More

    ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕರ್ನಾಟಕದ ಖ್ಯಾತ ಹೃದಯ ತಜ್ಞರಿಂದ ಚಿಕಿತ್ಸೆ

    ಕೋಲ್ಕತ: ಕರ್ನಾಟಕದ ಖ್ಯಾತ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ದೇವಿ ಶೆಟ್ಟಿ ಅವರು ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಸೋಮವಾರ ಕೂಡಿಕೊಂಡಿದ್ದಾರೆ. ಲಘು ಹೃದಯಾಘಾತದ ಬಳಿಕ ಈಗಾಗಲೆ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿರುವ 48 ವರ್ಷದ ಗಂಗೂಲಿ ಅವರಿಗೆ ನೀಡಬೇಕಾಗಿರುವ ಮುಂದಿನ ಚಿಕಿತ್ಸೆಯ ಬಗ್ಗೆ ಅವರು ವೈದ್ಯರ ತಂಡದೊಂದಿಗೆ ಚರ್ಚಿಸಿದ್ದಾರೆ.

    ಗಂಗೂಲಿ ಅವರ ಹೃದಯ ಚಿಕಿತ್ಸೆಗಾಗಿ ಒಟ್ಟು 9 ವೈದ್ಯರ ತಂಡವನ್ನು ರಚಿಸಲಾಗಿದೆ. ಕೋಲ್ಕತದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಗಂಗೂಲಿಗೆ ಚಿಕಿತ್ಸೆ ನೀಡುತ್ತಿರುವ ತಂಡದೊಂದಿಗೆ ಕನ್ನಡಿಗ ಡಾ. ದೇವಿ ಶೆಟ್ಟಿ ಜತೆಗೆ ಮತ್ತೋರ್ವ ಹೃದಯ ತಜ್ಞ ಡಾ. ಆರ್‌ಕೆ ಪಾಂಡ ಕೂಡ ವರ್ಚುವಲ್ ಮೂಲಕ ಪಾಲ್ಗೊಂಡಿದ್ದಾರೆ. ಜತೆಗೆ ಅಮೆರಿಕದಿಂದಲೂ ವೈದ್ಯರೊಬ್ಬರು ದೂರವಾಣಿ ಮೂಲಕ ವೈದ್ಯರ ತಂಡದೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಡಾ. ದೇವಿ ಶೆಟ್ಟಿ ಮಂಗಳವಾರ ಕೋಲ್ಕತದಲ್ಲಿ ಗಂಗೂಲಿ ಅವರನ್ನು ಭೇಟಿಯಾಗಿ ಪರಿಶೀಲನೆ ನಡೆಸಲಿದ್ದಾರೆ.

    ಇದನ್ನೂ ಓದಿ: 2021ರ ಮೊದಲ ಶತಕವೀರ ಕೇನ್ ವಿಲಿಯಮ್ಸನ್, ಮಹಾನ್ ಸಾಧನೆಯತ್ತ ಕಿವೀಸ್

    ಗಂಗೂಲಿಗೆ ಈಗಲೆ ಮತ್ತೊಮ್ಮೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡುವ ಅಗತ್ಯವಿಲ್ಲ. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದ್ದು, ಬೇಕಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಈ ಚಿಕಿತ್ಸೆ ನೀಡಬಹುದು. ಗಂಗೂಲಿ ಈಗ ಯಾವುದೇ ರೀತಿಯ ಎದೆ ನೋವು ಹೊಂದಿಲ್ಲ ಎಂದು ವೈದ್ಯರ ತಂಡ ಒಮ್ಮತದ ಅಭಿಪ್ರಾಯ ಕೈಗೊಂಡಿದೆ ಎಂದು ಆಸ್ಪತ್ರೆಯ ಎಂಡಿ ಹಾಗೂ ಸಿಇಒ ಡಾ. ರೂಪಾಲಿ ಬಸು ತಿಳಿಸಿದ್ದಾರೆ.

    ವೈದ್ಯರ ತಂಡದ ಸಭೆಯಲ್ಲಿ ಗಂಗೂಲಿ ಕುಟುಂಬದ ಸದಸ್ಯರೂ ಪಾಲ್ಗೊಂಡಿದ್ದರು ಮತ್ತು ಅವರಿಗೆ ಮುಂದಿನ ಚಿಕಿತ್ಸಾ ಯೋಜನೆಯ ಬಗ್ಗೆ ವಿವರಿಸಲಾಗಿದೆ. ಗಂಗೂಲಿ ಮನೆಗೆ ಮರಳಿದ ಬಳಿಕವೂ ವೈದ್ಯರ ತಂಡ ಆರೋಗ್ಯದ ಮೇಲೆ ಕಣ್ಣಿಡಲಿದೆ ಎಂದು ರೂಪಾಲಿ ತಿಳಿಸಿದ್ದಾರೆ.
    ಗಂಗೂಲಿ ಹೃದಯದ ರಕ್ತನಾಳಗಳಲ್ಲಿದ್ದ 3 ಬ್ಲಾಕ್‌ಗಳನ್ನು ಈಗಾಗಲೆ ತೆರವುಗೊಳಿಸಲಾಗಿದ್ದು, ಒಂದು ಸ್ಟೆಂಟ್ ಕೂಡ ಅಳವಡಿಸಲಾಗಿದೆ. ಈ ನಡುವೆ ಅವರ ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು.

    ಇದನ್ನೂ ಓದಿ: ಸೌರವ್ ಗಂಗೂಲಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ

    ಬುಧವಾರ ಆಸ್ಪತ್ರೆಯಿಂದ ಬಿಡುಗಡೆ
    ಗಂಗೂಲಿ ಅವರು ಬುಧವಾರ ಬಿಡುಗಡೆ ಹೊಂದಿ ಮನೆಗೆ ಮರಳುವ ನಿರೀಕ್ಷೆ ಇದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆದರೆ ಮುಂದಿನ ಕೆಲ ದಿನಗಳಲ್ಲಿ ಅಥವಾ ವಾರಗಳ ನಂತರ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆದುಕೊಳ್ಳಬೇಕಾಗಬಹುದು ಎನ್ನಲಾಗಿದೆ.

    ಆಸ್ಪತ್ರೆಗೆ ಹಲವು ಗಣ್ಯರ ಭೇಟಿ
    ಪಶ್ಚಿಮ ಬಂಗಾಳದ ವಿವಿಧ ರಾಜಕೀಯ ನಾಯಕರ ಸಹಿತ ಹಲವಾರು ಗಣ್ಯರು ಸೋಮವಾರ ಕೋಲ್ಕತದ ಆಸ್ಪತ್ರೆಗೆ ತೆರಳಿ ಗಂಗೂಲಿ ಆರೋಗ್ಯ ವಿಚಾರಿಸಿದರು. ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು.

    ಬಯೋ-ಬಬಲ್ ಬ್ರೇಕ್ ಬೆನ್ನಲ್ಲೇ ಟೀಮ್ ಇಂಡಿಯಾವನ್ನು ಕಾಡುತ್ತಿದೆ ಬೀಫ್​ ವಿವಾದ!

    17-18 ವರ್ಷದ ಪಾಕ್ ವೇಗಿಗಳ ನಿಜ ವಯಸ್ಸು ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ಮೊಹಮದ್ ಆಸಿಫ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts