More

    VIDEO| ಸರ್ಕಾರಕ್ಕೆ ರೈತನ ಸಮಸ್ಯೆಗಳನ್ನು ತೆರೆದಿಟ್ಟ ಮಹಿಳೆಗೆ ಕರೆ ಮಾಡಿ ಭರವಸೆ ತುಂಬಿಸಿದ ಸಿಎಂ ಬಿಎಸ್​ವೈ

    ಬೆಂಗಳೂರು: ಬೆಳೆ ಬೆಳೆಯುವುರಿಂದ ಹಿಡಿದು ಅದನ್ನು ಮಾರಾಟ ಮಾಡುವವರೆಗೂ ರೈತ ಎದುರಿಸುವ ಸಮಸ್ಯೆಯನ್ನು ವಿವರಿಸಿದ ರೈತನ ಪತ್ನಿಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಧೈರ್ಯ ತುಂಬುವ ಮೂಲಕ ರೈತ ಪರ ಸಿಎಂ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾಟನಾಯಕನ ಹಳ್ಳಿಯ ರೈತನ ಪತ್ನಿಯೊಬ್ಬರು ತಾವು ಬೆಳೆದಂತಹ ಈರುಳ್ಳಿ ಮಾರಾಟಕ್ಕೆ ಪರದಾಡುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಸರ್ಕಾರಕ್ಕೆ ತಲುಪುವಷ್ಟು ಶೇರ್​ ಮಾಡಲು ಕನ್ನಡಿಗರ ಬಳಿ ಮನವಿಯನ್ನು ಮಾಡಿಕೊಂಡಿದ್ದರು. ಇದೀಗ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಿಎಂ ಬಿಎಸ್​ವೈ ಅವರು ಮಹಿಳೆಗೆ ದೂರವಾಣಿ ಕರೆ ಮಾಡಿ ಭರವಸೆ ನಿಡಿದ್ದು, ಮಹಿಳೆ ಸಿಎಂಗೆ ಧನ್ಯವಾದ ತಿಳಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಸರ್ಕಾರಕ್ಕೆ ನೇರ ಪ್ರಶ್ನೆ ಹಾಕಿರುವ ಮಹಿಳೆ, ನಾನೋರ್ವ ರೈತನ ಪತ್ನಿಯಾಗಿ ಮಾತನಾಡುತ್ತಿದ್ದೇನೆ. ಕರೊನಾ ಲಾಕ್​ಡೌನ್​ ಆಗಿದೆ. ಇಡೀ ದೇಶವೇ ಸ್ತಬ್ಧವಾಗಿದೆ. ರಾಷ್ಟ್ರಕ್ಕೆ ನಷ್ಟವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ರೈತನಿಗೆ ಲಾಕ್​ಡೌನ್​ ಇಲ್ಲ. ದೇಶ ಆಳುವ ಪ್ರಧಾನಿಯಿಂದ ಹಿಡಿದು ಗಡಿ ಕಾಯುವ ಯೋಧ ಮತ್ತು ಪ್ರಾಣವನ್ನು ಉಳಿಸುವ ವೈದ್ಯರವರೆಗೂ ರೈತ ಬೆಳೆದಿರುವ ಅನ್ನವನ್ನೇ ತಿನ್ನಬೇಕಲ್ವ? ಹೀಗಾಗಿ ರೈತ ಕೆಲಸ ಮಾಡುತ್ತಿದ್ದಾನೆ. ಆತ ಬೆಳೆಯುವುದನ್ನು ನಿಲ್ಲಿಸಿಲ್ಲ. ಏನೇ ಆದರೂ ಸಹ ರೈತ ಬೆಳೆಯುವುದನ್ನು ನಿಲ್ಲಿಸಲ್ಲ.

    ನಮ್ಮ ಹಳ್ಳಿಯಲ್ಲಿ 500 ರಿಂದ 600 ಮಂದಿ ಈರುಳ್ಳಿಯನ್ನು ಬೆಳೆದಿದ್ದಾರೆ. ಆದರೆ, ಒಂದು ಪ್ಯಾಕೆಟ್​ ಈರುಳ್ಳಿಗೆ 250 ರೂ. ಕೇಳ್ತಿದ್ದಾರೆ. ಯಶವಂತಪುರ ಮಾರುಕಟ್ಟೆಗೆ ಕೊಂಡೊಯ್ದರು ಸಹ 300 ರಿಂದ 400 ರೂ. ಕೇಳುತ್ತಿದ್ದಾರೆ. ಏಕೆ ಕಡಿಮೆ ಎಂದು ಕೇಳಿದರೆ, ಆಮದು ಮತ್ತು ರಫ್ತು ಇಲ್ಲ. ಹೀಗಾಗಿ ದರ ಇಲ್ಲ ಎಂದು ಹೇಳುತ್ತಾರೆ. ಬರೀ ಒಂದು ಚೀಲಕ್ಕೆ 45 ರೂ. ಆಗುತ್ತದೆ. ಒಂದು ಚೀಲ ಈರುಳ್ಳಿ ಕೊಯ್ಯಲು 35 ರೂ. ಕೂಲಿ ಇದೆ. ಒಂದು ಕೆ.ಜಿ ಈರುಳ್ಳಿ ಬೀಜ 1400 ರೂ. ಇದೆ. ಅದಕ್ಕೆ ಗೊಬ್ಬರ 5 ರಿಂದ 6 ಸಾವಿರ ರೂ. ಇದೆ. ಈ ನಡುವೆ 3 ಸಲ ಕಳೆ ಕೀಳಿಸಬೇಕಾಗಿದ್ದು, ಒಂದು ಆಳಿಗೆ 200 ರೂ. ಕೂಲಿ ಇದೆ. ಅಲ್ಲದೆ, ಪ್ರತಿಯೊಂದಕ್ಕೂ ಕೂಲಿ ಕೊಡಬೇಕಾಗಿದೆ. ಒಂದು ಚೀಲ ಈರುಳ್ಳಿ ಬೆಳೆಯಲು 200 ರಿಂದ 300 ರೂ. ಖರ್ಚು ಬೀಳುತ್ತಿದೆ. ಆದರೆ ತೆಗೆದುಕೊಳ್ಳಲು 250 ರೂ. ಕೇಳುತ್ತಿದ್ದಾರೆ. ಸ್ವಲ ದಿನ ಕಾಯೋಣ ಬೆಲೆ ಸಿಗಬಹುದೆಂದರೆ, ಈರುಳ್ಳಿ ಕೊಳೆಯುತ್ತಿವೆ.

    ಇಷ್ಟೆಲ್ಲಾ ಆದರೆ, ರೈತ ಆತ್ಮಹತ್ಯೆ ಮಾಡಿಕೊಳ್ಳದೇ ಮತ್ತೇನು ಮಾಡುತ್ತಾನೆ. ಸಾಲಾ ಮಡಿ ಬೆಳೆ ಮಾಡಿರುತ್ತೇವೆ. ಬೆಲೆ ಸಿಗುತ್ತದೆ ಎಂದು ವಿಶ್ವಾಸವು ಇರುತ್ತದೆ. ಆದರೆ, ಇವತ್ತು ಈರುಳ್ಳಿ ಕೇಳುವವರೇ ಗತಿಯಿಲ್ಲ. ಲಾಕ್​ಡೌನ್​ ಆಗಿದೆ ಸರಿ. ಆದರೆ, ರೈತರಿಗೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತೀರಾ, ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇವೆ. ನೀವು ನಮಗೆ ಸಹಕಾರ ಕೊಡುತ್ತಿದ್ದೀರಾ, ಹಾಗಾದ್ರೆ ಇಲ್ಲಿ ತಪ್ಪು ಯಾರದ್ದು? ರೈತ ಬೆಳೆಯೋದನ್ನು ನಿಲ್ಲಿಸಿಲ್ಲ. ತಿನ್ನೋದನ್ನು ಯಾರು ನಿಲ್ಲಿಸಿಲ್ಲ. ಲಾಕ್​ಡೌನ್​ ಆಗಿದೆ ಎಂದು ಯಾರೂ ಉಪವಾಸ ಇಲ್ಲ. ಕೊಂಡುಕೊಳ್ಳುವವರು ಇದ್ದಾರೆ. ಬೆಳೆಯುವವರು ಇದ್ದಾರೆ. ಹಾಗಾದ್ರೆ ಎಲ್ಲಿ ತಪ್ಪಾಗುತ್ತಿದೆ? ನಾವು ಬೆಳೆದಂತಾ ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ದು ಬೆಲೆ ಕೊಡಿಸುವವರು ಯಾರು? ನಿಮ್ಮದಲ್ವಾ(ಸರ್ಕಾರ)? ಏನು ಮಾಡುತ್ತೀರೋ ಗೊತ್ತಿಲ್ಲ. ನಮ್ಮ ಜಿಲ್ಲೆಯಲ್ಲಿ ತುಂಬಾ ಈರುಳ್ಳಿ ಬೆಳೆದಿದ್ದಾರೆ. ಅದನ್ನು ಸಂಗ್ರಹ ಮಾಡಲು ಸಾಧ್ಯವಿಲ್ಲ. ಆದಷ್ಟು ನಮ್ಮ ರೈತರ ಕಷ್ಟ ಕೇಳಿ, ನಮಗೆ ಸಹಾಕಾರ ನೀಡಿ ಎಂದು ಸಿಎಂ ಬಿಎಸ್​ವೈ ಅವರಲ್ಲಿ ಕೇಳಿಕೊಂಡು ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಕೊನೆಗೆ ನಮ್ಮ ಬಂಡವಾಳ ಬಂದರೆ ಸಾಕು ನಮ್ಮ ಸಾಲ ತೀರಿಸಿಕೊಳ್ಳುತ್ತೇವೆ ಎಂದು ಮಹಿಳೆ ಹೇಳಿದ್ದಾರೆ.

    ಸಿಎಂ ಬಿಎಸ್​ವೈ ನೆರವು
    ಮಹಿಳೆಯ ಮನವಿ ವಿಡಿಯೋ ನೋಡಿರುವ ಸಿಎಂ ಬಿಎಸ್​ವೈ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಕ್ವಿಂಟಾಲ್​ಗೆ 300-400 ರೂ. ಕೇಳ್ತಿದ್ದಾರಾ? ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಏನು ವ್ಯವಸ್ಥೆ ಮಾಡಬೇಕು ಅದನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದು, ಸಂಕಷ್ಟ ಸಮಯದಲ್ಲಿ ಸ್ಪಂದಿಸಿದ ಸಿಎಂಗೆ ಮಹಿಳೆ ಧನ್ಯವಾದ ತಿಳಿಸಿದ್ದಾರೆ.

    ಸರ್ಕಾರಕ್ಕೆ ರೈತನ ಸಮಸ್ಯೆಗಳನ್ನು ತೆರೆದಿಟ್ಟ ದಿಟ್ಟ ಮಹಿಳೆಗೆ ಕರೆ ಮಾಡಿ ಭರವಸೆ ತುಂಬಿಸಿದ ಸಿಎಂ ಬಿಎಸ್​ವೈಬೆಂಗಳೂರು: ಬೆಳೆ ಬೆಳೆಯುವುರಿಂದ ಹಿಡಿದು ಅದನ್ನು ಮಾರಾಟ ಮಾಡುವವರೆಗೂ ರೈತ ಎದುರಿಸುವ ಸಮಸ್ಯೆಯನ್ನು ವಿವರಿಸಿದ ರೈತನ ಪತ್ನಿಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಧೈರ್ಯ ತುಂಬುವ ಮೂಲಕ ರೈತ ಪರ ಸಿಎಂ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಏಪ್ರಿಲ್ 28, 2020

    ಎದ್ದೆನೋ ಬಿದ್ದೆನೋ ಎಂದು ಆಸ್ಪತ್ರೆಯಿಂದ ಓಡಿ ಹೋದ ಸೋಂಕಿತ: ಮುಂದೇನಾಯ್ತು?

    ಸಮಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts