More

    ಕಿರೇಸೂರದಲ್ಲಿ ಜಾತ್ರೆ

    ಹುಬ್ಬಳ್ಳಿ : ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಶ್ರೀ ಅಲ್ಲಮಪ್ರಭುವಿನ ಜಾತ್ರಾ ಮಹೋತ್ಸವ ಮೇ 23 ರಂದು ಜರುಗಲಿದೆ.

    ಅಂದು ಸಂಜೆ 5 ಗಂಟೆಗೆ ಗ್ರಾಮದಲ್ಲಿ ರಥೋತ್ಸವ ನಡೆಯಲಿದ್ದು, 24ರಂದು ಸಂಜೆ 6 ಗಂಟೆಗೆ ಕಡುಬಿನ ಕಾಳಗ ಜರುಗಲಿದೆ. ಹೊಸಳ್ಳಿ ಸಂಸ್ಥಾನ ಮಠದ ಶ್ರೀ ಅಭಿನವ ಬೂದಿಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಲ್ಲಯ್ಯಅಜ್ಜ ಹಿರೇಮಠ ಹಾಗೂ ಮಹಾಂತಯ್ಯ ಪ್ರಭುಸ್ವಾಮಿಮಠದ ನೇತೃತ್ವ ವಹಿಸುವರು.

    ಗ್ರಾಮದ ಕರಡಿ ಮಜಲು, ಡೊಳ್ಳಿನ ಮಜಲು, ಭಜನಾ ಮಂಡಳ, ಜಾಂಜಮೇಳ ಕಲಾಬಳಗದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts