಿ ನೀರಾವರಿ ಯೋಜನೆ ಜಾರಿಗೊಳಿಸಿ

    ಗಂಗಾವತಿ: ಜಿಲ್ಲೆಯ ಖುಷ್ಕಿ ಪ್ರದೇಶದಲ್ಲಿ ನೀರಾವರಿ ಯೋಜನೆ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಯಲಬುರ್ಗಾ ತಾಲೂಕಿನ ಯಲಬುಣಚಿಯ ಸಮಾನ ಮನಸ್ಕ ರೈತರ ತಂಡ ದೆಹಲಿಯ ಸಂಸತ್ ಭವನದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಅಂಜನಾದ್ರಿ ಬೆಟ್ಟದಿಂದ ಬುಧವಾರ ಚಾಲನೆ ನೀಡಲಾಯಿತು.

    ಬೆಟ್ಟದಿಂದ 10 ರೈತರು ಗಂಗಾವತಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಪಾದಯಾತ್ರೆ ಕೈಗೊಂಡರು. ತಂಡದ ನೇತೃತ್ವ ವಹಿಸಿರುವ ಕುಷ್ಟಗಿಯ ರೈತ ನಬಿಸಾಬ್ ಹೂಲಗೇರಿ ಮಾತನಾಡಿ, ಸಂಸತ್ ಭವನ ರೈತರಿಗೆ ದೇವಾಲಯವಿದ್ದಂತೆ. ಈ ಹಿನ್ನೆಲೆಯಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

    ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಕೊಪ್ಪಳ ಭಾಗದ ಖುಷ್ಕಿ ಪ್ರದೇಶದಲ್ಲಿ ಆಲಮಟ್ಟಿ ಜಲಾಶಯದಿಂದ ನೀರಾವರಿ ಯೋಜನೆ ರೂಪಿಸಬೇಕು. ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕನಸಿನಂತೆ ನದಿ ಜೋಡಣೆ ಯೋಜನೆ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಮೂಲಕ 2 ತಿಂಗಳಲ್ಲಿ ದೆಹಲಿ ತಲುಪುವ ವಿಶ್ವಾಸವಿದೆ ಎಂದು ನಬಿಸಾಬ್ ಹೂಲಗೇರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts