More

    VIDEO| ಅಪರಿಚಿತರು ನೀಡುವ ಮಾಸ್ಕ್​ನಲ್ಲಿ ಪ್ರಜ್ಞೆ ತಪ್ಪಿಸುವ ರಾಸಾಯನಿಕವಿದೆಯೇ? ಫ್ಯಾಕ್ಟ್​ಚೆಕ್​ ಬಿಚ್ಚಿಟ್ಟ ಸತ್ಯಾಂಶ ಹೀಗಿದೆ…

    ನವದೆಹಲಿ: ಜಾಗತಿಕವಾಗಿ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿರುವ ಮಹಾಮಾರಿ ಕರೊನಾ ವೈರಸ್​ ಕಾಣಿಸಿಕೊಂಡಾಗಿನಿಂದ ಮಾಸ್ಕ್​​ಗಳಿಗೆ ಹಿಂದೆಂದೂ ಕಾಣದಂತಹ ಬೇಡಿಕೆ ಸೃಷ್ಟಿಯಾಗಿದೆ. ಎಷ್ಟರಮಟ್ಟಿಗೆ ಅಂದರೆ ದೇಶದಲ್ಲಿ ಮಾಸ್ಕ್​ಗಳಿಗೂ ಕೊರತೆಯಾಗಿದೆ. ಆದರೆ, ಸದ್ಯ ಸ್ಥಿತಿ ಸುಧಾರಿಸಿದ್ದು ರಸ್ತೆಗಳಲ್ಲಿಯೂ ಮಾಸ್ಕ್​ಗಳ ಮಾರಾಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

    ಕರೊನಾ ಬಂದಾಗಿನಿಂದ ಫೇಕ್​ ನ್ಯೂಸ್​ಗಳಿಗೇನು ಕಮ್ಮಿಯಿಲ್ಲ. ಇದೀಗ ಮತ್ತೊಂದು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಅರಿವಳಿಕೆ (ಅನಿಸ್ತೀಸಿಯ) ತುಂಬಿದ ಫೇಸ್​ ಮಾಸ್ಕ್​ಗಳನ್ನು ಅಪರಿಚಿತರು ಬಳಸುತ್ತಿದ್ದು, ಅದರಿಂದ ಪ್ರಜ್ಞೆ ತಪ್ಪಿಸಿ ದೋಚುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಂದೇಶ ಹರಿದಾಡುತ್ತಿದೆ.

    ಈ ಸುದ್ದಿ ಅಸಲಿಯತ್ತು ತಿಳಿದುಕೊಳ್ಳಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ಕೆಲ ಕ್ರಿಮಿನಲ್​ಗಳು ರಾಸಾಯನಿಕಯುಕ್ತ ಮಾಸ್ಕ್​ಗಳನ್ನು ಹಿಡಿದು ದರೋಡೆ ಮಾಡುತ್ತಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ, ಇದೊಂದು ಅಪಪ್ರಚಾರದ ಕುತಂತ್ರ ಎಂದು ಹೇಳಿದೆ.

    ವೈರಲ್​ ವಿಡಿಯೋ ಯಡವಟ್ಟು
    ಪುನೀತ್​ ಗೋಯಲ್​ ಹೆಸರಿನ ಯೂಟ್ಯೂಬ್​ ಚಾನಲ್​ನಲ್ಲಿ ಟಿಕ್​ಟಾಕ್​ ವಿಡಿಯೋವೊಂದು ಅಪ್​ಲೋಟ್​ ಆಗಿದೆ. ವಿಡಿಯೋದಲ್ಲಿರುವಂತೆ ಮಹಿಳೆಯೊಬ್ಬರು ಕಾರಿನಲ್ಲಿ ಕುಳಿತ ವ್ಯಕ್ತಿಯೊಬ್ಬರಿಗೆ ಉಚಿತವಾಗಿ ಮಾಸ್ಕ್​ ನೀಡುತ್ತಿದ್ದಾರೆ. ಕರೊನಾ ವೈರಸ್​ನಿಂದ ರಕ್ಷಿಸಿಕೊಳ್ಳಲು ಜನರಿಗೆ ಮಾಸ್ಕ್​ ವಿತರಣೆ ಮಾಡುತ್ತಿರುವುದಾಗಿ ಮಹಿಳೆ ಹೇಳಿದ್ದಾಳೆ. ಮಾಸ್ಕ್​ ತೆಗೆದುಕೊಂಡ ವ್ಯಕ್ತಿ ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ಅದರಲ್ಲಿ ಪ್ರಜ್ಞೆ ತಪ್ಪಿಸುವ ರಾಸಾಯನಿಕವಿದೆ. ದರೋಡೆ ಮಾಡಲು ಮಹಿಳೆ ಅದನ್ನು ಬಳಸುತ್ತಿದ್ದಾಳೆ ಎಂದು ಮತ್ತೊಬ್ಬ ವ್ಯಕ್ತಿ ಎಚ್ಚರಿಸುತ್ತಾನೆ. ವಿಡಿಯೋ ಕೆಳಗೆ ಅಪರಿಚಿತರಿಂದ ಯಾರು ಮಾಸ್ಕ್​ ತೆಗೆದುಕೊಳ್ಳಬೇಡಿ ಎಚ್ಚವಹಿಸಿ ಎಂಬ ಅಡಿಬರವಿದೆ.

    ಇದೇ ರೀತಿಯ ಅನೇಕ ವಿಡಿಯೋಗಳು ಎಚ್ಚರಿಕೆ ಸಂದೇಶಗಳೊಂದಿಗೆ ವಿವಿಧ ದೇಶಗಳಲ್ಲಿ ಹರಿದಾಡುತ್ತಿವೆ. ಆದರೆ, ಮೋಹ್​ ಸಿಲ್​ ಎಂಬ ಫೇಸ್​ಬುಕ್​ ಬಳಕೆದಾರ ಇಂಥದ್ದೆ ವಿಡಿಯೋ ಬಳಸಿಕೊಂಡು ಪೋಸ್ಟ್​ ಮಾಡಿರುವ ಎಚ್ಚರಿಕೆಯ ಸಂದೇಶ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಕೆಲ ಮಂದಿ ಮಾಸ್ಕ್​ ಹಿಡಿದು ಮನೆ ಮನೆಗೆ ಹೋಗುತ್ತಿದ್ದಾರೆ. ಸ್ಥಳೀಯ ಸರ್ಕಾರದ ಹೊಸ ಪ್ರಯತ್ನವಿದು ಎಂದು ಹೇಳುತ್ತಿದ್ದಾರೆ. ಇದು ನಿಮಗೆ ಸರಿಹೋಗುತ್ತಾ ನೋಡಿ ಎಂದು ರಾಸಾಯನಿಕ ಇರುವ ಮಾಸ್ಕ್​ ಧರಿಸಲು ಪ್ರೇರೆಪಿಸಿ, ಬಳಿಕ ಪ್ರಜ್ಞೆ ತಪ್ಪಿಸಿ ಮನೆಯನ್ನು ದರೋಡೆ ಮಾಡುತ್ತಿದ್ದಾರೆ. ಹೀಗಾಗಿ ಅಪರಿಚಿತರಿಂದ ಮಾಸ್ಕ್​ ತೆಗೆದುಕೊಳ್ಳಬೇಡಿ. ಕರೊನಾದಂತಹ ಸಂದಿಗ್ಧ ಸಮಯದಲ್ಲಿ ಜನರು ಹತಾಶರಾಗಿರುತ್ತಾರೆ. ಅಪರಾಧ ಪ್ರಕರಣಗಳು ಹೆಚ್ಚಾಗಲಿವೆ. ಆದಷ್ಟು ಎಚ್ಚರಿಕೆ ವಹಿಸಿ, ಸುರಕ್ಷಿತವಾಗಿರಿ ಸ್ನೇಹಿತರೆ ಎಂಬ ಸಂದೇಶ ಹರಿದಾಡುತ್ತಿದೆ.

    ‼️WARNING‼️A new thing circulating now. People are going door to door handing out masks. They say it’s a new initiative from local government. They ask you to please put it on to see if it fits. It’s doused with chemicals which knocks you out cold. They then rob you!! Please DO NOT accept masks from strangers. Remember friends, it’s a critical time and people are desperate, the crime rate will spike. Please be cautious & safe!

    Moh Sil ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಏಪ್ರಿಲ್ 3, 2020

    ಆದರೆ, ಇದೆಲ್ಲಾ ಸುಳ್ಳು ಈ ಸಂಬಂಧ ಪೊಲೀಸ್​ ಇಲಾಖೆ ಆಗಲಿ, ಗೃಹ ಸಚಿವಾಲಯ ಆಗಲಿ ಅಧವಾ ಇತರೆ ಕಾನೂನು ಜಾರಿ ಮಂಡಳಿಯಾಗಲಿ ಈ ರೀತಿಯ ಯಾವುದೇ ಸಲಹೆಯನ್ನು ನೀಡಿಲ್ಲ. ಭಾರತ ಮತ್ತು ವಿದೇಶಗಳಲ್ಲಿಯೂ ಈ ರೀತಿಯಾದ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)

    ಗೂಗಲ್‌ನಿಂದ ನಿರಾಶ್ರಿತರಿಗಾಗಿ ಹೊಸ ಫೀಚರ್‌: ಆಹಾರ ಮತ್ತು ಸ್ಥಳಾವಕಾಶ ತಿಳಿಯಲು ಸಹಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts