More

    ಲಕ್ಷಾಂತರ ರೂ. ಸಾಲ, ಮಳೆಯಿಂದ ಬೆಳೆ ನಾಶ… ಸಾವಿಗೆ ಶರಣಾದ ರೈತ

    ಹಾವೇರಿ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಗಳಿಂದಾಗಿ ಸಾವಿರಾರು ರೈತರು ಕಟಾವಿಗೆ ನಿಂತ ಫಸಲನ್ನು ಕಳೆದುಕೊಂಡಿದ್ದಾರೆ. ಇದು ಮೊದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ರೈತರಿಗೆ ಆಘಾತವೇ ಸರಿ. ಆದರೆ, ಈ ರೀತಿಯಾಗಿ ತಾನು ಉತ್ತಿಬಿತ್ತಿದ್ದ ಬೆಳೆ ಹಾಳಾದ ಹಿನ್ನೆಲೆಯಲ್ಲಿ ಸಾಲ ಬಾಧೆಗೆ ಹೆದರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ.

    ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರುಳಿಕೊಪ್ಪಿ ಗ್ರಾಮದ 58 ವರ್ಷ ವಯಸ್ಸಿನ ರೈತ, ಸಂಗಪ್ಪ ದೇವಗೇರಿ, ಮೃತ ದುರ್ದೈವಿ. ಸುಮಾರು 7 ರಿಂದ 8 ಲಕ್ಷ ರೂಪಾಯಿ ಸಾಲ ಹೊಂದಿದ್ದ ಇವರು, ಲಾವಣಿ ಜಮೀನುಗಳಲ್ಲಿ ಬೆಳೆದಿದ್ದ ಬೆಳೆ ಅತಿವೃಷ್ಟಿಯಿಂದಾಗಿ ಹಾಳಾದ ಹಿನ್ನೆಲೆಯಲ್ಲಿ ನೊಂದಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಒಮಿಕ್ರಾನ್ ಭೀತಿಯ ನಡುವೆ ಭಾರತ ಸರ್ಕಾರ ನೀಡಿದೆ ಶುಭ ಸುದ್ದಿ

    ಸಂಗಪ್ಪ ಭಾನುವಾರ ರಾತ್ರಿ ಗ್ರಾಮದಲ್ಲಿ ನಡೆದ ಮೇಡ್ಲೇರೆಪ್ಪ ದೇವರ ಕಾರ್ತಿಕೋತ್ಸವ ಮುಗಿಸಿಕೊಂಡು ಮನೆಗೆ ಹೋಗುವಾಗ, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಅವರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಸವಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮನೆ ಇಲ್ಲಾ ಸ್ವಾಮಿ.. ಎಂದು ಗ್ರಾ.ಪಂ. ಕಚೇರಿಯಲ್ಲಿ ಠಿಕಾಣಿ ಹೂಡಿದರು!

    ಮೇಕಪ್​ ಕಲಾವಿದೆ ಆಗಿ ಸಮಂತಾ! ಅವರ ‘ಮಾಸ್ಟರ್​ಪೀಸ್’ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts