More

    ಕರೊನಾ ಪ್ರತ್ಯೇಕ ವಾರ್ಡ್​ನಲ್ಲಿ ವೈದ್ಯನಿಂದ ಮಹಿಳೆ ಮೇಲೆ ಅತ್ಯಾಚಾರ?: ವೈರಲ್​ ಫೋಟೋ ಹಿಂದಿನ ಸತ್ಯಾಂಶವೇ ಬೇರೆ

    ನವದೆಹಲಿ: ಆಸ್ಪತ್ರೆಯ ಬೆಡ್​ ಮೇಲೆ ಮಲಗಿರುವ ಮಹಿಳೆಯೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕರೊನಾ ವೈರಸ್​ ಪ್ರತ್ಯೇಕ ವಾರ್ಡ್​ನಲ್ಲಿದ್ದ ಆಕೆಯ ಮೇಲೆ ವೈದ್ಯರೊಬ್ಬರು ಅತ್ಯಾಚಾರ ಎಸಗಿದ್ದು, ಡಿಸ್ಚಾರ್ಜ್​ ಆದ ಬೆನ್ನಲ್ಲೇ ಸಾವಿಗೀಡಾಗಿದ್ದಾಳೆ ಎಂಬ ಸುಳ್ಳು ಸುದ್ದಿಯೊಂದು ಹರಿದಾಡುತ್ತಿರುವುದು ಫ್ಯಾಕ್ಟ್​ಚೆಕ್​ನಿಂದ ಬಹಿರಂಗವಾಗಿದೆ.

    ಇಂಫಿನೊಮಿನಾಲ್​ ಪ್ರಿನ್ಸ್​ (imphenomenal_prince) ಹೆಸರಿನ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಸಮೇತ ಮಹಿಳೆಯ ಘಟನೆಯನ್ನು ವಿವರಿಸಲಾಗಿದೆ. ಫೋಟೋವನ್ನು 16 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಇದು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಗಮನಕ್ಕೆ ಬಂದು ಸತ್ಯಾಂಶ ತಿಳಿಯುವ ಪ್ರಯತ್ನಕ್ಕೆ ಮುಂದಾದಾಗ, ವೈರಲ್​ ಫೋಟೋ 3 ವರ್ಷ ಹಳೆಯದ್ದು ಎಂದು ತಿಳಿದುಬಂದಿದೆ.

    https://www.instagram.com/p/B-x6p_4h1OX/?utm_source=ig_embed

    2017ರ ಜೂನ್​ನಲ್ಲಿ ಉತ್ತರ ಪ್ರದೇಶದ ಕಾನ್ಪುರ ಆಸ್ಪತ್ರೆಯ ವಾರ್ಡ್​ ಬಾಯ್​ನಿಂದ ಯುವತಿಯೊಬ್ಬಳು ಅತ್ಯಾಚಾರಕ್ಕೆ ಒಳಗಾಗಿದ್ದಳು. ಬಳಿಕ ಆಕೆ ಅನಾರೋಗ್ಯಕ್ಕೀಡಾದಾಗ ನರ್ಸಿಂಗ್​ ಹೋಮ್​ಗೆ ದಾಖಲಿಸಲಾಗಿತ್ತು. ಸದ್ಯ ವೈರಲ್​ ಆಗಿರುವ ಫೋಟೋ ಇದಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ.

    ಘಟನೆ ಹಿನ್ನೆಲೆ ಏನು?
    ಒದ್ದೆಯಾಗಿದ್ದ ಬಟ್ಟೆಗಳನ್ನು ತೆಗೆಯುವಂತೆ ಯುವತಿಯನ್ನು ಶೌಚಗೃಹಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಲು ವಾರ್ಡ್​ ಬಾಯ್​ ಪ್ರಯತ್ನಿಸಿದ್ದ. ಬಳಿಕ ಆಕೆಗೆ ಡ್ರಗ್ಸ್​ ಸೇವನೆ ಮಾಡಿಸಿ ರೇಪ್​ ಮಾಡಿದ್ದ ಎಂದು ಯುವತಿ ನೀಡಿದ್ದ ದೂರಿನಲ್ಲಿ ಉಲ್ಲೇಖವಾಗಿದೆ.

    ಗಯಾದಲ್ಲಿ ಲೈಂಗಿಕ ಕಿರುಕುಳ
    ಬಿಹಾರದ ಗಯಾದಲ್ಲಿ ಮತ್ತೊಂದು ಪ್ರಕರಣ ಇತ್ತೀಚೆಗೆ ವರದಿಯಾಗಿದ್ದು, ಕರೊನಾ ಪ್ರತ್ಯೇಕ ವಾರ್ಡ್​ಗೆ ದಾಖಲಾಗಿದ್ದ ವಲಸಿಗ ಮಹಿಳೆಯ ಮೇಲೆ ಆರೋಗ್ಯ ಸಿಬ್ಬಂದಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ತಿಳಿದುಬಂದಿದೆ.

    ಮಾಧ್ಯಮ ವರದಿಯ ಪ್ರಕಾರ 25 ವರ್ಷದ ಸಂತ್ರಸ್ತೆ ಮಹಿಳೆ ಗರ್ಭಪಾತದ ನಂತರ ತನ್ನ ಪತಿಯೊಂದಿಗೆ ಪಂಜಾಬ್​ನ ಲೂಧಿಯಾನದಿಂದ ಗಯಾಗೆ ಬಂದಿದ್ದಳು. ತುಂಬಾ ರಕ್ತಸ್ರಾವ ಆಗುತ್ತಿದ್ದರಿಂದ ಮಹಿಳೆ ಅನುರಾಗ್​ ನಾರಾಯಣ ಮಗಧ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಗೆ ಮಾರ್ಚ್​ 27ರಂದು ದಾಖಲಾಗಿದ್ದರು. ಮಹಿಳೆಗೆ ಎಮರ್ಜೆನ್ಸಿ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ತದನಂತರ ಆಕೆಗೆ ಕರೊನಾ ಸೋಂಕು ತಗುಲಿರಬಹುದೆಂಬ ಶಂಕೆಯು ವ್ಯಕ್ತವಾಗಿತ್ತು. ಹೀಗಾಗಿ ಆಕೆಯನ್ನು ಪ್ರತ್ಯೇಕ ವಾರ್ಡ್​ಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದರೂ ಏಪ್ರಿಲ್​ 6ರಂದು ಅಧಿಕ ರಕ್ತಸ್ರಾವದಿಂದ ಮಹಿಳೆ ಸಾವಿಗೀಡಾದಳು.

    ಸದ್ಯ ವೈರಲ್​ ಆಗಿರುವ ಫೋಟೋ 3 ವರ್ಷ ಹಳೆಯದಾಗಿದ್ದು, ಕರೊನಾ ವೈರಸ್​ಗೆ ಸಂಬಂಧಿಸಿದ್ದಲ್ಲ. ಆದಾಗ್ಯೂ ಅದೇ ರೀತಿಯ ಘಟನೆ ಗಯಾದಲ್ಲಿ ನಡೆದಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್​​)

    ಕರೊನಾ ಹುಟ್ಟಿನಲ್ಲಿ ಚೀನಾ ಜತೆ ಅಮೆರಿಕ ಪಾಲಿದೆಯಾ?: ವೈರಸ್​ ಸ್ಪೋಟದ ಬಗ್ಗೆ ಆಘಾತಕಾರಿ ವರದಿ ಬಹಿರಂಗ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts