More

    ಕರ ಸಂದಾಯ ಅವಧಿ ವಿಸ್ತರಣೆ

    ಶಿರಸಿ/ಕಾರವಾರ: ಕೋವಿಡ್ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಶೇಕಡ 5ರ ರಿಯಾಯಿತಿಯೊಂದಿಗೆ ಆಸ್ತಿ ತೆರಿಗೆ ಪಾವತಿಗೆ ಇರುವ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಇದು ಕರೊನಾ ಆರ್ಥಿಕ ಮುಗ್ಗಟ್ಟಿನಿಂದ ಸಂಕಷ್ಟದಲ್ಲಿದ್ದ ತೆರಿಗೆದಾತರಿಗೆ ನೆಮ್ಮದಿ ತಂದಿದೆ.
    ಪ್ರತಿ ವರ್ಷ ಏ.30ರೊಳಗೆ ತೆರಿಗೆ ಮೊತ್ತ ತುಂಬುವ ಆಸ್ತಿದಾರರಿಗೆ ಶೇ.5ರ ರಿಯಾಯಿತಿ ನೀಡಲಾಗುತ್ತದೆ. ಈ ಸೌಲಭ್ಯವನ್ನು ಅಂದಾಜು ಶೇ.40ರಷ್ಟು ತೆರಿಗೆದಾತರು ಪ್ರತಿ ವರ್ಷ ಪಡೆಯುತ್ತಿದ್ದಾರೆ. ಉಳಿದ ಶೇ.60ರಷ್ಟು ಆಸ್ತಿದಾರರು ಜೂನ್​ನಿಂದ ಮುಂದಿನ ಮಾರ್ಚ್​ವರೆಗೂ ತುಂಬುತ್ತಾರೆ. ಆದರೆ, ಏಪ್ರಿಲ್ ಮಾಸಾಂತ್ಯದೊಳಗೆ ತೆರಿಗೆ ತುಂಬುತ್ತಿದ್ದವರಿಗೂ ಈ ಬಾರಿ ಕರೊನಾ ಕಾರಣಕ್ಕೆ ಸಮರ್ಪಕವಾಗಿ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ. ಶೇ.5ರಷ್ಟು ಜನರು ಮಾತ್ರ ಈವರೆಗೆ ತೆರಿಗೆ ತುಂಬಿದ್ದು, ತೆರಿಗೆ ಸಂಗ್ರಹಣೆಯಲ್ಲಿ ನಗರಾಡಳಿತಗಳಿಗೆ ಹಿನ್ನಡೆಯಾದಂತಾಗಿದೆ. ಜತೆಗೆ ನಗರಾಡಳಿತದ ಸಿಬ್ಬಂದಿ ತೆರಿಗೆ ಸಂಗ್ರಹಕ್ಕೆ ಮನೆ ಮನೆ ತಿರುಗುವಂತೆಯೂ ಇಲ್ಲ. ಹೀಗಾಗಿ ಜನಪ್ರತಿನಿಧಿಗಳ ಮನವಿಯನ್ನಾಧರಿಸಿ ತೆರಿಗೆ ಮೇಲಿನ ಶೇಕಡ 5ರ ರಿಯಾಯಿತಿ ಯೋಜನೆಯನ್ನು ಜೂನ್ 30 ರವರೆಗೆ ವಿಸ್ತರಿಸಿ ಮೇ 5 ರಂದು ಪೌರಾಡಳಿತ ಇಲಾಖೆ ಕಾರ್ಯದರ್ಶಿ ಲತಾ ಕೆ. ಆದೇಶ ಹೊರಡಿಸಿದ್ದಾರೆ.

    ನಗರಸಭೆಗೆ ಸಂದಾಯ ಮಾಡಬೇಕಿದ್ದ ತೆರಿಗೆಯನ್ನು ನಿಗದಿತ ಅವಧಿಯೊಳಗೆ ತುಂಬಿದರೆ ಶೇ.5ರ ರಿಯಾಯಿತಿ ನೀಡುವ ಕಾಲಾವಧಿಯನ್ನು ಏಪ್ರಿಲ್ 30ರವರೆ ನೀಡಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಸಮಯಾವಕಾಶವನ್ನು ವಿಸ್ತರಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಲಾಗಿತ್ತು. ಇದೀಗ ಜೂನ್ 30ರವರೆಗೆ ಅವಧಿ ವಿಸ್ತರಿಸಿದ್ದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ.
    | ಗಣಪತಿ ನಾಯ್ಕ, ಶಿರಸಿ ನಗರಸಭೆ ಅಧ್ಯಕ್ಷ


    ನಗರಸಭೆಯ 2021-22ನೇ ಸಾಲಿನ ತೆರಿಗೆ ಗುರಿ 3.9 ಕೋಟಿ ಇದ್ದು, ಈಗಾಗಲೇ 67.78 ಲಕ್ಷ ಸಂಗ್ರಹವಾಗಿದೆ. ಕರೊನಾ ವ್ಯಾಪಿಸುತ್ತಿರುವುದರಿಂದ ಸರ್ಕಾರ 2 ತಿಂಗಳು ಅವಧಿ ವಿಸ್ತರಿಸಲಾಗಿದ್ದು, ಈ ಕುರಿತು ಸಾರ್ವಜನಿಕರಿಗೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗುತ್ತಿದೆ.
    | ರಮೇಶ ನಾಯಕ
    ಶಿರಸಿ ನಗರಸಭೆ ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts