More

    – ವಸ್ತು ಪ್ರದರ್ಶನ ವಿಫಲ, ಅನಗತ್ಯ 5 ಲಕ್ಷ ರೂ. ದಂಡ?.

    ಗದಗ: ಕೌಶಲ್ಯಾಭಿವೃದ್ಧಿ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆಯ ಸಿಬ್ಬಂದಿ ನಿರುತ್ಸಾಹ ಮತ್ತು ಪ್ರಚಾರದ ಕೊರತೆಯಿಂದ ಜಿಲ್ಲೆಯಲ್ಲಿ 5 ದಿನಗಳ ಕಾಲ ಜರುಗಿದ ಸ್ವಸಹಾಯ ಗುಂಪುಗಳು ತಯಾರಿಸಿದ ಕೈಗಾರಿಕಾ ಉತ್ಪನ್ನಗಳ ವಸ್ತು ಪ್ರದರ್ಶ ಮತ್ತು ಮಾರಾಟ ಮೇಳ ಸಂರ್ಪೂಣ ವಿಲಗೊಂಡಿದೆ. ವಸ್ತು ಪ್ರದರ್ಶನಕ್ಕೆ ಸರ್ಕಾರ ಮಿಸಲಿಟ್ಟ 5 ಲಕ್ಷ ರೂ. ಅನಗತ್ಯ ತಲೆದಂಡ ಎಂಬುದು ಸ್ಪಷ್ಟವಾಗಿದೆ.
    ಎನ್​ಆರ್​ಎಲ್​ಎಂ, ಜಿಲ್ಲಾ ವಾಣಿಜೋದ್ಯಮ, ಕರ್ನಾಟಕ ಗ್ರಾಮೀಣ ಖಾದಿ ಕೈಗಾರಿಗಾ ಬೋರ್ಡ್​ ಸಹಯೋಗದಲ್ಲಿ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಕಳೆದ 5 ದಿನಗಳಿಂದ ಜರಗುತ್ತಿರುವ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಅಳವಡಿಸಿದ ಮಳಿಗೆಗಳು ಬಿಕೋ ಎನ್ನುತ್ತಿದ್ದು, ಜನರಿಲ್ಲದೆ ವಸ್ತು ಪ್ರದರ್ಶನವನ್ನು ಸ್ವಸಹಾಯ ಸಂಘಗಳು, ಕೈಗಾರಿಕೋದ್ಯಮಿಗಳು ಹಿಂಪಡೆದಿದ್ದಾರೆ. 40 ಮಳಿಗೆಗಳ ಪೈಕಿ ಶೇ. 50 ರಷ್ಟು ಭತಿರ್ಯಾಗಿಲ್ಲ. ಸ್ವಸಹಾಯ ಸಂಗಳಿಗೆ ವಸತಿ, ಸಾರಿಗೆ ವ್ಯವಸ್ಥೆ, ಸ್ಟಾಲ್​ ಗಳನ್ನು ಉಚಿತವಾಗಿ ನೀಡಿದ್ದರೂ ಕೂಡ ಗುಡಿ ಕೈಗಾರಿಕೋದ್ಯಮಿಗಳ ಉತ್ಸಾಹ ತೋರಿಲ್ಲ. ಅದರಲ್ಲೂ ಪ್ರಚಾರದ ಕೊರತೆಯಿಂದಲೂ ಕೂಡ ಜನರು ಇತ್ತಕಡೆ ಮುಖ ಮಾಡಿಲ್ಲ ಎಂಬುದೇ ವಿಪರ್ಯಾಸ. ಈ ಹಿನ್ನೆಲೆ ಆಯೋಜಕರೆ ಪ್ರದರ್ಶನಕ್ಕೆ ಮೀಸಲಿಟ್ಟ 5 ದಿನಗಳ ಅವಧಿ ಪೂರ್ವದಲ್ಲೇ ಮಳಿಗೆಗಳನ್ನು ತೆಗೆಯಲು ನಿರ್ಧರಿಸಿದ್ದಾರೆ.
    ಜಿಲ್ಲೆಯ ಸ್ವಸಹಾಯ ಸಂಗಳ ಉತ್ಪನ್ನಗಳಿಗೆ ಪ್ರೊತ್ಸಾಹ ಮತ್ತು ಪ್ರಚಾರ ನೀಡುವ ಉದ್ದೇಶದೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಯೋಜನೆ ಜಾರಿ ತಂದಿದೆ. ಪ್ರತಿ ವರ್ಷ ಇಲಾಖಾ ಅನುದಾನದಡಿ (5 ಲಕ್ಷ ರೂ.) ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. ಆದರೆ ಅನುದಾನಕ್ಕೆ ಖರ್ಚು ತೋರಿಸಿ ಬಿಲ್​ ಪಡೆಯಬೇಕೆಂಬ ಉದ್ದೇಶದೊಂದಿಗೆ ಇಂತಹ ವಸ್ತು ಪ್ರದರ್ಶನಗಳನ್ನು ನಡೆಸಲಾಗುತ್ತದೆ ಎಂಬ ಆರೋಪ ಸಾಮಾನ್ಯವಾಗಿ ಕೇಳಿ ಬರುತ್ತಿತ್ತು. ಆರೋಪಕ್ಕೆ ಪುಷ್ಟಿ ನೀಡುವಂತೆ ನಗರದಲ್ಲಿ ನಡೆದಿರುವ ಕೈಗಾರಿಕಾ ವಸ್ತು ಪ್ರದರ್ಶನ ಸಾಯಾಗಿದೆ.

    ಬಾಕ್ಸ್​:
    ಗಾಣದ ಎಣ್ಣೆ, ಬಟ್ಟೆ, ಗೃಹ ಕೈಗಾರಿಕೆ, ಗೃಹ ಅಲಂಕಾರ ವಸ್ತು, ಾಸ್ಟ್​ ುಡ್​, ನೇಕಾರ ಸೀರೆ, ರೊಟ್ಟಿ, ಚಟ್ಟಿ ಉಪ್ಪಿನಕಾಯಿ ತಯಾರಿಕೆ, ಸೆಣಬು ಕೈಗಾರಿಕೆ, ಗಿಮಿರ್ಟ್​ ವ್ಯಾಪಾರ, ಸ್ಟೇಷನರಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.

    ಕೋಟ್​:
    ಪ್ರತಿವರ್ಷ ಕಾರ್ಯಕ್ರಮ ಯಶಸ್ವಿಯಾಗುತ್ತಿತ್ತು. ವಸ್ತು ಪ್ರದರ್ಶನ ಹಮ್ಮಿಕೊಂಡಿರುವ ಸ್ಥಳದ ಪಕ್ಕದಲ್ಲೇ ಖಾಸಗಿ ಸಮ್ಮೇಳನ ನಡೆದಿರುವ ಕಾರಣ ಹಿನ್ನಡೆ ಅನುಭವಿಸಿದ್ದೇವೆ.
    – ಚಂದ್ರಶೇಖರ್​, ಜಿಲ್ಲಾ ಯೋಜನಾ ನಿರ್ವಾಹಕ, ಎನ್​ಆರ್​ಎಲ್​ಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts