More

    ಸ್ವರ್ಗದಲ್ಲಿರೋ ಕನ್ಯೆಯರಿಗಾಗಿ ಒಳಉಡುಪು ಧರಿಸಿದ್ರಾ ಐಸಿಸ್​ ಉಗ್ರರು?: ಫ್ಯಾಕ್ಟ್​ಚೆಕ್​ನಲ್ಲಿ ನಿಜಾಂಶ ಬಯಲು!

    ನವದೆಹಲಿ: ಮಹಿಳೆಯರ ಒಳಉಡುಪು ಧರಿಸಿ ನಿಂತಿರುವಂತಿರುವ ಪುರುಷರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಲ್ಲಿ ತಪ್ಪು ಸಂದೇಶದೊಂದಿಗೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅದರ ಅಸಲಿಯತ್ತು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

    ಅನೇಕ ಫೇಸ್​ಬುಕ್​ ಬಳಕೆದಾರರು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಫೋಟೋ ಕುರಿತು ಹಿಂದಿಯಲ್ಲಿ ಅಡಿಬರಹ ಬರೆಯಲಾಗಿದ್ದು, ಅದರ ಸಾರ ಹೀಗಿದೆ. ಒಳಉಡುಪು ಧರಿಸಿದ್ದ ಐಸಿಸ್​ ಉಗ್ರರನ್ನು ಸಿರಿಯನ್​​ ಸೇನೆ ಬಂಧಿಸಿದೆ. ಅವರನ್ನು ಪ್ರಶ್ನಿಸಿದ ವೇಳೆ ಹೋರಾಟದಲ್ಲಿ ಮಡಿದು ಸ್ವರ್ಗಕ್ಕೆ ಹೋದಾಗ ನಾವು 72 ಕನ್ಯೆಯರನ್ನು ಭೇಟಿ ಮಾಡುತ್ತೇವೆ. ಅವರಿಗಾಗಿ ನಾವು ಒಳಉಡುಪುಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆಂದು ಬರೆಯಲಾಗಿದೆ. ಆ ಫೋಟೋಗಳನ್ನು ನೀವಿಲ್ಲಿ ಕಾಣಬಹುದಾಗಿದೆ.

    ಇದನ್ನೂ ಓದಿ: ಟ್ರಾವೆಲ್ ಏಜೆಂಟ್ ಆತ್ಮಹತ್ಯೆಗೂ ವಿದ್ಯಾರ್ಥಿ ವೀಸಾಗೂ ಏನು ಸಂಬಂಧ? ಆತ್ಮಹತ್ಯೆ ಪತ್ರದಲ್ಲಿತ್ತು ನಾಲ್ವರ ಹೆಸರು

    ಸ್ವರ್ಗದಲ್ಲಿರೋ ಕನ್ಯೆಯರಿಗಾಗಿ ಒಳಉಡುಪು ಧರಿಸಿದ್ರಾ ಐಸಿಸ್​ ಉಗ್ರರು?: ಫ್ಯಾಕ್ಟ್​ಚೆಕ್​ನಲ್ಲಿ ನಿಜಾಂಶ ಬಯಲು!

    ಆದರೆ, ಫೇಸ್​ಬುಕ್​ನಲ್ಲಿ ಫೋಟೋಗಳ ಅಸಲಿಯತ್ತು ಇಂಡಿಯಾ ಟುಡೆ ಆ್ಯಂಟಿ ಫೇಕ್​ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದ್ದು, ಮೇಲೆ ಹೇಳಿರುವುದಕ್ಕೂ ಫೋಟೋಗೂ ಸಂಬಂಧವಿಲ್ಲ. ಅಷ್ಟಕ್ಕೂ ವೈರಲ್​ ಆಗಿರುವ ಫೋಟೋ 3 ವರ್ಷ ಹಳೆಯದು. 2017ರಲ್ಲಿ ಅಕ್ರಮವಾಗಿ ಗಡಿದಾಟಲು ಯತ್ನಿಸಿದ ಸಿರಿಯನ್​ ನಿರಾಶ್ರಿತರನ್ನು ಟರ್ಕಿಸ್​ ಸೇನೆ ಅವಮಾನಿಸಿದ ಪರಿ ಇದಾಗಿದೆ.

    ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ ಸಹಾಯದಿಂದ ಫೋಟೋಗಳನ್ನು ಹುಡುಕಾಡಿದಾಗ ಅನೇಕ ವೆಬ್​ಸೈಟ್​ಗಳಲ್ಲಿ ಮೂರು ವರ್ಷಗಳ ಹಿಂದೆ ಫೋಟೋ ಕುರಿತು ಸುದ್ದಿ ಪ್ರಕಟವಾಗಿರುವುದು ಗಮನಕ್ಕೆ ಬಂದಿದೆ. ದಿ ಸನ್​ ಹಾಗೂ ಡೈಲಿ ಮೇಲ್​ ವೆಬ್​ಸೈಟ್​​ಗಳು 2017ರ ಆಗಸ್ಟ್​ 3ರಂದು ಇದೇ ಫೋಟೋಗಳನ್ನು ಬಳಸಿಕೊಂಡು ಸುದ್ದಿ ಪ್ರಕಟಿಸಿವೆ.

    ಸ್ವರ್ಗದಲ್ಲಿರೋ ಕನ್ಯೆಯರಿಗಾಗಿ ಒಳಉಡುಪು ಧರಿಸಿದ್ರಾ ಐಸಿಸ್​ ಉಗ್ರರು?: ಫ್ಯಾಕ್ಟ್​ಚೆಕ್​ನಲ್ಲಿ ನಿಜಾಂಶ ಬಯಲು!

    ವರದಿಗಳ ಪ್ರಕಾರ ಗಡಿ ದಾಟಲು ಯತ್ನಿಸಿದ ಸಿರಿಯಾ ನಿರಾಶ್ರಿತರನ್ನು ಹಿಡಿದು ಅವರನ್ನು ಥಳಿಸಿ, ಒಳಉಡುಪು ಧರಿಸಿ ಟರ್ಕಿಸ್​ ಸೇನೆ ಅವಮಾನಿಸಿತ್ತು. ಈ ಘಟನೆ ದಕ್ಷಿಣ ಟರ್ಕಿಯ ಹತಾಯ್​ ಗಡಿಯಲ್ಲಿ ನಡೆದಿತ್ತು. ಹೀಗಾಗಿ ಫೋಟೋ ಕುರಿತಾಗಿ ಸದ್ಯ ಹರಿದಾಡುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದದ್ದು ಎಂಬುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ. (ಏಜೆನ್ಸೀಸ್​)

    ರಿಯಾ ಜತೆ ಯೂರೋಪ್​ ಟ್ರಿಪ್​ ಮುಗಿಯುತ್ತಿದ್ದಂತೆ ಸುಶಾಂತ್​ನಲ್ಲಿ ಕಾಣಿಸಿತ್ತು ಅಚ್ಚರಿಯ ಬದಲಾವಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts