More

    ಸಾವಿನ ನಂತರ ನೇತ್ರದಾನಕ್ಕೆ ಮನವೊಲಿಸಲು ಲೈಯನ್ಸ್​ ಕ್ಲಬ್​ ಯಶಸ್ವಿ.

    ವಿಜಯವಾಣಿ ಸುದ್ದಿಜಾಲ ಗದಗ
    ಮಹಿಳೆಯೋರ್ವಳ ನಿಧನದ ಸುದ್ದಿ ತಿಳಿದ ನಗರದ ಲೈಯನ್ಸ್​ ಕ್ಲಬ್​ನ ಪದಾಧಿಕಾರಿಗಳು ಕುಟುಂಬದ ಒಪ್ಪಿಗೆಯ ಮೇರೆಗೆ ಮಹಿಳೆಯ ಕಣ್ಣುಗಳನ್ನು ದಾನ ರೂಪವಾಗಿ ಪಡೆದು ನೇತ್ರಾಲಯಕ್ಕೆ ರವಾನಿಸಿದ ಪ್ರಸಂಗ ಗದಗ ನಗರದಲ್ಲಿ ಸೋಮವಾರ ನಡೆದಿದೆ.
    ನಗರದ ಬ್ಯಾಂಕರ್ಸ್​ ಕಾಲೋನಿಯ ನಿವಾಸಿ ಅನ್ನರ್ಪೂಣಬಾಯಿ ಕೃಷ್ಣಾಸಾ ಖಟವಟೆ (82) ಅವರು ಸೋಮವಾರ ಬೆಳಿಗ್ಗೆ ವಯೋ ಸಹಜ ನಿಧನರಾದರು. ಲೈಯನ್ಸ್​ ಕ್ಲಬ್​ನ ಪದಾಧಿಕಾರಿಗಳು ಮೃತರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ನೇತ್ರ ದಾನಕ್ಕೆ ಮನವೊಲಿಸಿದರು. ಮೃತ ಅನ್ನರ್ಪೂಣಬಾಯಿ ಅವರ ಪತಿ ಕೃಷ್ಣಾಸಾ ಹಾಗೂ ಅವರ ಪುತ್ರ ಶ್ರೀಕಾಂತ ಖಟವಟೆ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ಸಮಾಲೋಚನೆ ಬಳಿಕ ನೇತ್ರದಾನಕ್ಕೆ ಒಪ್ಪಿಗೆ ಪಡೆದುಕೊಂಡರು.
    ಹುಬ್ಬಳ್ಳಿಯ ಎಂ. ಎಂ. ಜೋಷಿ ನೇತ್ರಾಲಯದ ತ ವೈದ್ಯರ ತಂಡ ಒಂದು ಗಂಟೆಯೊಳಗೆ ಆಗಮಿಸಿ ನೇತ್ರದಾನದ ಪ್ರಕ್ರಿಯೆ ನಡೆಸಿ ನೇತ್ರಗಳನ್ನು ಹುಬ್ಬಳ್ಳಿಯ ನೇತ್ರಾಲಯಕ್ಕೆ ಸುರತವಾಗಿ ಒಯ್ದರು.
    ಕೃಷ್ಣಾಸಾ ಖಟವಟೆ, ಶ್ರೀಕಾಂತ ಖಟವಟೆ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು. ಕ್ಲಬ್​ನ ಅಧ್ಯ ರಮೇಶ ಶಿಗ್ಲಿ, ಕಾರ್ಯದಶಿರ್ ಪ್ರವಿಣ ವಾರಕರ, ಖಜಾಂಚಿ ರಾಜು ಮಲ್ಲಾಡದ, ವೆಂಕಟೇಶ ಭಾಂಡಗೆ, ದತ್ತೂಸಾ ಬೇವಿನಕಟ್ಟಿ, ಶ್ರೀನಿವಾಸ ಬಾಕಳೆ, ನಂದೂ ಬೇವಿನಕಟ್ಟಿ ಇದ್ದರು.


    ಮೃತ ಅನ್ನರ್ಪೂಣಬಾಯಿ ಅವರ ನೇತ್ರಗಳನ್ನು ವೈದ್ಯರು ನೇತ್ರದಾನ ಪ್ರಕ್ರಿಯೆ ಮುಗಿಸಿ ಕುಟುಂಬದ ಸಮ್ಮುಖದಲ್ಲಿ ಪಡೆದರು. ಕೃಷ್ಣಾಸಾ ಖಟವಟೆ, ಶ್ರೀಕಾಂತ ಖಟವಟೆ, ರಮೇಶ ಶಿಗ್ಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts