More

    FACT CHECK| ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸಿಂಹಗಳು ಪ್ರತ್ಯಕ್ಷಗೊಂಡ ವಿಡಿಯೋ ತುಣುಕಿನ ಅಸಲಿ ಕತೆ

    ನವದೆಹಲಿ: ದೆಹಲಿಯ ಕಂಟೋನ್ಮೆಂಟ್ ಬಳಿಯ ಧೌಲಾ ಕುವಾನ್ ರಸ್ತೆಯಲ್ಲಿ ಸಿಂಹಗಳ ಹಿಂಡು ಚಲಿಸುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

    ಈ ವಿಡಿಯೋ ತುಣುಕನ್ನು ವೀಕ್ಷಿಸಿದವರು ಮರುಹಂಚಿಕೆ ಮಾಡಿಕೊಂಡಿದ್ದಾರೆ. ಕೆಲವರು ದೆಹಲಿಯಲ್ಲಿ ಸಿಂಹಗಳು ಎಂದು ರೋಮಾಂಚನಗೊಂಡಿದ್ದಾರೆ. ಇನ್ನು ಕೆಲವರು ಈ ವಿಡಿಯೋ ತುಣುಕು ನಿಜ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಡಿಯೋ ದೆಹಲಿಯದ್ದಲ್ಲ. ಗುಜರಾತ್​​ನ ಗಿರ್​ ಅರಣ್ಯ ಅಂಚಿನ ಪ್ರದೇಶದ್ದು ಎಂದು ಪತ್ತೆಯಾಗಿದೆ. ಹೀಗಾಗಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ದೆಹಲಿಯದ್ದಲ್ಲ ಎಂಬುದು ಗೊತ್ತಾಗಿದೆ.

    ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ವಿಡಿಯೋ ದೆಹಲಿಗೆ ಸಂಬಂಧಿಸಿದ್ದಲ್ಲ ಎಂದು ಪತ್ತೆ ಮಾಡಿದೆ. ಗುಜರಾಜತ್​ನ ಗಿರ್​ ಅರಣ್ಯದ ಅಂಚಿನಲ್ಲಿರುವ ರಾಜುಲಾ ಗ್ರಾಮದ್ದು ಎಂಬುದನ್ನು ಕಂಡು ಹಿಡಿದಿದೆ.

    ಇದನ್ನೂ ಓದಿ ನಿಸಾರ್ ಅಹಮದ್ ಅವರ ಕಾವ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ

    ಈ ವಿಡಿಯೋ ಯೂಟ್ಯೂಬ್​ನಲ್ಲಿ 2016 ಮೇ 11ರಂದು ಅಪ್​ಲೋಡ್​ ಆಗಿದೆ. ಗಿರ್​ ಅರಣ್ಯ ಸಮೀಪ ಇರುವ ಪಿಪಾವನ್​ ಶಿಪ್​ಯಾರ್ಡ್​ ರಸ್ತೆಯಲ್ಲಿ ಸಿಂಹಗಳು ಚಲಿಸುತ್ತಿರುವುದು ಎಂದು ಪತ್ತೆಯಾಗಿದೆ.
    ಜುನಾಘಡ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದುಶ್ಯಂತ್ ವಾಸವಾಡ ಕೂಡ ವಿಡಿಯೋ ದೆಹಲಿಯದ್ದಲ್ಲ ಗಿರ್​ ಸಮೀಪದ ರಾಜುಲಾ ಗ್ರಾಮದ್ದು ಎಂದು ಹೇಳಿದ್ದಾರೆ.

    ಗುಜರಾತ್​ನ ಗಿರ್​ನಿಂದ ದೆಹಲಿಗೆ ಸಿಂಹಗಳು ರಸ್ತೆಯಲ್ಲಿ ಚಲಿಸುವುದು ಅಸಾಧ್ಯ ಎಂದು ದೆಹಲಿ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಈಶ್ವರರಸಿಂಗ್​ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    Delhi canttDhaula kuan😳lockdown ka asar

    Akash Arora ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮೇ 7, 2020

    ಸಿಬ್ಬಂದಿ ಸುರಕ್ಷತೆಗೆ ಎಚ್​ಎಎಲ್ ಆದ್ಯತೆ: ಕೋವಿಡ್-19 ಕುರಿತ ಮಾರ್ಗಸೂಚಿಗಳ ಪಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts