More

    ರೈತ ಸ್ನೇಹಿ ಜಾನುವಾರುಗಳ ಸಂಖ್ಯೆ ಇಳಿಮುಖ

    ಹೂವಿನಹಡಗಲಿ: ಪ್ರಸ್ತುತ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿದ್ದು ರೈತರು ಅವುಗಳ ಸಂಖ್ಯೆ ಹೆಚ್ಚಿಸಲು ಮುಂದಾಗಬೇಕು ಎಂದು ಹಿರೇಮಲ್ಲನಕೆರಿ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.

    ತಾಲೂಕಿನ ಕೋಟ್ನೆಕಲ್ ಶ್ರೀ ಶಂಕರಲಿಂಗೇಶ್ವರ ಸ್ವಾಮಿಯ 16ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಜಾನುವಾರುಗಳ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

    ಇದನ್ನು ಓದಿ: ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಿ

    ರೈತರು ಯಾಂತ್ರಿಕ ಬದುಕಿಗೆ ಹೊಂದಿಕೊಳ್ಳುತ್ತಿರುವುದರಿಂದ ರೈತ ಸ್ನೇಹಿ ಜಾನುವಾರುಗಳು ಕೃಷಿ ಚಟುವಟಿಕೆಯಿಂದ ದೂರವಾಗುತ್ತಿವೆ. ರೈತನೊಂದಿಗೆ ದುಡಿದು ರೈತ ಸ್ನೇಹಿಯಾಗಿದ್ದ ಜಾನುವಾರುಗಳ ಸಂತತಿ ಕಡಿಮೆಯಾಗುತ್ತಾ ಬಂದಿದೆ. ಪುರಾತನ ಕಾಲದಿಂದಲೂ ಪ್ರಸ್ತುತ ದಿನಗಳಲ್ಲಿ ಜಾನುವಾರುಗಳು ರೈತರ ಕೃಷಿ ಚಟುವಟಿಕೆಗಳಲ್ಲಿ ಜೊತೆಯಾಗಿ ದುಡಿಯುತ್ತಿದ್ದವು. ರೈತಸ್ನೇಹಿ ಜಾನುವಾರುಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಭಾಗದ ರೈತರು ಜಾನುವಾರುಗಳ ಜಾತ್ರೆಯನ್ನು ಆಚರಿಸುತ್ತಿರುವುದು ವಿಶೇಷವಾಗಿದೆ ಎಂದರು.

    ಪ್ರದರ್ಶನ:

    ಜಾನುವಾರು ಜಾತ್ರೆಯಲ್ಲಿ ಗದಗ, ಶಿರಾಳಕೊಪ್ಪ, ಹಾವೇರಿ, ಕೊಪ್ಪಳ, ಲಕ್ಷ್ಮೇಶ್ವರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಜಾನುವಾರುಗಳು ಜಾತ್ರೆಯಲ್ಲಿ ಪ್ರದರ್ಶನಗೊಂಡವು. ಶಂಕರಲಿಂಗೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಓಲಿ ಈಶಪ್ಪ, ಸದಸ್ಯರಾದ ಧನಂಜಯ ರೆಡ್ಡಿ, ಗಡ್ಡಿ ಚನ್ನಬಸಪ್ಪ, ಕೆ.ಸತ್ಯಪ್ಪ, ಮರೇಗೌಡ, ಪ್ರಕಾಶ ಗೌಡ, ಹೊಟ್ಟಿ ಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts