More

    ಬಿಜೆಪಿ ರಾಜಕಾರಣಿಗೆ ಶಾಕ್​ ನೀಡಿದ ಫೇಸ್​ಬುಕ್​

    ಬಿಜೆಪಿ ಮುಖಂಡ ಟಿ.ರಾಜಾ ಸಿಂಗ್​ ಅವರಿಗೆ ಫೇಸ್​ಬುಕ್ ಬಹುದೊಡ್ಡ ಶಾಕ್​ ನೀಡಿದೆ.  ದ್ವೇಷ, ಹಿಂಸೆಯನ್ನು ಪ್ರಚೋದಿಸುವ ವಿಚಾರಗಳನ್ನು ಪೋಸ್ಟ್​ ಮಾಡುವ ಮೂಲಕ ನಮ್ಮ ನೀತಿ-ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿರುವ ಫೇಸ್​​ಬುಕ್​, ರಾಜಾಸಿಂಗ್​ ಅವರನ್ನು ಫೇಸ್​ಬುಕ್​ ಮತ್ತು ಇನ್ಸ್ಟಾಗ್ರಾಂ ಎರಡೂ ವೇದಿಕೆಯಿಂದ ನಿಷೇಧಿಸಿದೆ. ಹಾಗೇ ಫೇಸ್​​ಬುಕ್​​ನಲ್ಲಿ ಹಿಂಸಾಚಾರ ಉತ್ತೇಜಿಸುವ, ದ್ವೇಷ ಪ್ರಚೋದಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಎಲ್ಲರನ್ನೂ ನಿಷೇಧಿಸುತ್ತೇವೆ ಎಂದೂ ಹೇಳಿದೆ. ಸದ್ಯ ರಾಜಾ ಸಿಂಗ್​ ಅವರ ಅಕೌಂಟ್​​​ನ್ನು ಫೇಸ್​ಬುಕ್​ ತೆಗೆದುಹಾಕಿದೆ.

    ಈಗಾಗಲೇ ಟಿಎಂಸಿ ಸೇರಿ ಕೆಲವು ಪ್ರತಿಪಕ್ಷಗಳು ಫೇಸ್​ಬುಕ್​ ಬಿಜೆಪಿ ಪರವಾಗಿದೆ ಎಂದು ಹೇಳುತ್ತಿವೆ. ಈ ಮಧ್ಯೆ ಫೇಸ್​ಬುಕ್​ ದುರ್ಬಳಕೆ ಆಗುತ್ತಿರುವ ಬಗ್ಗೆ ಚರ್ಚಿಸಲು ಸಂಸದೀಯ ಸಮಿತಿಯು ಅದರ ಪ್ರತಿನಿಧಿಗಳನ್ನು ಕರೆಸಿಕೊಂಡಿತ್ತು.

    ಅದಕ್ಕೂ ಮೊದಲು ಮಂಗಳವಾರ ಐಟಿ ಸಚಿವ ರವಿಶಂಕರ್​ ಪ್ರಸಾದ್​ ಅವರು ಫೇಸ್​ಬುಕ್​ ಸಿಇಒಗೆ ಪತ್ರ ಬರೆದು, ಸಾಮಾಜಿಕ ಜಾಲತಾಣ ನಿರ್ವಹಣಾ ತಂಡದಲ್ಲಿರುವ ಕೆಲವು ಸದಸ್ಯರು ರಾಜಕೀಯ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಸತತವಾಗಿ ಚುನಾವಣೆಯಲ್ಲಿ ಸೋಲುತ್ತಿರುವ ಪಕ್ಷಗಳ ಜತೆ ಸೇರಿಕೊಂಡು ಪ್ರಧಾನಮಂತ್ರಿ ಸೇರಿ ಹಲವು ರಾಜಕೀಯ ಮುಖಂಡರ ನಿಂದನೆಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದೂ ಆರೋಪಿಸಿದ್ದರು. (ಏಜೆನ್ಸೀಸ್​)

    ಇಬ್ಬರು ಭಾರತೀಯರನ್ನು ಉಗ್ರಪಟ್ಟಿಗೆ ಸೇರಿಸುವ ಪಾಕ್​ ಪ್ರಯತ್ನಕ್ಕೆ ಪಂಚ ರಾಷ್ಟ್ರಗಳ ಪಂಚ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts