More

    ಜಾಲತಾಣದಲ್ಲಿ ಹರಿದಾಡ್ತಿರೋ ಫೋಟೋ ಹತ್ರಾಸ್ ಗ್ಯಾಂಗ್​ರೇಪ್​ ಸಂತ್ರಸ್ತೆಯದ್ದಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್​ ಮೂಲದ 19 ವರ್ಷದ ಗ್ಯಾಂಗ್​ರೇಪ್​ ಸಂತ್ರಸ್ತೆ ಸೆ. 29ರಂದು ಚಿಕಿತ್ಸೆ ಫಲಿಸದೇ ಅತ್ಯಾಚಾರ ನಡೆದ ಎರಡು ವಾರಗಳ ಬಳಿಕ ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ನೀಚ ಕೃತ್ಯವು ಸೆ. 14ರಂದು ನಡೆದಿದ್ದು, ಮೇವು ತರಲು ಯುವತಿ ಜಮೀನಿಗೆ ಹೋಗಿದ್ದ ವೇಳೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿ ಕಿರುಕುಳ ನೀಡಿದ್ದರು.

    ಅಮಾನವೀಯ ಕೃತ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯ ನೀಡುವ ಮೂಲಕ ಸಂತ್ರಸ್ತೆಗೆ ನ್ಯಾಯ ದೊರೆಕಿಸಿ ಎಂದು ಒತ್ತಾಯಿಸಿದ್ದಾರೆ. ಇದರ ನಡುವೆ ಹತ್ರಾಸ್​ ಅತ್ಯಾಚಾರ ಸಂತ್ರಸ್ತೆ ಎಂದು ಯುವತಿಯೊಬ್ಬಳ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಜಾಲತಾಣದಲ್ಲಿ ಹರಿದಾಡ್ತಿರೋ ಫೋಟೋ ಹತ್ರಾಸ್ ಗ್ಯಾಂಗ್​ರೇಪ್​ ಸಂತ್ರಸ್ತೆಯದ್ದಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಆದರೆ, ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ​ನ್ಯೂಸ್​ ವಾರ್ ರೂಮ್ ಫ್ಯಾಕ್ಟ್​ಚೆಕ್​​ ನಡೆಸಿದ್ದು, ವೈರಲ್​ ಫೋಟೋದಲ್ಲಿರುವ ಯುವತಿಯು ಬೇರೆಯಾಗಿದ್ದು, ಹತ್ರಾಸ್​ ಸಂತ್ರಸ್ತೆಯಲ್ಲ ಎಂದು ತಿಳಿದುಬಂದಿದೆ. ಟ್ವಿಟರ್​ ಬಳಕೆದಾರರೊಬ್ಬರು ಟ್ವೀಟ್​ ಮಾಡಿದ್ದು, ಅಮಾಯಕ ಯುವತಿಯನ್ನು ಗ್ಯಾಂಗ್​ರೇಪ್​ ಮಾಡಿ, ನಾಲಿಗೆ ಕತ್ತರಿಸಿ, ಕತ್ತು ಮತ್ತು ಬೆನ್ನು ಮೂಳೆಯನ್ನು ಮುರಿದಿದ್ದಾರೆ ಎಂಬುದನ್ನು ಕೇಳಿ ನನ್ನ ಮನಸ್ಸು ಬಿರಿಯಿತು. ಯಾರೂ ಕೂಡ ಇಂತಹ ಕಿರುಕುಳವನ್ನು ಅನುಭವಿಸಬಾರದು. ನಮ್ಮಲ್ಲಿ ಬದಲಾವಣೆ ಆಗಬೇಕಿದೆ ಎಂದು ಬರೆದು ಯುವತಿ ಫೋಟೋ ಫೋಸ್ಟ್​ ಮಾಡಿದ್ದಾರೆ. ಅದನ್ನು ನೀವಿಲ್ಲಿ ಕಾಣಬಹುದಾಗಿದೆ.

    ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಿರ್ಭಯ ಮಾದರಿಯಲ್ಲೇ 19 ವರ್ಷದ ಯುವತಿಯನ್ನು ನಾಲ್ವರು ದುಷ್ಕರ್ಮಿಗಳು ಕ್ರೂರವಾಗಿ ಗ್ಯಾಂಗ್​ರೇಪ್ ಮಾಡಿದ್ದಾರೆ. ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾರೆ. ಆಕೆಯ ಬೆನ್ನುಮೂಳೆ ಮತ್ತು ಕತ್ತಿಗೆ ಹಾನಿಯುಂಟು ಮಾಡಿದ್ದಾರೆ. ದಯವಿಟ್ಟು ಆರೋಪಿಗಳನ್ನು ನೇಣಿಗೇರಿಸಿ ಎಂದು ಮತ್ತೊಬ್ಬ ನೆಟ್ಟಿಗ ಯುವತಿಯ ಫೋಟೋ ಪೋಸ್ಟ್​ ಮಾಡಿ ಮನವಿ ಮಾಡಿಕೊಂಡಿದ್ದಾರೆ.​

    ಫ್ಯಾಕ್ಟ್​ಚೆಕ್​ ಹೇಳಿದ್ದೇನು?
    ಫೋಟೋ ವೈರಲ್​ ಆಗುತ್ತಿದ್ದಂತೆ ಇಂಡಿಯಾ ಟುಡೆ ಫ್ಯಾಕ್ಟ್​ಚೆಕ್​ ತಂಡ ಹತ್ರಾಸ್​ ಸಂತ್ರಸ್ತೆಯ ಕುಟುಂಬವನ್ನು ಸಂಪರ್ಕಿಸಿದೆ. ವೈರಲ್​ ಫೋಟೋದಲ್ಲಿರುವ ಯುವತಿಯ ಫೋಟೋವನ್ನು ತೋರಿಸಿದಾಗ ಸಂತ್ರಸ್ತೆಯ ಸಹೋದರ ಈಕೆ ನನ್ನ ಸಹೋದರಿಯಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಇತರೆ ಕುಟುಂಬ ಸದಸ್ಯರು ಸಹ ಫೋಟೋದಲ್ಲಿ ಕಬ್ಬಿನ ಗದ್ದೆಯಲ್ಲಿ ನಿಂತಿರುವ ಯುವತಿ ನಮ್ಮ ಮನೆ ಮಗಳಲ್ಲ ಎಂದಿದ್ದಾರೆ. ಅಲ್ಲದೆ, ಈ ಫೋಟೋ ಯಾರದ್ದು ಎಂಬುದು ಗೊತ್ತಿಲ್ಲ ಎಂದು ಖಚಿತಪಡಿಸಿದ್ದಾರೆ.

    ಜಾಲತಾಣದಲ್ಲಿ ಹರಿದಾಡ್ತಿರೋ ಫೋಟೋ ಹತ್ರಾಸ್ ಗ್ಯಾಂಗ್​ರೇಪ್​ ಸಂತ್ರಸ್ತೆಯದ್ದಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಇಂಡಿಯಾ ಟುಡೆಯ ಹತ್ರಾಸ್​ ವರದಿಗಾರ ಸಂತ್ರಸ್ತೆ ಯುವತಿಯ ನೈಜ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿದ್ದು, ಅದನ್ನು ಪರಿಶೀಲಿಸಿದಾಗ ವೈರಲ್​ ಫೋಟೋದಲ್ಲಿರುವ ಯುವತಿ ಮತ್ತು ಸಂತ್ರಸ್ತೆಯು ಬೇರೆ ಬೇರೆ ಎಂದು ತಿಳಿದುಬಂದಿದೆ. ಆದರೆ, ವೈರಲ್​ ಆಗಿರುವ ಯುವತಿ ಯಾರೆಂಬುದು ಸಹ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ, ಸಂತ್ರಸ್ತೆಯ ಕುಟುಂಬಸ್ಥರು ಹೇಳುವ ಪ್ರಕಾರ ಫೋಟೋದಲ್ಲಿರುವ ಯುವತಿ ಅವರ ಮನೆ ಮಗಳಲ್ಲ. ಅಲ್ಲಿಗೆ ಸ್ಪಷ್ಟವಾಗುವುದೇನೆಂದರೆ ವೈರಲ್​ ಫೋಟೋಗೂ ಹತ್ರಾಸ್​ ಸಂತ್ರಸ್ತೆಗೂ ಸಂಬಂಧವಿಲ್ಲ ಎಂಬುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts