More

    ದನ ಮೇಯಿಸಲು ಹೋಗಿದ್ದ ಮೈಸೂರಿನ ರೈತ ಹುಲಿ ದಾಳಿಗೆ ಬಲಿ

    ಮೈಸೂರು: ಮೈಸೂರಿನ ಜನರಿಗೆ ಹುಲಿ ಕಾಟ ಹೆಚ್ಚಾಗಿದ್ದು, ದನ ಮೇಕೆ, ಮನುಷ್ಯರ ಮೇಲೆ ಹುಲಿ ದಾಳಿ ನಡೆಯುತ್ತಿದೆ. ಇದೀಗ ದನ ಮೇಯಿಸಲು ಹೋಗಿದ್ದ ರೈತನೊಬ್ಬ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ಬಿ.ಮಟಕೆರೆ-ಹೊಸಕೋಟೆ ರಸ್ತೆಯಲ್ಲಿ ನಡೆದಿದೆ.

    ಬಾಲಾಜಿ ನಾಯಕ್ (42) ಮೃತ. ಹುಲಿ ದಾಳಿಗೆ ಬಲಿಯಾಗಿದ್ದಾರೆ. ಹುಲಿಗಾಗಿ ಅರಣ್ಯ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದೆ.

    ನಡೆದಿದ್ದೇನು?: ಬಾಲಾಜಿ ನಾಯಕ್ ನಿನ್ನೆ ಬಿ.ಮಟಕೆರೆ-ಹೊಸಕೋಟೆ ರಸ್ತೆಯಲ್ಲಿ ನಿನ್ನೆ ದನ ಮೇಯಿಸಲು ತೆರಳಿದ್ದನು. ಈ ವೇಳೆ ಹುಲಿ ದನಗಳ ಮೇಲೆ ದಾಳಿ ಮಾಡಿತ್ತು. ಆಗ ದನಗಳು ಹುಲಿಗೆ ಸಿಗದೆ ಓಡಿದವು. ದನಗಳು ಸಿಗದ ಹಿನ್ನೆಲೆ ಬಾಲಾಜಿ ಮೇಲೆ ಹುಲಿ ದಾಳಿ ನಡೆಸಿದೆ. ಅಕ್ಕ ಪಕ್ಕದ ಜಮೀನಿಲ್ಲಿದ್ದವರು ಕೂಗಾಡಿದ್ದಾರೆ. ಶಬ್ದ ಕೇಳಿ ಮೃತದೇಹ ಬಿಟ್ಟು ಹುಲಿ ಓಡಿ ಹೋಗಿತ್ತು.

    ಹುಲಿಯು ಬಾಲಾಜಿ ನಾಯಕ್​ನ ದೇಹದ ಕೆಲ ಭಾಗವನ್ನು ತಿಂದು ಹಾಕಿದೆ. ಹುಲಿ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ತಹಶೀಲ್ದಾರ್ ಪರಶಿವಮೂರ್ತಿ, ಪಿಎಸ್‌ಐ ನಂದೀಶ್‌ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

    ಮತ್ತೆ ಅದೇ ಸ್ಥಳಕ್ಕೆ ಹುಲಿ ಬರುವ ಸಾಧ್ಯತೆ ಹಿನ್ನೆಲೆ ಅರಣ್ಯ ಇಲಾಖೆ ಅಲರ್ಟ್ ಆಗಿದೆ. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದೆ. 30 ಕ್ಕು ಹೆಚ್ಚು ಕ್ಯಾಮರಾ ಟ್ರಾಪ್ ಗಳನ್ಜು ಅಳವಡಿಸಿ ಹುಲಿ ಜಾಡು ಹಿಡಿಯಲು ಮುಂದಾಗಿದ್ದಾರೆ. ಮೈಸೂರು ಅರಣ್ಯ ಅಧಿಕಾರಿಗಳಿಗೆ ಹುಲಿ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಇತ್ತೀಚೆಗೆ ಜಿಲ್ಲೆಯ ನಂಜನಗೂಡು ತಾಲೂಕಿನ‌ ಮಹದೇವನಗರದಲ್ಲಿ ಜಾನುವಾರು ಮೇಲೆ ದಾಳಿ ಮಾಡಿ ರಕ್ಷಣೆಗೆ ಹೋದ ವೀರಭದ್ರ ಬೋವಿ ಎಂಬ ರೈತನ ಮೇಲೆ ಹುಲಿ ದಾಳಿ ನಡೆಸಿತ್ತು. 

    ಬಸ್ ಡ್ರೈವ್ ಮಾಡುವಾಗಲೇ ಚಾಲಕ ಹೃದಯಾಘಾತದಿಂದ ಸಾವು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts