More

    ರೈತಮಿತ್ರ ನೇಮಕ, ಅನುವುಗಾರರನ್ನು ಪರಿಗಣಿಸಿ

    ರಾಮದುರ್ಗ: ಕೃಷಿ ಡಿಪ್ಲೊಮಾ ಪದವೀಧರರನ್ನು ಕೃಷಿ ಇಲಾಖೆಯಲ್ಲಿ ರೈತ ಮಿತ್ರರಾಗಿ ನೇಮಕ ಮಾಡಲು ಮುಂದಾಗಿದ್ದು, ರೈತ ಅನುವುಗಾರರನ್ನು ಆ ಹುದ್ದೆಗೆ ಪರಿಗಣಿಸಿ, ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಸ್ಥಳೀಯ ರೈತ ಅನುವುಗಾರರ ಸಂಘದ ಸದಸ್ಯರು ಶಾಸಕ ಮಹಾದೇವಪ್ಪ ಯಾದವಾಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ರೈತರು ಮತ್ತು ಇಲಾಖೆಯ ಕೊಂಡಿಯಾಗಿ ಕೆಲಸ ಮಾಡುತ್ತಿರುವ ರೈತ ಅನುವುಗಾರರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಆದರೆ, ಕೃಷಿ ಸಚಿವರು ಅವರನ್ನು ಬಿಟ್ಟು ಕೃಷಿ ಡಿಪ್ಲೊಮಾ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಮಾರ್ಗಸೂಚಿ ರಚಿಸಿದ್ದಾರೆ. ಇದರಿಂದ ರೈತ ಅನುವುಗಾರರು ಕೆಲಸವಿಲ್ಲದೆ ಸಂಕಷ್ಟ ಎದುರಿಸಬೇಕಾಗುತ್ತದೆ. ರೈತ ಮಿತ್ರ ಹುದ್ದೆಗೆ ರೈತರ ಮಕ್ಕಳಾದ ರೈತ ಅನುವುಗಾರರನ್ನೇ ನೇಮಕ ಮಾಡಿಕೊಂಡು ಕೆಲಸವಿಲ್ಲದೆ ಸಂಕಷ್ಟದಲ್ಲಿರುವವರ ನೆರವಿಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಅವರು ಮನವಿ ಮೂಲಕ ಒತ್ತಾಯಿಸಿದು.

    ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ರೈತಮಿತ್ರ ನೇಮಕದ ಬಗ್ಗೆ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರೊಂದಿಗೆ ಚರ್ಚಿಸಿ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಸಂಘದ ಜಿಲ್ಲಾಧ್ಯಕ್ಷ ಎಲ್.ಜಿ. ಕುಂಬಾರ, ತಾಲೂಕಾಧ್ಯಕ್ಷ ಸಿದ್ದಪ್ಪ ಮಕ್ಕನ್ನವರ, ತಾಲೂಕಾ ಕಾರ್ಯದರ್ಶಿ ಪಿ.ವೈ. ಬಿಜಲಿ, ಸಂಘಟನೆಯ ಸದಸ್ಯರಾದ ಆರ್.ಎಂ. ಚಿಕ್ಕಮಠ, ಮಲ್ಲಿಕಾರ್ಜುನ ಹುಬ್ಬಳ್ಳಿ, ಸಚಿನ ನಿಂಗಣ್ಣವರ, ಉಮೇಶ ಕೊಣ್ಣನವರ, ಎಲ್.ಆರ್. ದಂಡಿನ, ಐ.ಎಂ. ಚಿಗದಮ್ಮನವರ, ಮುದಿರಯ್ಯ ಪೂಜೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts