More

    ಕುರಿ ಸಾಕಾಣಿಕೆಯಿಂದ ಕುಟುಂಬ ನಿರ್ವಹಣೆ ಸಾಧ್ಯ

    ಬಂಕಾಪುರ: ಕುರಿ ಸಾಕಾಣಿಕೆ ಮನುಷ್ಯನ ಮೂಲ ಕಸುಬುಗಳಲ್ಲಿ ಒಂದು. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದ ಕೊಟ್ಟಿಗೇರಿಯ ಉಡಚಮ್ಮ ಸಭಾಭವನದಲ್ಲಿ ಶ್ರೀ ಹೊರಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಕುರಿಗಾಹಿಗಳು ಉಳಿಯಬೇಕು. ಕಸುಬು ಮೂಲ ವೃತ್ತಿಯಾಗಬೇಕು ಎನ್ನುವ ಉದ್ದೇಶದಿಂದ ನಾನು ಮುಖ್ಯಮಂತ್ರಿಯಾಗಿದ್ದಾಗ ಕುರಿಗಾರರಿಗೆ ಅಮೃತ ಯೋಜನೆ ಜಾರಿ ಮಾಡಿ ಪ್ರತಿ ಸಂಘಕ್ಕೆ 2 ಲಕ್ಷ ರೂ.ಗಳಂತೆ ಸುಮಾರು 10 ಸಾವಿರ ಸಂಘಗಳಿಗೆ ನೇರವಾಗಿ ಹಣ ಪಾವತಿಸಿದ್ದೇನೆ. ಆದರೆ, ಇಂದಿನ ಸರ್ಕಾರ ಈ ಯೋಜನೆ ಸ್ಥಗಿತಗೊಳಿಸಿದೆ ಎಂದರು.

    ಅತಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಉತ್ಪಾದನೆ ಮಾಡಿ ಕುಟುಂಬ ನಿರ್ವಹಿಸಲು ಕುರಿ ಸಾಕಾಣಿಕೆಯಿಂದ ಸಾಧ್ಯವಿದೆ. ಕುರಿಗಾಹಿಗಳಿಗೆ ಸ್ವಲ್ಪ ಹಣಕಾಸಿನ ಸಹಾಯ ಮಾಡಿದರೆ ಆ ಕುಟುಂಬ ಆರ್ಥಿಕವಾಗಿ ಸ್ವಾವಲಂಬಿಯಾಗುತ್ತದೆ. ಆದ್ದರಿಂದ ನಮ್ಮ ಮೂಲ ಕಸುಬುಗಳನ್ನು ಉಳಿಸುವುದು ಅವಶ್ಯವಾಗಿದೆ ಎಂದರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಕರ್ಮ ಯೋಜನೆಯನ್ನು ಘೊಷಣೆ ಮಾಡಿದ್ದಾರೆ. ಇದರಲ್ಲಿ 18 ಕಸುಬುಗಳಿವೆ. ಅದರಲ್ಲಿ ಉಣ್ಣೆ ಉತ್ಪಾದನೆಯೂ ಒಂದಾಗಿದೆ. ಇದರ ಲಾಭವನ್ನು ಕುರಿಗಾಹಿಗಳು ಪಡೆದುಕೊಳ್ಳಬೇಕು ಎಂದರು.

    ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡ್ರ, ಬೀರಪ್ಪ ಸಣ್ಣತಮ್ಮನವರ, ಮಲ್ಲೇಶಪ್ಪ ಗೊರಮ್ಮನವರ, ಶಿವಪುತ್ರಯ್ಯ ಕೆಂಡದಮಠ, ಮಧುಕುಮಾರ ಜಂಗಳಿ, ಮಾಲತೇಶ ರಾಣೋಜಿ, ನಿಂಗಪ್ಪ ಕಟಗಿ, ಡಾ.ರಾಜೇಂದ್ರ, ಪಿಎಸ್​ಐ ನಿಂಗರಾಜ ಕರಕನ್ನವರ, ಮುತ್ತಣ್ಣ ಗುಡಗೇರಿ ಮತ್ತು ಸಹಕಾರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts