More

    ರೈತ, ಕಾರ್ಮಿಕ ವಿರೋಧಿ ನೀತಿಗೆ ಖಂಡನೆ

    ರಾಮದುರ್ಗ: ಉಭಯ ಸರ್ಕಾರಗಳ ರೈತ-ಕಾರ್ಮಿಕ ವಿರೋಧಿ ನೀತಿ, ಕಾರ್ಮಿಕ ಕಾನೂನು ತಿದ್ದುಪಡಿ ಹಾಗೂ ಖಾಸಗೀಕರಣ ವಿರೋಧಿಸಿ ಗುರುವಾರ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

    ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಜೈನೆಖಾನ್ ಮಾತನಾಡಿ, ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಶಾ, ಬಿಸಿ ಊಟ ತಯಾರಕರು, ಅಂಗನವಾಡಿ ನೌಕರರು ಇತ್ತೀಚೆಗೆ ಜಾರಿಗೆ ಬಂದಿರುವ ಕೇಂದ್ರ ಸರ್ಕಾರದ ಹೊಸ ಶಿಕ್ಷಣದ ನೀತಿಯಿಂದ ಕೆಲಸ ಕಳೆದಕೊಳ್ಳುವ ಹಂತದಲ್ಲಿದ್ದಾರೆ. ಹಣವುಳ್ಳವರಿಗೆ ಮಾತ್ರ ಶಿಕ್ಷಣ ಎಂಬಂತಾಗಿದೆ ಎಂದು ಆರೋಪಿಸಿದರು.

    ಇವತ್ತು ದೇಶದಲ್ಲಿರುವ ಸಾರ್ವಜನಿಕ ವಲಯಗಳಾದ ಬಿಎಸ್‌ಎನ್‌ಎಲ್, ರೈಲ್ವೆ, ರಕ್ಷಣಾ, ಬ್ಯಾಂಕ್ ಹೀಗೆ ಹತ್ತು ಹಲವಾರು ವಲಯಗಳನ್ನು ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದೆ. 32 ಬ್ಯಾಂಕ್‌ಗಳನ್ನು 12 ಬ್ಯಾಂಕ್‌ಗಳನ್ನಾಗಿ ಪರಿವರ್ತಿಸಿ ಬಂಡವಾಳದಾರರ ಸಾಲ ಮನ್ನಾ ಮಾಡಲು ಹೊರಟಿದೆ. 40 ಕೋಟಿ ಪಾಲಸಿದಾರರನ್ನು ಹೊಂದಿದ, 32 ಲಕ್ಷ ಕೋಟಿ ರೂ. ಆಸ್ತಿ ಹೊಂದಿದ ಎಲ್‌ಐಸಿ ಮಾರಾಟ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಎರಡನೇ ಅವಧಿಗೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ದೇಶಕ್ಕೆ ಅನ್ನ ನೀಡುತ್ತಿರುವ ರೈತರನ್ನು ಈ ದೇಶಕ್ಕೆ ಸಂಪತ್ತು ಸೃಷ್ಟಿ ಮಾಡುತ್ತಿರುವ ಕಾರ್ಮಿಕರನ್ನು ಕಡೆಗಣಿಸಿದೆ. ಕರೊನಾ ನೆಪದಲ್ಲಿ ತಮಗೆ ಬೇಕಾದಂತೆ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಪಾಸ್ ಮಾಡಿಕೊಂಡು ದುಡಿಯುವ ಜನತೆ ಹಾಗೂ ರೈತರನ್ನು ಕಂಗಾಲು ಮಾಡಿದೆ ಎಂದು ದೂರಿದರು.

    ಸಿಐಟಿಯು ಜಿಲ್ಲಾಧ್ಯಕ್ಷ ವಿ.ಪಿ.ಕುಲಕರ್ಣಿ, ಕಟ್ಟಡ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ನಾಗಪ್ಪ ಸಂಗೊಳ್ಳಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸರಸ್ವತಿ ಮಾಳಶೆಟ್ಟಿ, ಬಿಸಿ ಊಟ ನೌಕರರ ಸಂಘದ ರುಕ್ಮವ್ವ ಬಿಜ್ಜಣ್ಣವರ, ಪಂಚಾಯಿತಿ ನೌಕರರ ಸಂಘದ ಕಾರ್ಯದರ್ಶಿ ವೀರಭದ್ರ ಕಂಪ್ಲಿ, ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಕೃಷ್ಣಾ ಹೊಸೂರ, ದುಂಡಯ್ಯ ದಳವಾಯಿ, ಮಲ್ಲಪ್ಪ ಆಲೂರ, ಗಿರಿಯಪ್ಪ ಬಂಡಿವಡ್ಡರ, ಮಾರುತಿ ಮುದಗುರಿ, ತಾಹೀರಾ ಮಕಾಂದಾರ, ಶಕುಂತಲಾ, ಕಸ್ತೂರಿ ಬಟಕುರ್ಕಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts