More

    ವಿಜೃಂಭಣೆಯ ಶೃಂಗೇರಿ ಶ್ರೀ ಶಾರದಾಂಬಾ ರಥೋತ್ಸವ

    ಶೃಂಗೇರಿ: ಕ್ಷೇತ್ರದ ಅಧಿದೇವತೆ ಶ್ರೀ ಶಾರದಾಂಬಾ ಮಹಾ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ ಚಂಡೀಪಾರಾಯಣಿ, ಶ್ರೀಶಾರದಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ರಥಾರೋಹಣ ಪ್ರಾರ್ಥನೆ ನಡೆಯಿತು.
    ನಂತರ ವೇದ ಹಾಗೂ ಮಂಗಳವಾದ್ಯಗಳ ಘೋಷಗಳೊಂದಿಗೆ ಜಗದ್ಗುರುಗಳ ಉಪಸ್ಥಿತಿಯಲ್ಲಿ ಸಾಲಂಕೃತ ಶ್ರೀ ಶಾರದಾಂಬೆ ಉತ್ಸವಮೂರ್ತಿಯನ್ನು ರಥದಲ್ಲಿ ಕೂರಿಸಿದ ನಂತರ ಯತಿಗಳು ವಿಶೇಷ ಪೂಜೆ ನೆರವೇರಿಸಿದರು. ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
    ಮುಖ್ಯಬೀದಿಯಲ್ಲಿ ಸಾಗಿಬಂದ ರಥೋತ್ಸವಕ್ಕೆ ವೇದ, ವಾದ್ಯ ೋಷಗಳು, ರಂಗವಲ್ಲಿ ಚಿತ್ತಾರಗಳು, ಶ್ರೀಮಠದ ಆನೆಗಳು, ಅಶ್ವಗಳು, ಛತ್ರಿ, ಚಾಮರಗಳು ರಥೋತ್ಸವಕ್ಕೆ ವಿಶೇಷ ಮೆರಗು ನೀಡಿದವು. ಭಕ್ತರು ಶಾರದೆ ಪಾಹಿಮಾಮ್ -ಶಂಕರ ರಕ್ಷಮಾಮ್ ಎಂಬ ಕೂಗುತ್ತಾ ಸುಡುಬಿಸಿಲು ಲೆಕ್ಕಿಸದೇ ರಥ ಎಳೆದು ಶ್ರದ್ಧಾಭಕ್ತಿಯನ್ನು ಮೆರೆದರು. ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ರಥೋತ್ಸವದಲ್ಲಿ ಪಾಲ್ಗೊಂಡರು. ಉತ್ಸವ ಬರುವ ಸಂದರ್ಭದಲ್ಲಿ ಪಟ್ಟಣದ ಭಕ್ತರು ಜಗನ್ಮಾತೆಗೆ ಲ-ಪುಪ್ಪಗಳನ್ನು ಸಮರ್ಪಿಸಿದರು.
    ರಥೋತ್ಸವದ ಅಂಗವಾಗಿಶೃಂಗೇರಿ ಶಾರದಾ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ೆ.24ರಿಂದ ಶನಿವಾರ ಧ್ವಜಾರೋಹಣ, ಮಂತ್ರಜಪ, ವೇದ ಪಾರಾಯಣ, ಸಹಸ್ರ ಮೋದಕ ಗಣಪತಿ ಹೋಮ,ಯಾಗಶಾಲಾ ಪ್ರವೇಶ, ಜಗದ್ಗುರುಗಳಿಂದ ಶತಚಂಡೀಮಹಾಯಾಗದ ಸಂಕಲ್ಪ, ಋತ್ವಿಜರಿಂದ ಚಂಡೀಪಾರಾಯಣಿ ನಡೆಯಿತು. ಕ್ಷೇತ್ರ ಪಾಲಕ ಬ್ರಹ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ, ಮಂಗಳಾರತಿ, ಬ್ರಹ್ಮ ಸಂತರ್ಪಣೆ ನಡೆಯಿತು.
    28ರಂದು ಜಗದ್ಗುರುಗಳ ಉಪಸ್ಥಿತಿಯಲ್ಲಿ ಶತಚಂಡೀಯಾಗದ ಪೂರ್ಣಾಹುತಿ, ಓಕಳಿ ಉತ್ಸವ, ಸಂಜೆ ತೆಪೋತ್ಸವ, ಬೀದಿ ಉತ್ಸವ ಹಾಗೂ ಧ್ವಜಾವರೋಹಣ ಕಾರ್ಯಕ್ರಮ ನಡೆಯಲಿದ್ದು ೆ.29ರ ಗುರುವಾರ ಮಹಾಸಂಪ್ರೋಕ್ಷಣೆ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts