More

    FACT CHECK| ಫ್ರಾನ್ಸ್​ನ ಐಫೆಲ್​ ಟವರ್​ನಿಂದ ಮಹಿಳೆ ಜಿಗಿದು ಬದುಕುಳಿದಿದ್ದು ನಿಜವೇ?

    ನವದೆಹಲಿ: ಮಹಿಳೆ ಐಫೆಲ್​ ಟವರ್​ನ ಕಬ್ಬಿಣದ ಸಲಾಕೆ ಚುಂಬಿಸುತ್ತಿರುವ ದೃಶ್ಯ ಹಾಗೂ ಅದರ ಹಿಂದೆ ಇರುವ ರೋಚಕ ಕತೆಯ ಮಾಹಿತಿ ಇರುವ ಪೋಸ್ಟ್​ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಫ್ರಾನ್ಸ್​ನ ಐಫೆಲ್​ ಟವರ್​ ಬಗ್ಗೆ ಆಕರ್ಷಣೆ ಹೊಂದಿರುವ ಮಹಿಳೆ ಐಫೆಲ್​ ಟವರ್​ ಏರಿ ಆತ್ಮಹತ್ಯೆಗೆ ಯತ್ನಿಸಿ ಟವರ್​ನಿಂದ ಜಿಗಿದು ಕಾರಿನ ಮೇಲೆ ಬಿದ್ದು ಬದುಕುಳಿದಳು. ನಂತರ ತಾನು ಬಿದ್ದ ಕಾರಿನ ಮಾಲೀಕನನ್ನು ಮದುವೆಯಾದಳು ಎಂಬ ಕತೆ ಹೊಂದಿದ ಪೋಸ್ಟ್​ ಅಪ್​ಲೋಡ್​ ಆಗಿದೆ.

    ಆದರೆ ಈ ಪೋಸ್ಟ್​ ನಕಲಿ ಎಂಬುದು ಫ್ಯಾಕ್ಟ್​ ಚೆಕ್​ನಿಂದ ಪತ್ತೆಯಾಗಿದೆ. ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಪೋಸ್ಟ್ ನಕಲಿ ಎಂಬುದನ್ನು ಪತ್ತೆ ಮಾಡಿದೆ. ವೈರಲ್ ಆದ ಪೋಸ್ಟ್​ನಲ್ಲಿ ಕಾಣಿಸಿಕೊಂಡ ಮಹಿಳೆ ಹೆಸರು ಎರಿಕಾ, ಅವರು 2007 ರಲ್ಲಿ ’ಐಫೆಲ್ ಟವರ್ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ತಿಳಿದು ಬಂದಿದೆ.

    ಎರಿಕಾ ಐಫೆಲ್ ಟವರ್‌ನಿಂದ ಹಾರಿ ಕಾರಿನ ಮೇಲೆ ಬಿದ್ದು ಬದುಕಿ ಕಾರಿನ ಮಾಲೀಕನನನ್ನು ಮದುವೆಯಾದಳು ಎಂಬುದು ಕಟ್ಟು ಕತೆ. ಈ ಕತೆಗೆ ಯಾವುದೇ ಪುರಾವೆ ಇಲ್ಲ.

    ಆದರೆ ದಿ ಟೆಲಿಗ್ರಾಫ್, ನ್ಯೂಸ್.ಕಾಮ್ ಮತ್ತು ದಿ ರಿಚೆಸ್ಟ್ ಸುದ್ದಿ ವೆಬ್​ಸೈಟ್​ನಲ್ಲಿ ಈ ಮಹಿಳೆಯ ಚಿತ್ರಗಳು ಇದ್ದು. ಅದರಲ್ಲಿ ಆಕೆಯ ಐಫೆಲ್​ ಟವರ್ ವಿವಾಹದ ಮಾಹಿತಿ ಇದೆ.

    ಎರಿಕಾ ಲ್ಯಾಬ್ರಿ ಎಂಬ ಮಹಿಳೆ ಐಫೆಲ್ ಟವರ್ ಅನ್ನು ತೀವ್ರವಾಗಿ ಪ್ರೀತಿಸುತ್ತಿದ್ದಳು. 2007 ರಲ್ಲಿ, ಅವಳು ತನ್ನ ಹೆಸರನ್ನು ಐಫೆಲ್ ಎಂದು ಬದಲಾಯಿಸಿಕೊಂಡಳು. ಅಲ್ಲದೆ ಆಕೆ ಐಫೆಲ್​ ಟವರನ್ನು ವಿವಾಹ ಕೂಡ ಆದಳು. ಈಕೆಗೆ ನಿರ್ಜೀವ ವಸ್ತುವಿನ ಬಗ್ಗೆ ಆಕರ್ಷಣೆ ಹೊಂದುವ ವಸ್ತುನಿಷ್ಟ ವ್ಯಕ್ತಿತ್ವ ಎಂಬ ಮಾನಸಿಕ ಕಾಯಿಲೆ ಇದ್ದ ಪರಿಣಾಮ ಐಫೆಲ್​ ಟವರ್​ ವಿವಾಹವಾಗಿದ್ದಳು. ಇದಕ್ಕೆ ಫ್ರಾನ್ಸ್​ನಲ್ಲಿ ಆಗ ಭಾರಿ ಟೀಕೆಗಳು ವ್ಯಕ್ತವಾಗಿದ್ದವು ಎಂಬ ಮಾಹಿತಿ ಇದೆ.
    1964ರಲ್ಲಿ ಕ್ರಿಸ್ಟಿಯನ್ ಎಂಬ ಯುವತಿ ಐಫೆಲ್ ಗೋಪುರದಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ಮಾಹಿತಿ ಇದೆ. ಇದರ ಹೊರತಾಗಿ ಎರಿಕಾ ಎಂಬುವವರು ಆತ್ಮಹತ್ಯೆಗೆ ಯತ್ನಿಸಿಲ್ಲ ಎಂಬ ಮಾಹಿತಿ ಇದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts