More

    ನವಾಮೃತ ಅಕ್ಕಿ ಕೆಜಿಗೆ 100 ರೂ.!

    ತಾಳಗುಪ್ಪ: ರೈತ ತಾನು ಬೆಳೆದ ಬೆಳೆಗೆ ತನ್ನದೆ ಮಾರುಕಟ್ಟೆ ಕಂಡುಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಬೆಲೆಯೂ ಸಿಗುತ್ತದೆ ಎನ್ನುವ ಮಾತಿನೊಂದಿಗೆ ತಾಳಗುಪ್ಪ ಸಮೀಪದ ಕೃಷಿಕ ಮುಸವಳ್ಳಿ ನಾರಾಯಣ ಭಟ್ ತಮ್ಮ ಯಶೋಗಾಥೆಯನ್ನು ಬಿಚ್ಚಿಡುತ್ತಾರೆ.

    ಹೌದು, ಮಲೆನಾಡಿನಲ್ಲಿ ಭತ್ತ ಬೆಳೆದು ಆರ್ಥಿಕ ಯಶಸ್ಸು ಕಾಣುವುದು ಕಷ್ಟ. ಆದರೆ ನಾರಾಯಣ ಭಟ್ಟರ ಮಾತಿನಲ್ಲಿ ಇದು ಅಸಾಧ್ಯವಲ್ಲ. ಎರಡೂವರೆ ಎಕರೆ ಗದ್ದೆಯಲ್ಲಿ ಭತ್ತ ಬೆಳೆಯುವ ಇವರು ಅಕ್ಕಿಗೆ ತಮ್ಮದೇ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಅಕ್ಕಿ ಬೆಲೆ ಕೆಜಿಯೊಂದಕ್ಕೆ 100 ರೂಪಾಯಿ. ಬೆಲೆ ಕೇಳಿ ಹೌಹಾರದಿರಿ, ಕಾರಣ ಇವರು ಬೆಳೆಯುವ ಅಕ್ಕಿಗೆ ಬೇಡಿಕೆ ಹಾಗಿದೆ. ಹಾಗಂತ ಇವರೇನೂ ಎಲ್ಲಿಯದೋ ಅಕ್ಕಿ ಬೆಳೆಯುತ್ತಿಲ್ಲ. ಸ್ಥಳೀಯ ತಳಿ ಭತ್ತ. ಆದರೆ ಬೆಳೆಯá-ವ ರೀತಿ ಸಂಪೂರ್ಣ ಸಾವಯವ ಹಾಗೂ ಇವರೇ ಕಂಡುಕೊಂಡ ಗ್ರಾಹಕ ಸಮá-ದಾಯ ಇವರ ಯಶಸ್ಸಿನ ಗುಟ್ಟು.

    ಹಳಗ ಮತ್ತು ಹಶಿಡಿ ತಳಿಯನ್ನು 25:75 ಅನುಪಾತದಲ್ಲಿ ಬೀಜದ ಭತ್ತ ಬೆರೆಸಿ ನಾಟಿ ಮಾಡುತ್ತಾರೆ. ಭತ್ತ ತಳಿಯಲ್ಲಿಯೇ ಮಿಶ್ರಣವಾಗುವುದರಿಂದ ಅಕ್ಕಿ ಕೆಂಪು,ಬಿಳಿ ಬಣ್ಣದ್ದಾಗಿರುತ್ತದೆ. ಊಟಕ್ಕೆ ಉತ್ತಮ ಉತ್ತವಾಗಿರá-ವ ಈ ಅಕ್ಕಿ ಬಣ್ಣ, ರುಚಿ, ಶಕ್ತಿಯನ್ನು ಒಳಗೊಂಡಿದೆ. ಇಪ್ಪತ್ತು ದೇಸಿ ತಳಿಯ ಆಕಳು ಹೊಂದಿರುವ ಇವರು ಭತ್ತದ ಗದ್ದೆಗೆ ಗೋಮೂತ್ರ ಗೊಬ್ಬರವಾಗಿಯೂ, ನವಾಮೃತವನ್ನು ರಸಸಾರವಾಗಿಯೂ ಬಳಸುತ್ತಾರೆ. ಗದ್ದೆಗೆ ಔಷಧ ಹೊಡೆಯುವ ಪ್ರಮೇಯ ಇಪ್ಪತ್ತು ವರ್ಷದಿಂದ ಬಂದಿಲ್ಲ ಎಂಬುದು ಅವರ ಅನುಭವ. ದೇಸಿ ತಳಿಯ ಗೋಮೂತ್ರ ಹಾಗೂ ಉತ್ಪನ್ನದಿಂದ ನವಾಮೃತ ತಯಾರಿಸುವ ಇವರು ಅದರ ಮಾರಾಟ ಮಾಡಿ ಆಕಳು ನಿರ್ವಹಣಾ ವೆಚ್ಚ ಭರಿಸಿಕೊಳ್ಳುತ್ತಾರೆ.

    ಸಂಪೂರ್ಣ ಸ್ವಾವಲಂಬಿ ಕೃಷಿಕ ನಾರಾಯಣ ಭಟ್ಟರ ಅಕ್ಕಿ ಲೆಕ್ಕಾಚಾರ ಅನುಸರಿಸಲು ವಿಶಿಷ್ಟವಾಗಿದೆ. ಎರಡೂವರೆ ಎಕರೆ ಜಮೀನಿನಲ್ಲಿ 21 ಕ್ವಿಂಟಾಲ್ ಬೆಳೆಯುತ್ತಾರೆ. 10 ಕ್ವಿಂಟಾಲ್ ಕೆಜಿಗೆ ನೂರು ರೂ.ನಂತೆ ಮಾರಾಟ ಮಾಡುತ್ತಾರೆ. ಐದು ಕ್ವಿಂಟಾಲ್ ಪ್ರತಿ ವರ್ಷ ದೇವಸ್ಥಾನ, ಮಠ, ಊರಿನ ಸಾಮೂಹಿಕ ಕಾರ್ಯಕ್ರಮಕ್ಕೆ ದಾನ ಮಾಡುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts