More

    ಕುಟ್ಟಾಣಿ ಮಾರುತ್ತಿದ್ದವಳೀಗ ಪೊಲೀಸ್​ ಅಧಿಕಾರಿ: ಸ್ಫೂರ್ತಿಯ ಕತೆಗೆ ರೋಚಕ ಟ್ವಿಸ್ಟ್​..!

    ಹೈದರಾಬಾದ್​: ಆರ್ಥಿಕ ಸಂಕಷ್ಟದ ನಡುವೆಯೂ ಜೀವನದಲ್ಲಿ ತುಂಬಾ ಹೋರಾಟ ನಡೆಸಿದ ಮಹಿಳೆಯೊಬ್ಬಳು ಇಂದು ಪೊಲೀಸ್​ ಅಧಿಕಾರಿಯಾಗುವ ಮೂಲಕ ತನ್ನೆಲ್ಲ ಸಂಕಷ್ಟಗಳನ್ನು ಮೀರಿ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ ಎಂಬ ಅಡಿಬರಹವುಳ್ಳ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಕಂಕುಳಲ್ಲಿ ಮಗು ಹಾಗೂ ತಲೆಯ ಮೇಲೆ ಕಲ್ಲು ಹೊತ್ತು ನಿಂತಿರುವ ಮಹಿಳೆಯ ಒಂದು ಫೋಟೋ ಮತ್ತು ಕುಟುಂಬದ ಜತೆ ಪೊಲೀಸ್​ ಸಮವಸ್ತ್ರದಲ್ಲಿ ಕುಳಿತಿರುವ ಮಹಿಳೆಯ ಮತ್ತೊಂದು ಫೋಟೋವನ್ನು ಒಟ್ಟಿಗೆ ಸೇರಿಸಿ ಇಬ್ಬರು ಒಬ್ಬರೇ ಒಂದು ವೈರಲ್​ ಮಾಡಲಾಗಿದೆ.

    ಫೋಟೋ ಕುರಿತು ತೆಲುಗು ಭಾಷೆಯ್ಲಲಿ ಅಡಿಬರಹ ಬರೆಯಲಾಗಿದ್ದು, ಅದರ ಸಾರಾಂಶ ಹೀಗಿದೆ. ಫೋಟೋದಲ್ಲಿರುವ ಮಹಿಳೆಯ ಹೆಸರು ಪದ್ಮಸಿಲಾ. ಪದವಿ ಮುಗಿಸಿದ ಬಳಿಕ ಜೀವನ ನಡೆಸಲು ಕಲ್ಲಿನಿಂದ ಮಾಡಿದ ಕುಟ್ಟಾಣಿ ಮಾರುತ್ತಿದ್ದ ಪದ್ಮಸಿಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದರು. ಇಂದು ಅವರ ಶ್ರಮ ಫಲಕೊಟ್ಟಿದ್ದು ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ ಆಗಿ ನೇಮಕವಾಗುವ ಮೂಲಕ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ ಎಂದು ಬರೆಯಲಾಗಿದೆ.

    ಸದ್ಯ ಫೋಟೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಅನೇಕ ನೆಟ್ಟಿಗರು ಫೋಟೋವನ್ನು ಶೇರ್​ ಮಾಡಿಕೊಂಡು ಮಹಿಳೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಯಾರೊಬ್ಬರು ಸಹ ಫೋಟೋ ಕುರಿತಾದ ವಾಸ್ತವ ಏನು ಎಂಬ ಅರಿಯುವ ಪ್ರಯತ್ನವನ್ನು ಮಾಡದೇ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋಗೆ ಮೆಚ್ಚುಗೆ ಕಾಮೆಂಟ್​ ಸುರಿಮಳೆಗೈಯುತ್ತಿದ್ದಾರೆ.

    ಹಾಗಾದರೆ ವಾಸ್ತವ ಏನು?
    ನ್ಯೂಸ್​ ಮೀಟರ್​ ವೆಬ್​ಸೈಟ್​ ಫೋಟೋ ಕುರಿತು ಫ್ಯಾಕ್ಟ್​ಚೆಕ್​ ನಡೆಸಿದ್ದು ವೈರಲ್​ ಫೋಟೋದಲ್ಲಿರುವ ಇಬ್ಬರು ಮಹಿಳೆಯರು ಬೇರೆ ಬೇರೆ ಎಂದು ತಿಳಿದುಬಂದಿದೆ. ಗೂಗಲ್​ ರಿವರ್ಸ್​ ಇಮೇಜ್​ ಸರ್ಚ್​ ಇಂಜಿನ್​ನಲ್ಲಿ ಹುಡುಕಾಡಿದಾಗ ಫೋಟೋದ ಅಸಲಿಯತ್ತು ಬಯಲಾಗಿದೆ. ಎಸ್​ಐ ವೇಷದಲ್ಲಿರುವ ಮಹಿಳೆಯ ಹೆಸರು ಪದ್ಮಶಿಲಾ ತಿರ್ಪುಡೆ. ಇವರು ಮಹಾರಾಷ್ಟ್ರ ಮೂಲದವರು. ಇವರು ಯಶೋಗಾಥೆ ಕುರಿತು ಅನೇಕ ಮರಾಠಿ ಮಾಧ್ಯಮಗಳು ವರದಿ ಮಾಡಿವೆ. ಪದ್ಮಶಿಲಾ ಅವರು ಸದ್ಯ ನಾಗ್ಪುರ ಜಿಲ್ಲೆಯಲ್ಲಿ ಸಹಾಯಕ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿದ್ದಾರೆ.

    ಎಸ್​ಐ ಆಗುವ ಮುನ್ನ ತಾನೋರ್ವ ಕುಟ್ಟಾಣಿ ಮಾರುವವಳಾಗಿದ್ದೆ ಎಂಬುದು ಸ್ವತಃ ಅವರೇ ನಿರಾಕರಿಸಿದ್ದಾರೆ. ನನ್ನ ಹಿಂದಿನ ಶ್ರಮದ ಹೋರಾಟವನ್ನು ತಪ್ಪಾಗಿ ನಿರೂಪಿಸಲಾಗಿದೆ. ತಪ್ಪು ಕಲ್ಪನೆಗಳನ್ನು ಹರಡುವ ಸಮಾಜವನ್ನು ಹೇಗೆ ನೋಡುವುದು ಎಂಬುದೇ ಈಗ ಪ್ರಶ್ನೆಯಾಗಿದೆ ಎಂದಿದ್ದಾರೆ. ಪದ್ಮಶಿಲಾ ಅವರು ಭಂಡಾರ ಜಿಲ್ಲೆಯವರು. 2009ರಲ್ಲಿ ಪದವಿ ಮುಗಿಸಿದ ಅವರು 2013ರಲ್ಲಿ ಎಸ್​ಐ ಆಗಿ ನೇಮಕವಾದರು. ವೈರಲ್​ ಆಗಿರುವ ಫೋಟೋ ತೆಗೆದಿದ್ದು ಅದೇ ಸಮಯದಲ್ಲಿ ಎಂದಿದ್ದಾರೆ. ಅಲ್ಲದೆ, ಕುಟ್ಟಾಣಿ ಮಾರುವವಳು ನನ್ನಾಗಿಯೇ ಇರುವುದು ಕಾಕಾತಾಳಿಯ ಎಂದಿದ್ದಾರೆ.

    ಇನ್ನು ಕುಟ್ಟಾಣಿ ಮಾರುವ ಮಹಿಳೆ ಫೋಟೋವನ್ನು ಮೊದಲ ಬಾರಿಗೆ ಜಿಂದಗಿ ಇಮೇಜಸ್​ ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಸುರೇಶ್​ ಗುಂಡೆಟಿ ಎಂಬುವರು 2017 ಜುಲೈನಲ್ಲಿ ಶೇರ್​ ಮಾಡಿದ್ದಾರೆ. ಆ ಬಗ್ಗೆ ವಿವರಣೆ ನೀಡಿರುವ ಸುರೇಶ್​, ಮಹಿಳೆ ತೆಲಂಗಾಣದ ಕೊರಾಟ್ಲಾ ಮೂಲದವರು ಎಂದಿದ್ದಾರೆ. ಹೀಗಾಗಿ ವೈರಲ್​ ಆಗಿರುವ ಫೋಟೋದಲ್ಲಿರುವ ಮಹಿಳೆ ಬೇರೆ ಬೇರೆ ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. (ಏಜೆನ್ಸೀಸ್​)

    ಚುನಾವಣಾ ಕರ್ತವ್ಯಕ್ಕೆ ತೆರಳುವಾಗ ಬಸ್​ ಉರುಳಿಬಿದ್ದು 9 ಯೋಧರು ಹುತಾತ್ಮ: ಸುದ್ದಿಯ ಸತ್ಯಾಂಶವೇ ಬೇರೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts