More

    ನೌಕರರಿಗೆ ಪರಿಹಾರ ನೀಡಲು ಕಾರ್ಖಾನೆ ಹಿಂದೇಟು

    ಬೆಳವಾಡಿ ಕೈಗಾರಿಕಾ ಪ್ರದೇಶದ ಎಂ.ಕೆ. ಫ್ಯಾಷನ್ ವರ್ಲ್ಡ್ ಪ್ರೈ.ಲಿ. ಗಾರ್ಮೆಂಟ್ಸ್ ಕಾರ್ಖಾನೆಯ ಎಲ್ಲ ಕಾರ್ಮಿಕರಿಗೂ ತಲಾ 2.50 ಲಕ್ಷ ರೂ. ಪರಿಹಾರ ನೀಡಬೇಕೆಂದು ಕಾರ್ಮಿಕ ನ್ಯಾಯಾಲಯ ಆದೇಶ ನೀಡಿದೆ. ಆದರೂ ಕಾರ್ಖಾನೆ ಆಡಳಿತ ಈ ಆದೇಶ ಪಾಲಿಸುತ್ತಿಲ್ಲ ಎಂದು ಜಿಲ್ಲಾ ಗಾರ್ಮೆಂಟ್ಸ್ ಕಾರ್ಮಿಕರ ಸಂಘ ಆರೋಪಿಸಿದೆ.

    ಈ ಮೊದಲಿನ ಅಣ್ಣಾಮಲೈ ಗಾರ್ಮೆಂಟ್ಸ್ ಕಾರ್ಖಾನೆಯನ್ನು ಎಂ.ಕೆ.ಫ್ಯಾಷನ್ ವರ್ಲ್ಡ್‌ನವರು ಖರೀದಿಸಿದ್ದರು. ಬಳಿಕ ಸುಮಾರು 300 ಕಾರ್ಮಿಕರು ಇದರಲ್ಲೇ ಮುಂದುವರಿದಿದ್ದರು. ಬಳಿಕ ಅದನ್ನು ಕಾನೂನುಬಾಹಿರವಾಗಿ ಮುಚ್ಚಲಾಗಿತ್ತು. ಹೀಗಾಗಿ ಆಡಳಿತ ವರ್ಗದ ವಿರುದ್ಧ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದಾಗ ಪರಿಹಾರ ನೀಡುವಂತೆ ಆದೇಶಿಸಿದ್ದರೂ ಕಾರ್ಖಾನೆ ಪಾಲಿಸುತ್ತಿಲ್ಲ. ಹೀಗಾಗಿ ಉಪ ಕಾರ್ಮಿಕ ಆಯುಕ್ತರು ಇತ್ತ ಗಮನಹರಿಸಿ ಪರಿಹಾರದ ಹಣ ದೊರಕಿಸಿಕೊಡಬೇಕು. ಅಲ್ಲದೆ ಕಾರ್ಖಾನೆಯಲ್ಲಿದ್ದ ಕಾರ್ಮಿಕರ ಪಿಎಫ್ ಹಣವನ್ನು ಅವರ ವೇತನದಿಂದ ಕಡಿತಗೊಳಿಸಿದ್ದರೂ ಆ ಹಣವೂ ಕಾರ್ಮಿಕರಿಗೆ ದಕ್ಕಿಲ್ಲ. ಹೀಗಾಗಿ ಪಿಎಫ್ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕೆಂದು ಅಧ್ಯಕ್ಷ ಪ್ರಮೋದ್ ಚಿಕ್ಕಮಣ್ಣೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

    ಉಪಾಧ್ಯಕ್ಷೆ ಸುವರ್ಣಾ, ಖಜಾಂಚಿ ಬಿ.ಎನ್.ಸುವರ್ಣಾ, ಸದಸ್ಯರಾದ ಭಾಗ್ಯಶ್ರೀ, ಸುನಿತಾ, ನಿವೇದಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts