More

    ಕೊನೆಗೂ ಕಿಲ್ಲರ್​ ಕರೊನಾಗೆ ಸಿಕ್ತಾ ಔಷಧಿ? ಈ ಕೋವಿಡಾಲ್​ ಮೆಡಿಸಿನ್​ ಹಿಂದಿನ ಅಸಲಿಯತ್ತೇನು?

    ನವದೆಹಲಿ: ಜಾಗತಿಕವಾಗಿ ವಕ್ಕರಿಸಿ ಮೃತ್ಯುಕೂಪವನ್ನು ನಿರ್ಮಿಸಿರುವ ಮಹಾಮಾರಿ ಕರೊನಾ ವೈರಸ್ ಔಷಧಿ ಕಂಡುಹಿಡಿಯುವ ಪ್ರಯತ್ನವನ್ನು ಸಂಶೋಧಕರು ನಿರಂತರವಾಗಿ ನಡೆಸುತ್ತಿದ್ದಾರೆ. ಜಾಗತಿಕವಾಗಿ ಸುಮಾರು 8 ಮಿಲಿಯನ್​ಗೂ ಅಧಿಕ ಮಂದಿ ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದರ ನಡುವೆ ತಾಂಜಾನಿಯಾ ಸರ್ಕಾರವು ಕೊರೊನಾ ಗುಣಪಡಿಸುವ ಕೋವಿಡಲ್​ ಹೆಸರಿನ ಹರ್ಬಲ್​ ಔಷಧಕ್ಕೆ ಅನುಮೋದನೆ ನೀಡಿದೆ ಎಂಬ ಫೇಸ್​ಬುಕ್​ ಪೋಸ್ಟ್​ ಒಂದು ಹರಿದಾಡುತ್ತಿದೆ.​

    ಜೋನಾಥನ್​ ಗ್ರ್ಯಾಂಟ್​ ಮವಾಕಾಜಿಲ ಹೆಸರಿನ ಫೇಸ್​ಬುಕ್​​ ಖಾತೆಯಲ್ಲಿ ತಾಂಜಾನಿಯಾ ಅಧ್ಯಕ್ಷ ಜಾನ್​ ಮಗುಫುಲಿ ಮತ್ತು ಆರೋಗ್ಯ ಸಚಿವ ಉಮ್ಮಿ ಅಲಿ ಮವಾಲಿಮು ಫೋಟೋ ಜತೆಗೆ ಕೋವಿಡಾಲ್​ ಹೆಸರಿರುವ ಹರ್ಬಲ್​ ಔಷಧ ಎಂದು ಹೇಳಲಾದ ಫೋಟೋವನ್ನು ಸಹ ಪೋಸ್ಟ್​ ಮಾಡಲಾಗಿದೆ. ಈ ಕುರಿತು ತಾಂಜಾನಿಯಾ ಸರ್ಕಾರವು ಕೋವಿಡ್​-19 ಗುಣಪಡಿಸುವ ಔಷಧವನ್ನು ಹೊರತಂದಿದೆ. ಔಷಧಿಯ ಸಾಮರ್ಥ್ಯವನ್ನು ರಾಷ್ಟ್ರೀಯ ಆರೋಗ್ಯ ಸಮಿತಿ ಅನುಮೋದನೆ ನೀಡಿದೆ. ದೇಶದ ಗೌರವಾನ್ವಿತರ ಹಾಗೂ ಸಮರ್ಥ ನಾಯಕತ್ವವನ್ನು ದೇವರು ಆಶೀರ್ವದಿಸಲಿ. ಗುಣಪಡಿಸುವ ತಾಂಜಾನಿಯ ರಾಷ್ಟ್ರಕ್ಕೆ ಸ್ವಾಗತ. ಎಲ್ಲವು ದೇವರ ಮಹಿಮೆ ಎಂದು ಪೋಸ್ಟ್​ ಕುರಿತು ಅಡಿಬರಹ ಬರೆಯಲಾಗಿದ್ದು, ಸಾಕಷ್ಟು ಶೇರ್​ ಆಗಿವೆ. ಇದನ್ನೂ ಓದಿ: VIDEO| ಅಗಲಿದ ಚಿರುವನ್ನು ವಿಡಿಯೋ ಸಂದೇಶದ ಮೂಲಕ ಪರಿಪರಿಯಾಗಿ ಬೇಡಿಕೊಂಡ ಅರ್ಜುನ್​ ಸರ್ಜಾ

    ಕೊನೆಗೂ ಕಿಲ್ಲರ್​ ಕರೊನಾಗೆ ಸಿಕ್ತಾ ಔಷಧಿ? ಈ ಕೋವಿಡಾಲ್​ ಮೆಡಿಸಿನ್​ ಹಿಂದಿನ ಅಸಲಿಯತ್ತೇನು?

    ಆದರೆ, ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ಇದೊಂದು ತಪ್ಪು ಮಾಹಿತಿ ಎಂದು ತಿಳಿದುಬಂದಿದೆ. ತಾಂಜಾನಿಯಾ ಸರ್ಕಾರವು ಕರೊನಾ ಗುಣಪಡಿಸುವ ಯಾವುದೇ ಔಷಧಕ್ಕೆ ಅನುಮೋದನೆ ನೀಡಿಲ್ಲ. ಕೋವಿಡಾಲ್ ಔಷಧ ಕ್ಲಿನಿಕಲ್ ಪ್ರಯೋಗಗಳನ್ನು ಎದುರಿಸಿಲ್ಲ ಅಥವಾ ರೋಗವನ್ನು ಗುಣಪಡಿಸಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ತಿಳಿದುಬಂದಿದೆ.

    ಇನ್ನು ವೈರಲ್ ಆಗಿರುವ ಹರ್ಬಲ್​ ಕುರಿತು ತಾಂಜಾನಿಯಾದ ರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಂಶೋಧಕರಾದ ಡಾ. ಹಮಿಸ್​ ಮಲೆಬೋ ಹೇಳಿಕೆ ನೀಡಿದಾಗಿನಿಂದ ಈ ಊಹಾಪೋಹ ಹುಟ್ಟಿಕೊಂಡಿದೆ. ಮೇ 11ರಂದು ಟಿವಿ ಶೋ ಒಂದರಲ್ಲಿ ಹಮಿಸ್​ ಮಲೆಬೋ ಅವರು ಕೋವಿಡಲ್​ ಬಗ್ಗೆ ಉಲ್ಲೇಖಿಸಿದರು. ಇದರ ಬೆನ್ನಲ್ಲೇ ಕೋವಿಡ್​-19 ಗುಣಪಡಿಸುವ ಸಂಭವನೀಯತೆ ಕೋವಿಡಲ್​ಗೆ ಇದೆ ಎಂದು ನೆಟ್ಟಿಗರೇ ತಮ್ಮ ವಾದ ಮಂಡಿಸಲು ಶುರು ಮಾಡಿದಾಗಿನಿಂದ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದನ್ನೂ ಓದಿ: VIDEO| ಕೆಲ ಖದೀಮರಲ್ಲೂ ದೊಡ್ಡ ಮನಸ್ಸಿದೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ: ನೋಡ್ದಿದ್ರೆ ನಿಮಗೇ ನಷ್ಟ!

    ಕೊನೆಗೂ ಕಿಲ್ಲರ್​ ಕರೊನಾಗೆ ಸಿಕ್ತಾ ಔಷಧಿ? ಈ ಕೋವಿಡಾಲ್​ ಮೆಡಿಸಿನ್​ ಹಿಂದಿನ ಅಸಲಿಯತ್ತೇನು?

    ಸ್ವಾಹಿಲಿ ಟೈಮ್ಸ್​ ಹೆಸರಿನ ವೆಬ್​ಸೈಟ್​ ಪ್ರಕಾರ ತಾಂಜಾನಿಯಾ ಆರೋಗ್ಯ ಸಚಿವಾಲಯ ಸೇರಿದಂತೆ ವಿವಿಧ ಸರ್ಕಾರಗಳು ಈವರೆಗೂ ಯಾವುದೇ ಔಷಧಿಯನ್ನು ಪರಿಗಣಿಸಿಲ್ಲ ಹಾಗೂ ಅದಕ್ಕೆ ಅನುಮೋದನೆಯನ್ನು ನೀಡಿಲ್ಲ. ಮೇ 3ರಂದು ತಾಂಜಾನಿಯಾ ಆರೋಗ್ಯ ಸಚಿವಾಲಯ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಈ ಕ್ಷಣದವರೆಗೂ ಕರೊನಾ ಗುಣಪಡಿಸುವ ಮೆಡಿಸಿನ್​ ದೊರಕಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ಪರೀಕ್ಷಿಸದ ಔಷಧಿಯನ್ನು ಬಳಸದಂತೆ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆಯನ್ನೂ ನೀಡಿದೆ.

    ಇದುವರೆಗೂ ಕೋವಿಡ್​ ಗುಣಪಡಿಸುವ ಔಷಧ ಸಂಶೋಧಿಸಲಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಸಹ ದೃಢಪಡಿಸಿದೆ. ಕೋವಿಡಲ್ ಬಗ್ಗೆ​ ಕ್ಲೀನಿಕಲ್​ ಪ್ರಯೋಗ ನಡೆದಿಲ್ಲ ಹಾಗೂ ಈವರೆಗೂ ಅದಕ್ಕೆ ತಾಂಜಾನಿಯಾ ಸರ್ಕಾರ ಅನುಮೋದನೆಯನ್ನೇ ನೀಡಿಲ್ಲ. ಹೀಗಾಗಿ ವೈರಲ್​ ಮಾಡಿರುವ ಪೋಸ್ಟ್​ ಅಕ್ಷರಶಃ ಸುಳ್ಳಾಗಿದೆ. (ಏಜೆನ್ಸೀಸ್​) ಇದನ್ನೂ ಓದಿ: ಒಂದು ಗಂಟೆಗೆ ಒಂದು ಲಕ್ಷ ರೂ. ಕೇಳಿದ ನಟಿ ಶ್ರುತಿ ಹಾಸನ್​…!

    ಚಿಕ್ಕಮ್ಮನ ಮಗಳ ಪತಿಯೊಂದಿಗೆ ಲಾಡ್ಜ್​ಗೆ ಹೋದ ಮಹಿಳೆ: ಸಂಜೆ ರೂಂ ತೆರೆದು ನೋಡಿದವರಿಗೆ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts