More

    ರಾಹುಲ್​ ಗಾಂಧಿ ಇನ್​ಸ್ಟಾಗ್ರಾಂ ವಿಡಿಯೋ: ಫೇಸ್​​ಬುಕ್​ ಅಧಿಕಾರಿಗಳಿಗೆ ಮಕ್ಕಳ ಆಯೋಗದ ಬುಲಾವ್!

    ನವದೆಹಲಿ : ದೆಹಲಿಯಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾಗಿದ್ದ ಬಾಲಕಿಯ ಕುಟುಂಬಕ್ಕೆ ನ್ಯಾಯ ಕೊಡಿಸುವುದಾಗಿ ಹೇಳಿ ಅವರೊಂದಿಗಿನ ತಮ್ಮ ಫೋಟೋ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದ ಕಾಂಗ್ರೆಸ್​ ಸಂಸದ ರಾಹಲ್​ ಗಾಂಧಿ ಕೇವಲ ತಮಗಷ್ಟೇ ಕಾನೂನು ಸಮಸ್ಯೆ ತಂದುಕೊಂಡಿಲ್ಲ. ಇದೀಗ, ಈ ಸಂಬಂಧವಾಗಿ ಫೇಸ್​ಬುಕ್​ ಅಧಿಕಾರಿಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್​​ಸಿಪಿಸಿಆರ್)ದ ಸಮನ್ಸ್​​ ಜಾರಿಯಾಗಿದೆ.

    ರೇಪ್​​ ಸಂತ್ರಸ್ತೆಯ ಅಥವಾ ಆಕೆಯ ಕುಟುಂಬದ ಗುರುತು ಬಹಿರಂಗಪಡಿಸುವ ಫೋಟೋ ಅಥವಾ ಮಾಹಿತಿಯನ್ನು ಯಾವುದೇ ಮಾಧ್ಯಮದಲ್ಲಿ ಬಹಿರಂಗಪಡಿಸಬಾರದು ಎಂದು ಕಾನೂನು ಹೇಳುತ್ತದೆ. ಆದರೆ, ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ನೀಡಿದ್ದ ರಾಹುಲ್​ ಆ ಸಮಯದ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಶೇರ್ ಮಾಡಿಬಿಟ್ಟಿದ್ದರು. ಇದರಿಂದಾಗಿ ಕೂಡಲೇ ಆ ಫೋಟೋ ವಿಡಿಯೋಗಳನ್ನು ತೆಗೆದುಹಾಕಿ, ಖಾತೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಟ್ವಿಟರ್​ ಜೊತೆಗೆ ಇನ್​​ಸ್ಟಾಗ್ರಾಂಗೂ ಎನ್​ಸಿಪಿಸಿಆರ್​ ನೋಟೀಸು ನೀಡಿತ್ತು.

    ಇದನ್ನೂ ಓದಿ: ಸಿ.ಟಿ.ರವಿಗೆ ಟಾಂಗ್​ ಕೊಡೋ ಭರದಲ್ಲಿ ಪ್ರಿಯಾಂಕ ಖರ್ಗೆಯಿಂದ ಮಾಜಿ ಪ್ರಧಾನಿ ವಾಜಪೇಯಿ ಅವಹೇಳನ

    ಟ್ವಿಟರ್​​ ಸಂಸ್ಥೆಯು ರಾಹುಲ್​​ ಗಾಂಧಿ ಅವರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕ್ರಮ ತೆಗೆದುಕೊಂಡಿತ್ತು. ಇಂದಷ್ಟೇ ರಾಹುಲ್​ರ ಖಾತೆಗೆ ವಾಪಸ್​ ಚಾಲ್ತಿ ನೀಡಲಾಗಿದೆ. ಆದರೆ ಇನ್​​ಸ್ಟಾಗ್ರಾಂನ ಒಡೆತನ ಹೊಂದಿದ ಫೇಸ್​ಬುಕ್​ ಅಧಿಕಾರಿಗಳು ರಾಹುಲ್​ ಗಾಂಧಿ ಅವರ ಖಾತೆಯ ವಿಚಾರವಾಗಿ ಎನ್​​ಸಿಪಿಸಿಆರ್​ ನೋಟೀಸಿನ ಅನ್ವಯ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನಲಾಗಿದೆ.

    ಯಾವುದೇ ಕ್ರಮ ಅಥವಾ ಪ್ರತಿಕ್ರಿಯೆ ನೀಡದಿರುವ ಬಗ್ಗೆ ಗರಂ ಆಗಿರುವ ಎನ್​​ಸಿಪಿಸಿಆರ್​, ಇದೀಗ ಫೇಸ್​​ಬುಕ್​ಗೆ ಎರಡನೇ ಪತ್ರ ಬರೆದಿದೆ. ಗಾಂಧಿ ಅವರ ಖಾತೆಯ ಬಗೆಗೆ ತೆಗೆದುಕೊಂಡಿರುವ ಕ್ರಮದ ವಿವರಗಳೊಂದಿಗೆ ಫೇಸ್​​ಬುಕ್​​ನ ಸಂಬಂಧಿತ​ ಅಧಿಕಾರಿಗಳು ಬರುವ ಮಂಗಳವಾರ (ಆಗಸ್ಟ್​ 17) ರ ಸಂಜೆ 5 ಗಂಟೆಗೆ ದೆಹಲಿಯ ಜನಪಥ್​​ನಲ್ಲಿರುವ ಆಯೋಗದ ಕಚೇರಿಗೆ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸಿಂಗ್​ ಮೂಲಕ ಹಾಜರಾಗಬೇಕು ಎಂದು ಎನ್​​ಸಿಪಿಸಿಆರ್​ ಸೂಚಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಧ್ವಜಾರೋಹಣಕ್ಕೆ ವಿರೋಧ! ನಿವಾಸಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಸಿಎಂ

    ಕೆಲಸದಾಕೆಯ ಕರಾಮತ್ತು: 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

    ರಾಜ್ಯದ ಆರು ಪೊಲೀಸರಿಗೆ ರಾಷ್ಟ್ರೀಯ ‘ಶ್ರೇಷ್ಠ ತನಿಖಾ ಪದಕ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts