More

    17 ವರ್ಷದ ಹುಡುಗನನ್ನು ಚುನಾವಣಾ ಅಧಿಕಾರಿಯನ್ನಾಗಿ ನೇಮಿಸಿತೇ ಆಯೋಗ? ಏನಿದರ ಅಸಲಿಯತ್ತು?

    ಹೈದರಾಬಾದ್​: ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್​ಎಂಸಿ) ಚುನಾವಣೆ ಡಿಸೆಂಬರ್​ 1ರಂದು ನಡೆದಿದ್ದು, ಇಂದು ಮತಎಣಿಕೆ ನಡೆಯುತ್ತಿದೆ. ತೆಲಂಗಾಣ ರಾಜ್ಯ ಚುನಾವಣಾ ಆಯೋಗವು ಹೈದರಾಬಾದ್​ನ ಸುಮಾರು 30 ಕೇಂದ್ರಗಳಲ್ಲಿ ಮತಎಣಿಕೆ ನಡೆಸುತ್ತಿದೆ.

    ಇದರ ನಡುವೆ ವಿ6 ಚಾನಲ್​ಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದು ವೈರಲ್​ ಆಗಿದ್ದು, ತೆಲಂಗಾಣ ಚುನಾವಣಾ ಆಯೋಗವು ಕೇವಲ 17 ವರ್ಷದ ವಿದ್ಯಾರ್ಥಿಚುನಾವಣಾ ಅಧಿಕಾರಿಯನ್ನಾಗಿ ನೇಮಕ ಮಾಡಿದೆ ಎಂಬ ವಿಚಾರ ವಿಡಿಯೋದಲ್ಲಿದೆ. ಆದರೆ, ವಿಡಿಯೋ ಕುರಿತಾದ ಅಸಲಿಯತ್ತು ಹುಡುಕಿ ಹೊರಟಾಗ ಇದೊಂದು ಸುಳ್ಳು ಎಂಬುದು ಬಯಲಾಗಿದೆ.

    ಇದನ್ನೂ ಓದಿ: VIDEO| ಕಾರು ಗುದ್ದಿದ ರಭಸಕ್ಕೆ ರಾಯಲ್ ಎನ್ಫೀಲ್ಡ್ ಎರಡು ಪೀಸ್: ಸ್ವಾಧೀನ ಕಳೆದುಕೊಂಡ ಸವಾರನ ಅರ್ಧ ದೇಹ!

    ಫ್ಯಾಕ್ಟ್​ಚೆಕ್​ನಲ್ಲಿ ತಿಳಿದುಬಂದ ಸತ್ಯಾಂಶವೇನು?
    ಚುನಾವಣಾ ಆಯೋಗ ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ ವಿಡಿಯೋದಲ್ಲಿರುವ ವಿದ್ಯಾರ್ಥಿಯನ್ನು ವೆಬ್​ಕಾಸ್ಟಿಂಗ್​ ನಡೆಸಲು ನೇಮಕ ಮಾಡಲಾಗಿದೆ. ಕಂಪ್ಯೂಟರ್​ ಜ್ಞಾನ ಹೊಂದಿರುವ ವಿದ್ಯಾರ್ಥಿಗಳನ್ನು ಮಾತ್ರ ವೆಬ್​ಕಾಸ್ಟಿಂಗ್​ ನಡೆಸಲು ನೇಮಕ ಮಾಡಿಕೊಳ್ಳಲಾಗುತ್ತದೆ.

    ಹುಡುಗನು ಇತರೆ ಚುನಾವಣಾ ಅಧಿಕಾರಿಗಳೊಂದಿಗೆ ಊಟಕ್ಕೆ ಮಾತ್ರ ಕುಳಿತುಕೊಂಡಿದ್ದ ಹೊರತು, ಆತನನ್ನು ಯಾವುದೇ ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಲಾಗಿಲ್ಲ ಎಂದು ನ್ಯೂಸ್​ಮೀಟರ್​ ವೆಬ್​ಸೈಟ್​ ನಡೆಸಿದ ಫ್ಯಾಕ್ಟ್​ಚೆಕ್​ ಬಹಿರಂಗಪಡಿಸಿದೆ. (ಏಜೆನ್ಸೀಸ್​)

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts