More

    FACT CHECK| ಪ್ರತಿಭಟನೆಯಲ್ಲಿ ಡ್ಯಾನ್ಸ್​ ಮಾಡುತ್ತಿರುವ ಹುಡುಗಿಗೆ ಕಪಾಳಕ್ಕೆ ಬಾರಿಸುತ್ತಿರುವ ಮಹಿಳೆ; ವಿಡಿಯೋದ ಅಸಲಿಯತ್ತೇನು?

    ನವದೆಹಲಿ: ಈಗ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕರ ನೋಂದಣಿ ವಿರುದ್ಧ ಪ್ರತಿಭಟನೆಯದ್ದೇ ಸುದ್ದಿ.

    ಸಾಮಾಜಿಕ ಜಾಲತಾಣಗಳಲ್ಲಿ ಬರುವ ಫೋಟೋ ಮತ್ತು ವಿಡಿಯೋಗಳೂ ಇದಕ್ಕೆ ಸಂಬಂಧಿಸಿದವು ಎಂಬ ಕೆಳಬರಹದೊಂದಿಗೆ ಅಪ್​ಲೋಡ್​ ಆಗುತ್ತಿವೆ. ಹಾಗೆ ನೋಡಿದರೆ ಪ್ರತಿಭಟನೆಗೆ ಸಂಬಂಧಿಸಿರಲಿ ಅಥವಾ ಇಲ್ಲದಿರಲಿ ಅದರ ಹೆಸರಿನಲ್ಲಿ ಹರಿದಾಡುವುದು ಗ್ಯಾರಂಟಿ.

    ಕೆಲ ದಿನಗಳ ಹಿಂದೆ ಒಂದು ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲ ಯುವಕ-ಯುವತಿಯರು ಬೀದಿಯಲ್ಲಿ ಚಪ್ಪಾಳೆ ತಟ್ಟುತ್ತ, ಡ್ಯಾನ್ಸ್​ ಮಾಡುತ್ತಿರುತ್ತಾರೆ. ಇದ್ದಕ್ಕಿದ್ದಂತೆ ಪ್ರತ್ಯಕ್ಷಳಾಗುವ ಮಹಿಳೆಯೊಬ್ಬಳು ಅಲ್ಲಿನ ಹುಡುಗಿಯೊಬ್ಬಳಿಗೆ ಕಪಾಳಕ್ಕೆ ಬಾರಿಸುತ್ತಾಳೆ. ಇದಕ್ಕೆ “ಸಿಎಎ ಪ್ರತಿಭಟನೆ ವೇಳೆ ದಿಢೀರ್​ ಅಮ್ಮ ಬಂದಾಗ..!” ಎಂಬ ಕ್ಯಾಪ್ಷನ್​ ಕೊಡಲಾಗಿದೆ.

    ಇಂಡಿಯಾ ಟುಡೆ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ವಿಡಿಯೋ ಅಸಲಿ ವಿಷಯ ಬಯಲಾಗಿದೆ. ಈ ವಿಡಿಯೋ ಸಿಎಎ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ. ಬದಲಿಗೆ 4 ವರ್ಷಗಳ ಹಳೆಯ ವಿಡಿಯೋ ಎಂದು.

    ಈ ವಿಡಿಯೋವನ್ನು ಹಲವು ಜನ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರಲ್ಲಿ ಮೋಹನ್​ ವಿಶ್ವ ಮತ್ತು ಸಂಕೋಜಿ ಅಕ್ಷಯ್​ ಹಿಂದು ಎನ್ನುವವರು ಪ್ರಮುಖರು. ಅದರಲ್ಲೂ ಮೋಹನ್​ ವಿಶ್ವ ಹಂಚಿಕೊಂಡ ವಿಡಿಯೋವನ್ನು 72 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು 2,880 ಬಾರಿ ಶೇರ್​ ಮಾಡಿದ್ದಾರೆ.

    ಅಸಲಿಯತ್ತು ಏನು?:
    ಕೇರಳದ ಕಣ್ಣೂರು ಜಿಲ್ಲೆ ಪಯ್ಯೂನೂರು ಬಸ್​ ನಿಲ್ದಾಣದಲ್ಲಿ ನಡೆದ ಘಟನೆಯ ವಿಡಿಯೋ ಇದು. ಇದನ್ನು ಮನೋರಮಾ ಆನ್​ಲೈನ್​ ಮತ್ತು ಇಂಡಿಯನ್​ ಎಕ್ಸ್​ಪ್ರೆಸ್​ಗಳು ವರದಿ ಮಾಡಿವೆ. 2 ನಿಮಿಷದ ವಿಡಿಯೋ ಯೂಟ್ಯೂಬ್​ನಲ್ಲೂ ಲಭ್ಯವಿದೆ.

    ಈ ವಿಡಿಯೋಗೆ ನೀಡಿರುವ ಶೀರ್ಷಿಕೆ ಹಾಗೆ ಡ್ಯಾನ್ಸ್​ ಮಾಡುವ ಹುಡುಗಿಯ ಕಪಾಳಕ್ಕೆ ಹೊಡೆಯುವುದು ಅವರ ಅಮ್ಮ. ಆದರೆ ಅದು ಸಿಎಎಗೆ ಸಂಬಂಧಿಸಿದ ಪ್ರತಿಭಟನೆಯಲ್ಲ. ಬದಲಿಗೆ “ಕಾಲೇಜಿಗೆ ಹೋಗು ಎಂದು ಕಳುಹಿಸಿದರೆ, ಇಲ್ಲಿ ಬಂದು ಬಸ್​ ನಿಲ್ದಾಣದಲ್ಲಿ ಡ್ಯಾನ್ಸ್​ ಮಾಡುತ್ತಿದ್ದೀಯಾ” ಎಂಬುದು ಅಮ್ಮನ ಆಕ್ಷೇಪಣೆ!

    ಇದು 2016ರಲ್ಲಿ ನಡೆದದ್ದು. ಮತ್ತು ಇದಕ್ಕೂ ಸಿಎಎ ಪ್ರತಿಭಟನೆಗೂ ಸಂಬಂಧವಿಲ್ಲ ಎನ್ನುವುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿರುವ ಸಂಗತಿ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts