More

    ತಾರತಮ್ಯ ಆರೋಪ ಹೊತ್ತಿದ್ದ ಫೇಸ್​​ಬುಕ್​ ಇಂಡಿಯಾದ ಸಾರ್ವಜನಿಕ ನೀತಿ ನಿರ್ದೇಶಕಿ ಅಂಖಿ ದಾಸ್​ ರಾಜೀನಾಮೆ

    ನವದೆಹಲಿ: ದ್ವೇಷಯುಕ್ತ ಪೋಸ್ಟ್​ಗಳು, ದ್ವೇಷ ಭಾಷಣದ ವಿಡಿಯೋಗಳ ಅಪ್ಲೋಡ್​​ ವಿಚಾರದಲ್ಲಿ ತಾರತಮ್ಯ ತೋರುತ್ತಿದ್ದಾರೆ, ಆಡಳಿತರೂಢ ಪಕ್ಷ ಬಿಜೆಪಿ ಪರ ಒಲವು ತೋರಿಸುತ್ತಿದ್ದಾರೆ ಎಂಬಿತ್ಯಾದಿ ಆರೋಪ ಎದುರಿಸುತ್ತಿದ್ದ ಫೇಸ್​ಬುಕ್​ ಇಂಡಿಯಾದ ಸಾರ್ವಜನಿಕ ನೀತಿ ನಿರ್ದೇಶಕಿ ಅಂಖಿ ದಾಸ್​​ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಅಂಖಿ ದಾಸ್​ ಅವರು 9 ವರ್ಷಗಳಿಂದಲೂ ಫೇಸ್​ಬುಕ್​ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೇಸ್​​ಬುಕ್​ನ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ದ್ವೇಷ ಭಾಷಣ, ಪೋಸ್ಟ್​​ಗೆ ಸಂಬಂಧಪಟ್ಟಂತೆ ಇರುವ ಫೇಸ್​​ಬುಕ್​ ನೀತಿ ಅನುಷ್ಠಾನದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಬಿಜೆಪಿಗೆ ಅನುಕೂಲವಾಗುವಂತೆ ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಇವರ ವಿರುದ್ಧ ಕೇಳಿಬಂದಿತ್ತು. ಇದರ ವಿಚಾರಣೆಯ ಸಲುವಾಗಿ ಅಂಖಿ ದಾಸ್​ ಹಾಗೂ ಫೇಸ್​​ಬುಕ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್​ ಮೋಹನ್​ ಸಂಸದೀಯ ಸಮಿತಿ ಎದುರು ಹಾಜರಾಗಿದ್ದರು. ಇದನ್ನೂ ಓದಿ: ಮಧ್ಯರಾತ್ರಿ ಫೋನ್​ ಸಂಭಾಷಣೆ, ಮರುದಿನವೇ ನಡೆಯಿತು ಯುವತಿ ಹತ್ಯೆ: ಕಾರಣ ಬಿಚ್ಚಿಟ್ಟ ಆರೋಪಿ

    ಅಂತಿಮವಾಗಿ ಅಂಖಿ ದಾಸ್​ ತಮ್ಮ ಸ್ಥಾನ ತೊರೆದಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಂಖಿ ರಾಜೀನಾಮೆ ಸಲ್ಲಿಸಿದ್ದಾರೆ. ಅಂಖಿ ದಾಸ್​ ಅವರು ನಮ್ಮ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಇದ್ದವರು. ಭಾರತದಲ್ಲಿ ಫೇಸ್​ಬುಕ್​ ಶುರುವಾದ ಆರಂಭದ ಕಾಲದಿಂದಲೂ ಇದ್ದರು. ಕಂಪನಿಯ ಏಳ್ಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಅಜಿತ್​ ಮೋಹನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಮದರಸಾದ ಮೇಲೆ ಬಾಂಬ್​ ದಾಳಿ: ಏಳು ಮಕ್ಕಳು ಬಲಿ- ಉಳಿದವರ ಸ್ಥಿತಿ ಚಿಂತಾಜನಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts