More

    ಚಿತ್ರಮಂದಿರದ ಒಳಗೇ ಪಟಾಕಿ ಹೊಡೆದ ಅಭಿಮಾನಿಗಳು! ಸಲ್ಲೂ ಭಾಯ್​ ಹೇಳಿದ್ದು ಹೀಗೆ

    ಮುಂಬೈ: ಶುಕ್ರವಾರ(ನ.26) ಬಿಡುಗಡೆಯಾದ ಬಾಲಿವುಡ್​ ಸ್ಟಾರ್​ ಸಲ್ಮಾನ್​ ಖಾನ್​ರ ಹೊಸ ಚಿತ್ರ ‘ಅಂತಿಮ್​​’ ಸಿನಿಮಾಪ್ರಿಯರಲ್ಲಿ ಸಂಚಲನ ಮೂಡಿಸಿದೆ. ತೆರೆಕಂಡ ಎರಡೇ ದಿನಗಳಲ್ಲಿ ಅದಾಗಲೇ 10 ಕೋಟಿ ರೂಪಾಯಿ ಸಂಪಾದನೆ ಮಾಡಿದೆ. ಈ ಚಿತ್ರದಲ್ಲಿ ಸಿಖ್​​ ಪೊಲೀಸ್​ ಅಧಿಕಾರಿಯ ಪಾತ್ರ ವಹಿಸಿರುವ ಸಲ್ಮಾನ್​​ ಜೊತೆಗೆ ಅವರ ಬಾಮೈದ ಯುವ ನಟ ಆಯುಷ್​ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    Image

    ಅಂತಿಮ್​ ವೀಕ್ಷಣೆಗೆ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿರುವ ಸಲ್ಮಾನ್​ರ ಅಭಿಮಾನಿಗಳು ಸಿನಿಮಾ ಮಂದಿರದ ಒಳಗೇ ಪಟಾಕಿಗಳನ್ನು ಸಿಡಿಸಿ ಸಂಭ್ರಮ ಆಚರಿಸಿರುವ ವಿಡಿಯೋ ಒಂದನ್ನು ಸಲ್ಮಾನ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಆದರೆ ಸಲ್ಮಾನ್ ಈ ಬಗ್ಗೆ ಸಂತಸಪಟ್ಟಿಲ್ಲ, ಬದಲಿಗೆ ಈ ರೀತಿ ಥಿಯೇಟರ್​ ಒಳಗೆ ಪಟಾಕಿ ಹೊಡೆಯುವುದು ಎಲ್ಲರ ಜೀವಕ್ಕೂ ಕುತ್ತು ತರುವಂಥದ್ದು ಎಂದು ಎಚ್ಚರಿಸಿದ್ದಾರೆ.

     

    View this post on Instagram

     

    A post shared by Salman Khan (@beingsalmankhan)

    “ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಮನವಿ ಮಾಡುತ್ತೇನೆ… ಆಡಿಟೋರಿಯಂ ಒಳಗೆ ಪಟಾಕಿಗಳನ್ನು ತೆಗೆದುಕೊಂಡು ಹೋಗಬೇಡಿ. ಇದರಿಂದ ನೀವು ನಿಮ್ಮ ಮತ್ತು ಇತರರ ಜೀವಕ್ಕೆ ದೊಡ್ಡ ಅಪಾಯ ತರುತ್ತಿದ್ದೀರಿ. ಥಿಯೇಟರ್​ ಮಾಲಿಕರಿಗೆ ಪಟಾಕಿಯನ್ನು ಒಳಕ್ಕೆ ಬಿಡಬೇಡಿ ಎಂದು ಕೇಳಿಕೊಳ್ಳುತ್ತೇನೆ. ಪ್ರವೇಶದಲ್ಲೇ ಸೆಕ್ಯುರಿಟಿ ಇದನ್ನು ತಡೆಯಬೇಕು. ಚಿತ್ರವನ್ನು ಎಂಜಾಯ್​ ಮಾಡಿ, ಆದರೆ ಪ್ಲೀಸ್​ ಪ್ಲೀಸ್​ ಈ ರೀತಿ ಮಾಡಬೇಡಿ” ಎಂದು ಸಲ್ಲೂ ಭಾಯ್​ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ಆರಂಭಕ್ಕೂ ಮುನ್ನವೇ ಅಂತ್ಯವಾಯ್ತಾ ವಿಕಿ-ಕತ್ರೀನಾ ಮದುವೆ? ವಿಕಿ ಕಸಿನ್​ ಸ್ಫೋಟಕ ಹೇಳಿಕೆ

    ಮದುವೆ ಆರತಕ್ಷತೆಗೆ ಬರಲು ಬಂಧುಮಿತ್ರರಿಗೆ ‘ನೋಟೀಸ್​’! ವಕೀಲ ಜೋಡಿ ನೀಡಿದ ಆಮಂತ್ರಣಪತ್ರಿಕೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts