More

    VIDEO| ಕೆಲ ಖದೀಮರಲ್ಲೂ ದೊಡ್ಡ ಮನಸ್ಸಿದೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ: ನೋಡ್ದಿದ್ರೆ ನಿಮಗೇ ನಷ್ಟ!

    ಇಸ್ಲಮಾಬಾದ್​: ಕಳ್ಳರೆಂದರೆ ಕಲ್ಲು ಮನಸ್ಸಿನವರೆಂದು ಶಪಿಸುವುದುಂಟು. ಆದರೆ, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಬಾರದು ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ಈ ಒಂದು ವಿಡಿಯೋ ಸಾಕ್ಷಿಯಾಗಿದೆ.

    ವಿಡಿಯೋವನ್ನು ಪಾಕಿಸ್ತಾನದ ಕರಾಚಿಯಲ್ಲಿ ಸೆರೆಯಿಡಿಯಲಾಗಿದ್ದು, ಕಳ್ಳನ ಮಾನವೀಯತೆ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಫುಡ್ ಡೆಲಿವರಿ ಬಾಯ್​ನಿಂದ ದೋಚಲು ಯತ್ನಿಸಿದ ಖದೀಮರು ಅತ್ಯಮೂಲ್ಯ ವಸ್ತುಗಳನ್ನು ಡೆಲಿವರಿ ಬಾಯ್​ಗೆ ಮರಳಿಸುವ ಮೂಲಕ ನಮಗೂ ಮಾನವೀಯತೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದನ್ನೂ ಓದಿ: ಒಂದು ಗಂಟೆಗೆ ಒಂದು ಲಕ್ಷ ರೂ. ಕೇಳಿದ ನಟಿ ಶ್ರುತಿ ಹಾಸನ್​…!

    ವಿಡಿಯೋದಲ್ಲಿ ಏನಿದೆ?: ಕರಾಚಿಯ ಏರಿಯಾವೊಂದರಲ್ಲಿ ಕೆಲಸ ಮುಗಿಸಿದ ಡೆಲಿವರಿ ಬಾಯ್​ ಬೈಕ್​ ಏರಿ ಹೊರಡಬೇಕೆನ್ನುವಷ್ಟರಲ್ಲಿ ಎದರುಗಡೆಯಿಂದ ಮತ್ತೊಂದು ಬೈಕ್​ನಲ್ಲಿ ಇಬ್ಬರು ಮುಸುಕುಧಾರಿ ಖದೀಮರು ಬಂದು ಡೆಲಿವರಿ ಬಾಯ್​ನನ್ನು ತಡೆದು ಆತನ ಬಳಿಯಿದ್ದುದ್ದನ್ನು ದೋಚಲು ಯತ್ನಿಸುತ್ತಾರೆ. ಈ ವೇಳೆ ಮೂವರ ನಡುವೆ ಸಂಭಾಷಣೆಯು ನಡೆಯುತ್ತದೆ. ಬಹುಶಃ ಡೆಲಿವರಿ ಬಾಯ್​ ತನ್ನ ಕಷ್ಟವನ್ನು ಖದೀಮರಿಗೆ ಮನದಟ್ಟು ಮಾಡುತ್ತಾನೇನೋ, ಅದಕ್ಕೆ ಕರಗುವ ಖದೀಮರ ಮನಸ್ಸು ಆತನ ವಸ್ತುಗಳನ್ನು ಹಿಂತಿರುಗಿಸುತ್ತಾರೆ. ಓರ್ವ ಡೆಲಿವರಿ ಬಾಯ್​ನನ್ನು ತಬ್ಬಿಕೊಂಡು ಸಂತೈಸುತ್ತಾನೆ. ಬಳಿಕ ಇಬ್ಬರು ಆನತ ಕೈಕುಲುಕುತ್ತಾರೆ. ಭಾವುನಾಗುವ ಡೆಲಿವರಿ ಬಾಯ್​ ಕಣ್ಣೀರು ವರಿಸಿಕೊಳ್ಳುತ್ತಾನೆ. ಬಳಿಕ ಖದೀಮರು ಅಲ್ಲಿಂದ ನಿರ್ಗಮಿಸುತ್ತಾರೆ.

    ವಿಡಿಯೋ ಜೂನ್​ 16ರಂದು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಆಗಿದ್ದು, ಈವರೆಗೂ 4 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. (ಏಜೆನ್ಸೀಸ್​) ಇದನ್ನೂ ಓದಿ: ಮಹಿಳಾ ಅಕೌಂಟ್ಸ್ ಸೂಪರಿಂಡೆಂಟ್ ಕಿರುಕುಳಕ್ಕೆ ಬೇಸತ್ತು ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts