More

    ಚಿಕಿತ್ಸೆ ಬೇಡಿಬಂದವಳೊಂದಿಗೆ ಅನುಚಿತ ವರ್ತನೆ: ಧಾರ್ಮಿಕ ಮುಖಂಡನ ಬಂಧನ

    ಹೈದರಾಬಾದ್: ಮಾಟ, ಮಂತ್ರ, ಪ್ರಾರ್ಥನೆ ಮೂಲಕ ಎಂಥದ್ದೇ ಕಾಯಿಲೆಯನ್ನು ಗುಣಪಡಿಸುವುದಾಗಿ ಹೇಳಿಕೊಂಡ ಧಾರ್ಮಿಕ ಮುಖಂಡನೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇಸ್ ದಾಖಲಾಗಿದ್ದು, ಆತನನ್ನು ಸೈಬರಾಬಾದ್ ಪೊಲೀಸರು ಇದೀಗ ಬಂಧಿಸಿದ್ದಾರೆ.

    ಅರ್ಷದ್ ಜಲಾವುದ್ದೀನ್ (45)ಆರೋಪಿ. ರೀನ್ ಬಜಾರ್ ನಿವಾಸಿ ಅರ್ಷದ್ ಮೂಲತಃ ಕರ್ನಾಟಕ ಮೂಲದವನಾಗಿದ್ದು, ಪ್ರಾರ್ಥನೆ ಮತ್ತು ಮಾಟದಿಂದ ಯಾವುದೇ ಅನಾರೋಗ್ಯವನ್ನು ಗುಣಪಡಿಸುವ ಹೆಸರಿನಲ್ಲಿ ಹೈದರಾಬಾದ್‌ನಲ್ಲಿ ಜನರನ್ನು ಮೋಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆ!

    2018 ರಲ್ಲಿ ಸಂತ್ರಸ್ತೆಯೊಬ್ಬಳು ತನ್ನ ಮೇಲೆ ಧಾರ್ಮಿಕ ಮುಖಂಡ ಅತ್ಯಾಚಾರವೆಸಗಿದ್ದಾನೆ ಎಂದು ದೂರು ಸಲ್ಲಿಸಿದ್ದಳು. ಆರೋಪಿ ಕಳೆದ ಎರಡು ವರ್ಷಗಳಿಂದ ಪರಾರಿಯಾಗಿದ್ದ.

    ಆಗಿದ್ದಿಷ್ಟು: ಆ ಮಹಿಳೆ ಒಂದು ಮಗುವಿಗೆ ಜನ್ಮ ನೀಡಿದ ನಂತರ ‘ಅನಾರೋಗ್ಯಕ್ಕೆ ಒಳಗಾಗಿದ್ದಳು. ಎಷ್ಟೇ ಚಿಕಿತ್ಸೆ ಪಡೆದರೂ ಅವಳು ಗುಣಮುಖವಾಗಲಿಲ್ಲವಾದ್ದರಿಂದ, ಆಕೆ ಮತ್ತು ಆಕೆಯ ಪತಿ ಅರ್ಷದ್ ನನ್ನು ಸಂಪರ್ಕಿಸಿ, ಆ ಮಹಿಳೆಯ ಅನಾರೋಗ್ಯ ಚಿಕಿತ್ಸೆ ನೀಡಬೇಕೆಂದು ಕೋರಿದ್ದಾರೆ.

    ಈ ಅವಕಾಶವನ್ನೇ ದುರುಪಯೋಗಪಡಿಸಿಕೊಳ್ಳಲು ಹೊಂಚು ಹಾಕಿದ ಆರೋಪಿ ಒಂದು ಪೂಜೆಯ ಹೆಸರಿನಲ್ಲಿ ಮಧ್ಯರಾತ್ರಿ ಆ ಮಹಿಳೆಯ ಮನೆಗೆ ಹೋಗಿ. ಅಲ್ಲಿ ಆಕೆಯನ್ನು ಕೋಣೆಗೆ ಕರೆದೊಯ್ದು ಅರಿವು ತಪ್ಪಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪ್ರಜ್ಞೆ ಮರಳಿ ಬಂದ ಆಕೆ ಎರಡು ದಿನಗಳ ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.

    ಇದನ್ನು ಓದಿ:  ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಪ್ರಶಸ್ತಿ ಪಡೆದ ಭಾರತೀಯ

    “ನಾವು ಕಳೆದ ಎರಡು ವರ್ಷಗಳಿಂದ ಆ ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದ್ದೇವೆ. ಆತ ತನ್ನ ಕೆಲಸ ಮುಂದುವರಿಸಿದ್ದಾನೆ ಮತ್ತು ಮತ್ತು ಆಗಾಗ್ಗೆ ಹೆಸರು ಮತ್ತು ಮುಖ ಗುರುತನ್ನು ಬದಲಿಸಿಕೊಳ್ಳುತ್ತಾನೆ. ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡಗಳು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಆತನನ್ನು ಬಂಧಿಸಲೆತ್ನಿಸಿದ್ದು, ಆತ ತಪ್ಪಿಸಿಕೊಳ್ಳುತ್ತಿದ್ದಾನೆ. ಒಂದೊಮ್ಮೆ ಆರೋಪಿ ರೀನ್ ಬಜಾರ್‌ನಲ್ಲಿ ವಾಸಿಸುತ್ತಿದ್ದ. ಮಾಹಿತಿಯ ಮೇರೆಗೆ, ನಾವು ಸ್ಥಳಕ್ಕೆ ಆತನನ್ನು ಹಿಡಿಯಲು ಹೋದಾಗ, ಆತ ಪರಾರಿಯಾಗಿದ್ದ. ಅಂದಿನಿಂದ, ಆಗಾಗ್ಗೆ ಮನೆ ಬದಲಾಯಿಸುತ್ತಿದ್ದಾನೆ. ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಯನ್ನು ಚೆನ್ನಪಟ್ಟಣ ಗ್ರಾಮದಲ್ಲಿ ಆತನ ಮೇಲೆ ನಿಗಾ ಇಟ್ಟಿದ್ದಾರೆ. ಮತ್ತು ತನಿಖೆ ನಡೆಯುತ್ತಿದೆ ಎಂದು ರಾಜೇಂದ್ರನಗರ ಪಿಎಸ್ ಎಸ್‌ಎಚ್‌ಒ ಜಿ. ಸುರೇಶ್ ಹೇಳಿದರು.

    ವೈಷ್ಣೋದೇವಿ ಯಾತ್ರಿಕರಿಗೆ ಗುಡ್‌ನ್ಯೂಸ್‌: ಯಾತ್ರೆ ನೋಂದಣಿ ಆರಂಭ- ಇಲ್ಲಿದೆ ರೂಲ್ಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts