More

    ಸರಣಿಶ್ರೇಷ್ಠ ಪ್ರಶಸ್ತಿ ವಿತರಿಸದೆ ಭಾರತೀಯರಿಂದ ಟ್ರೋಲ್​ ಆದ ವಿಂಡೀಸ್​ ಕ್ರಿಕೆಟ್​ ಮಂಡಳಿ!

    ಪೋರ್ಟ್​ ಆಫ್​ ಸ್ಪೇನ್​: ಮಳೆ ಅಡಚಣೆಯಿಂದಾಗಿ ಗೆಲುವಿನಿಂದ ವಂಚಿತವಾದ ಭಾರತ ತಂಡ ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯ 2ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿತು. ಸರಣಿ ಗೆಲುವಿನ ಅಂತರವನ್ನು 2-0ಗೆ ಏರಿಸುವುದನ್ನೂ ತಪ್ಪಿಸಿಕೊಂಡ ರೋಹಿತ್​ ಶರ್ಮ ಪಡೆ 1-0ಯಿಂದ ಸರಣಿ ವಶಪಡಿಸಿಕೊಂಡಿತು. ವಿಂಡೀಸ್​ ವಿರುದ್ಧ ಸತತ 9 ಮತ್ತು ಕೆರಿಬಿಯನ್ಸ್​ ನೆಲದಲ್ಲಿ ಸತತ 5ನೇ ಸರಣಿ ಗೆಲುವಿನ ಸಾಧನೆಯೊಂದಿಗೆ ಟೀಮ್​ ಇಂಡಿಯಾ ಪ್ರಾಬಲ್ಯವನ್ನು ಮುಂದುವರಿಸಿತು. ಆದರೆ ಇದರ ನಡುವೆ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಯನ್ನೇ ವಿತರಿಸದ ಕಾರಣಕ್ಕಾಗಿ ಆತಿಥೇಯ ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ, ಭಾರತೀಯ ಕ್ರಿಕೆಟ್​ ಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗಳಿಗೆ ಒಳಗಾಗಿದೆ.

    ಸರಣಿಯಲ್ಲಿ 15 ವಿಕೆಟ್​ ಕಬಳಿಸಿ, ಬ್ಯಾಟಿಂಗ್​ ಮಾಡಿದ ಏಕೈಕ ಇನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ ಆರ್​. ಅಶ್ವಿನ್​ಗೆ ಸರಣಿಶ್ರೇಷ್ಠ ಪ್ರಶಸ್ತಿ ಒಲಿಯುವ ನಿರೀೆ ಇತ್ತು. ಆದರೆ ಸರಣಿ ಮುಕ್ತಾಯದ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಆತಿಥೇಯ ವಿಂಡೀಸ್​ ಕ್ರಿಕೆಟ್​ ಮಂಡಳಿ, ಸರಣಿಶ್ರೇಷ್ಠ ಪ್ರಶಸ್ತಿಯನ್ನೇ ವಿತರಿಸಲಿಲ್ಲ. ಮೊಹಮದ್​ ಸಿರಾಜ್​ ಮೊಟ್ಟಮೊದಲ ಬಾರಿಗೆ ಟೆಸ್ಟ್​ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಯುವ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ (266) ಪದಾರ್ಪಣೆಯ ಸರಣಿಯಲ್ಲೇ ಗರಿಷ್ಠ ರನ್​ ಸ್ಕೋರರ್​ ಎಂಬ ಗೌರವಕ್ಕೆ ಪಾತ್ರರಾದರು. ಆದರೆ, ವಿಂಡೀಸ್​ ಕ್ರಿಕೆಟ್​ ಮಂಡಳಿ ಸರಣಿಶ್ರೇಷ್ಠ ಪ್ರಶಸ್ತಿಯನ್ನೇ ವಿತರಿಸದಿರುವುದು ಭಾರತೀಯ ಕ್ರಿಕೆಟ್​ ಪ್ರೇಮಿಗಳನ್ನು ಅಚ್ಚರಿಗೊಳಿಸಿದೆ. ಇದರೊಂದಿಗೆ ಭಾರತದ ಕ್ರಿಕೆಟ್​ ಪ್ರೇಮಿಗಳು, ‘ಯಾಕೆ ಹಣ ಖಾಲಿಯಾಯಿತೇ’ ಎಂದು ವಿಂಡೀಸ್​ ಕ್ರಿಕೆಟ್​ ಮಂಡಳಿಯನ್ನು ಟ್ರೋಲ್​ ಮಾಡಿದ್ದಾರೆ.

    ವಿಂಡೀಸ್​ ಕ್ರಿಕೆಟ್​ ಮಂಡಳಿ ಬಡತನ ಈಗಾಗಲೆ ಕ್ರಿಕೆಟ್​ ಪ್ರೇಮಿಗಳಿಗೆ ತಿಳಿದಿರುವುದೇ ಆಗಿದೆ. ಈ ಮುನ್ನ ಮೊದಲ ಟೆಸ್ಟ್​ ಪಂದ್ಯದ ಬಳಿಕ ಯಶಸ್ವಿ ಜೈಸ್ವಾಲ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಕೇವಲ 40 ಸಾವಿರ ರೂ. (500 ಡಾಲರ್​) ಬಹುಮಾನ ಮೊತ್ತ ವಿತರಿಸಿದಾಗಲೂ ವಿಂಡೀಸ್​ ಕ್ರಿಕೆಟ್​ ಮಂಡಳಿ ಟ್ರೋಲ್​ಗಳಿಗೆ ಒಳಗಾಗಿತ್ತು. ಈ ನಡುವೆ ನೇರಪ್ರಸಾರದ ಆ್ಯಪ್​ ಜಿಯೋಸಿನಿಮಾದಲ್ಲಿ ಮಾತನಾಡಿರುವ ಮಾಜಿ ವೇಗಿ ಜಹೀರ್​ ಖಾನ್​, ನನ್ನ ಪ್ರಕಾರ ಆರ್​. ಅಶ್ವಿನ್​ ಅವರೇ ಸರಣಿಶ್ರೇಷ್ಠ ಎಂದಿದ್ದಾರೆ.

    ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಿಳಿದ ಭಾರತ
    ಎರಡನೇ ಟೆಸ್ಟ್​ನಲ್ಲಿ ಡ್ರಾಕ್ಕೆ ತೃಪ್ತಿಪಟ್ಟ ಕಾರಣ ಭಾರತ ತಂಡ 3ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಅಂಕಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿಯಿತು. ಡ್ರಾದಿಂದಾಗಿ ಭಾರತ-ವಿಂಡೀಸ್​ ತಂಡಗಳು ಪಂದ್ಯದಲ್ಲಿ ತಲಾ 4 ಅಂಕಗಳನ್ನು ಹಂಚಿಕೊಂಡವು. ಇದರಿಂದ ಭಾರತದ ಶೇಕಡಾವಾರು ಅಂಕಗಳಿಗೆ 100ರಿಂದ 66.67ಕ್ಕೆ ಇಳಿಯಿತು. ಲಂಕಾ ವಿರುದ್ಧ ಮೊದಲ ಟೆಸ್ಟ್​ ಗೆದ್ದಿರುವ ಪಾಕ್​ ಅಗ್ರಸ್ಥಾನದಲ್ಲಿದೆ. ಆಶಸ್​ ಸರಣಿಯಲ್ಲಿ ಆಡುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ ಆಸ್ಟ್ರೆಲಿಯಾ (ಶೇ.54.17) ಮತ್ತು ಇಂಗ್ಲೆಂಡ್​ (ಶೇ. 28.17) ತಂಡಗಳು ಕ್ರಮವಾಗಿ 3, 4ನೇ ಸ್ಥಾನದಲ್ಲಿವೆ. ಮೊದಲ ಬಾರಿಗೆ ಅಂಕಗಳ ಖಾತೆ ತೆರೆದ ವಿಂಡೀಸ್​ (ಶೇ.16.67) 5ನೇ ಸ್ಥಾನದಲ್ಲಿದೆ. 2023-25ರ 3ನೇ ಆವೃತ್ತಿಯ ಡಬ್ಲ್ಯುಟಿಸಿಯಲ್ಲಿ ದಣ ಆಫ್ರಿಕಾ, ನ್ಯೂಜಿಲೆಂಡ್​ ಮತ್ತು ಬಾಂಗ್ಲಾದೇಶ ಇನ್ನಷ್ಟೇ ಅಭಿಯಾನ ಆರಂಭಿಸಬೇಕಾಗಿದೆ. ಶ್ರೀಲಂಕಾ ಇನ್ನೂ ಖಾತೆ ತೆರೆದಿಲ್ಲ.

    ಐಪಿಎಲ್​ನಲ್ಲಿ ಮಿಂಚಿರುವ ವಿಂಡೀಸ್​ ಸ್ಫೋಟಕ ಬ್ಯಾಟರ್​, ಭಾರತ ವಿರುದ್ಧ ಏಕದಿನ ಸರಣಿಗೆ ವಾಪಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts