More

    ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್​ಸ್ಪಾಟ್​ ಆಯಿತೇ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!​

    ನವದೆಹಲಿ: ಕರೊನಾ ವೈರಸ್​ ಭೀತಿಯ ನಡುವೆ ದೆಹಲಿಯಲ್ಲಿ ಧಾರ್ಮಿಕ ಸಭೆ ನಡೆಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ, ಭಾರತದಲ್ಲಿ ಕರೊನಾ ವೈರಸ್​ ವೇಗವಾಗಿ ಹರಡಲು ಕಾರಣಕರ್ತರು ಎಂಬ ಆರೋಪವನ್ನು ತಬ್ಲಿಘಿ ಜಮಾತ್​ ಹೊತ್ತಿಕೊಂಡಿತು. ಇದಲ್ಲದೆ, ಆಸ್ಪತ್ರೆಯಿಂದ ತಬ್ಲಿಘಿ ರೋಗಿಯೊಬ್ಬ ಪರಾರಿಯಾಗಿದ್ದು, ಪೊಲೀಸ್​ ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ ಸೇರಿ ಅನೇಕ ಪ್ರಕರಣಗಳು ವರದಿಯಾದವು.

    ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದು ವೈರಲ್​ ಆಗಿದೆ. “ಪೀಪಲ್ಸ್​ ವಾಯ್ಸ್​” ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಸದ್ಗುರು ಅವರ ಫೋಟೋದೊಂದಿಗೆ ಇಂಗ್ಲಿಷ್​ ಅಡಿಬರಹವಿದ್ದು, ಅದರ ಸಾರ ಹೀಗಿದೆ… ಮಾರ್ಚ್​ನಲ್ಲಿ ನಡೆದ ಸದ್ಗುರು ಕಾರ್ಯಕ್ರಮದಲ್ಲಿ 150 ವಿದೇಶಿಯರು ಭಾಗವಹಿಸಿದ್ದರು. ಈಗ ಅವರೆಲ್ಲ ಇಶಾ ಯೋಗ ಫೌಂಡೇಶನ್​ನಲ್ಲಿ ಕ್ವಾರಂಟೈನ್​ನಲ್ಲಿ ಇದ್ದಾರೆ. ಸಾವಿರಕ್ಕೂ ಅಧಿಕ ಪ್ರಕರಣಗಳು ತಮಿಳುನಾಡಿನಲ್ಲಿ ದೃಢಪಟ್ಟಿವೆ. ಆದರೆ, ಮಾಧ್ಯಮಗಳು ತಬ್ಲಿಘಿ ಜಮಾತ್​ ಮೇಲೆ ಮಾತ್ರ ಗಮನಹರಿಸಿವೆ. ಸರ್ಕಾರ ಮತ್ತು ಮಾಧ್ಯಮಗಳ ಇಸ್ಲಮಾಫೋಬಿಯಾ ಬಹಿರಂಗವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಆ ಫೋಸ್ಟ್​ ನೀವಿಲ್ಲಿ ಕಾಣಬಹುದಾಗಿದೆ.

    ಇದನ್ನೂ ಓದಿ: ಮುಸ್ಲಿಂ ಹುಡುಗಿಗೆ ಸೆಹ್ರಿ ಆಯೋಜಿಸಿದ ಹಿಂದು ಮಹಿಳೆ ಮೇಲೆ ಆರ್​ಎಸ್​ಎಸ್ ಹಲ್ಲೆ​ ನಡೆಸಿತೇ?: ಫ್ಯಾಕ್ಟ್​ಚೆಕ್​​ನಲ್ಲಿ ಸತ್ಯಾಂಶ ಬಹಿರಂಗ

    150 foreigners attended Sadhguru's event in March. Now all are under quarantine at Isha yoga foundation. 1000+ cases…

    People's Voice ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಏಪ್ರಿಲ್ 12, 2020

    ಆದರೆ, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ಅಸಲಿ ವಿಚಾರ ಬಹಿರಂಗವಾಗಿದೆ. ವೈರಲ್​​ ಪೋಸ್ಟ್​ ಅಕ್ಷರಶಃ ನಕಲಿ ಎಂಬುದು ತಿಳಿದುಬಂದಿದೆ. ಫೆ.21ರ ಮಹಾಶಿವರಾತ್ರಿಯಂದು ಇಶಾ ಫೌಂಡೇಶನ್​ ವತಿಯಿಂದ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಕೆಲವರು ವಿದೇಶಿಗರು ಸಹ ಪಾಲ್ಗೊಂಡಿದ್ದರು. ಆದರೆ, ಯಾರೊಬ್ಬರು ಸಹ ಕೋವಿಡ್​-19 ರೋಗ ಲಕ್ಷಣಗಳಿಂದ ಇಶಾ ಯೋಗ ಕೇಂದ್ರದಲ್ಲಿ ಕ್ವಾರಂಟೈನ್​ನಲ್ಲಿ ಇಲ್ಲ.

    ಇಂಡಿಯಾ ಟುಡೆ ಫ್ಯಾಕ್ಟ್​ಚೆಕ್​ ತಂಡ ಇಶಾ ಫೌಂಡೇಶನ್​ ಅನ್ನು ಸಂಪರ್ಕಿಸಿದ್ದು, ಮಹಾಶಿವರಾತ್ರಿಯ ಬಳಿಕ ಯಾವುದೇ ಕಾರ್ಯಕ್ರಮ ಆಯೋಜಿಸಿಲ್ಲ ಎಂದು ಖಚಿತಪಡಿಸಿದೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್​ ನಾಯಕ ಸಲ್ಮಾನ್​ ನಿಜಾಮಿ ಅಹ ಅದೇ ಪೋಸ್ಟ್​ ಅನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದ್ದರು. ಆದರೆ, ವೈರಲ್​ ಸುದ್ದಿಯ ವಿಚಾರವನ್ನು ಇಶಾ ಫೌಂಡೇಶನ್​ ತಳ್ಳಿಹಾಕಿದೆ.​

    ಇದನ್ನೂ ಓದಿ: ಮದ್ಯದ ಅಮಲಿನಿಂದ ಅತಿಯಾದ ವೇಗದಲ್ಲಿ ಕಾರು ಚಲಾಯಿಸಿ ದುರಂತ ಸಾವಿಗೀಡಾದ ವ್ಯಕ್ತಿ

    ಈ ಬಗ್ಗೆ ಟ್ವೀಟ್​ ಮಾಡಿರುವ ಇಶಾ ಫೌಂಡೇಶನ್​, ಟ್ವೀಟ್​ ಮಾಡುವ ಮುನ್ನ ಸಾಕಷ್ಟು ತಿಳಿದುಕೊಳ್ಳಿ. ಸದ್ಯ ಆತ್ಮಾವಲೋಕನ ಮಾಡಿಕೊಳ್ಳಲು ಲಾಕ್​ಡೌನ್​ ಒಳ್ಳೆಯ ಸಮಯವಾಗಿದೆ. ಮಹಾಶಿವರಾತ್ರಿಯ ನಂತರ ಈವರೆಗೆ ಯಾವುದೇ ಕಾರ್ಯಕ್ರಮ ಆಯೋಜಿಸಿಲ್ಲ. ಇಶಾ ಯೋಗ ಕೇಂದ್ರದಿಂದ ಯಾವುದೇ ಕರೊನಾ ರೋಗ ಲಕ್ಷಣ ವರದಿಯಾಗಿಲ್ಲ. ಇದು ಕೊಯಮತ್ತೂರೂ ಜಿಲ್ಲಾಧಿಕಾರಿಯಿಂದಲೂ ಖಚಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ.

    ಕೊಯಮತ್ತೂರು ಜಿಲ್ಲಾಧಿಕಾರಿಯನ್ನು ಫ್ಯಾಕ್ಟ್​ಚೆಕ್​ ತಂಡ ಭೇಟಿಯಾಗಿದ್ದು, ಇಶಾ ಫೌಂಡೇಶನ್​ ಅನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ. ಅಲ್ಲಿ ಯಾವುದೇ ಕರೊನಾ ಪಾಸಿಟಿವ್​ ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಥಿರು ಕೆ ರಾಜಮಣಿ ಅವರು ತಿಳಿಸಿದ್ದಾರೆ. ಇವರ ಹೇಳಿಕೆಯನ್ನು ಅಲ್ಲಿನ ಸ್ಥಳೀಯ ಮಾಧ್ಯಮಗಳು ಸಹ ವರದಿ ಮಾಡಿವೆ.

    ಇನ್ನು ವೈರಲ್ ಪೋಸ್ಟ್​ಗೆ ಬಳಸಿರುವ ಫೋಟೋ ಕೂಡ ಹಳೆಯದಾಗಿದೆ. ಇದನ್ನು ಇಶಾ ಫೌಂಡೇಶನ್​ ವೆಬ್​ಸೈಟ್​ಗೆ 2019ರ ಜನವರಿ 22ರಲ್ಲಿ ಬಳಸಲಾಗಿದೆ.

    ಕೊನೆಗೆ ತಿಳಿಯುವುದೇನೆಂದರೆ ಸದ್ಗುರು ಅವರ ಕಾರ್ಯಕ್ರಮದಿಂದ ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು ತಮಿಳುನಾಡಿನಲ್ಲಿ ಪತ್ತೆಯಾಗಿವೆ ಹಾಗೂ ಇಶಾ ಯೋಗ ಕೇಂದ್ರದಲ್ಲಿ 150 ವಿದೇಶಿಗರು ಕ್ವಾರಂಟೈನ್​ನಲ್ಲಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ಅಪಪ್ರಚಾರ ನಡೆಸುವ ದುರುದ್ದೇಶ ವೈರಲ್​ ಪೋಸ್ಟ್​ನಲ್ಲಿದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಆನ್​ಲೈನ್​ ಚಾಟಿಂಗ್​ನಲ್ಲಿ 18 ತುಂಬದ ಹುಡುಗರ ಪೋಲಿ ಮಾತು ಕೇಳಿ ಬೆಚ್ಚಿಬಿದ್ದ ಪೊಲೀಸರು!

    ಆರೋಗ್ಯ ಸಚಿವಾಲಯದ ಪ್ರಕಾರ ಮೇ 3ರವರೆಗೆ ತಮಿಳುನಾಡಿನಲ್ಲಿ 2,757 ಕರೊನಾ ಪ್ರಕರಣಗಳು ವರದಿಯಾಗಿದ್ದು, 29 ಮಂದಿ ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್​)

    ಮನೆಯ ಧೂಳು ತುಂಬಾ ಡೇಂಜರ್​: ಸಂಶೋಧನೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts