More

    ಒಮಿಕ್ರಾನ್​ ಇಫೆಕ್ಟ್​, ಹೊರಬಿತ್ತು ಮತ್ತೊಂದು ಆದೇಶ; ಜ. 31ರವರೆಗೂ ಇಲ್ಲ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ…

    ನವದೆಹಲಿ: ಹೊಸ ವರ್ಷವನ್ನು ವಿದೇಶದಲ್ಲಿ ಸಂಭ್ರಮಿಸಬೇಕು ಎಂದು ಯಾರಾದರೂ ಅಂದುಕೊಂಡಿದ್ದರೆ ಅಥವಾ ಹೊಸ ವರ್ಷಾಚರಣೆಗಾದರೂ ಸ್ವದೇಶಕ್ಕೆ ಮರಳಬೇಕು ಅಂತ ಅಂದುಕೊಂಡಿದ್ದರೆ ಅಂಥವರಿಗೆ ಇದು ಅತ್ಯಂತ ಬೇಸರದ ಸಂಗತಿ. ಏಕೆಂದರೆ ಒಮಿಕ್ರಾನ್​ ಆತಂಕದ ಹಿನ್ನೆಲೆಯಲ್ಲಿ ಇದೀಗ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಪ್ರಯಾಣಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಮತ್ತಷ್ಟು ದಿನಗಳವರೆಗೆ ವಿಸ್ತರಿಸಲಾಗಿದೆ.

    ಡೈರೆಕ್ಟರ್ ಜನರಲ್​ ಆಫ್ ಸಿವಿಲ್ ಏವಿಯೇಷನ್​ (ಡಿಜಿಸಿಎ) ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. ಒಮಿಕ್ರಾನ್​ ಪ್ರಕರಣ ಕೆಲವು ದೇಶಗಳಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡಿಜಿಸಿಎ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಪ್ರಯಾಣಕ್ಕೆ ವಿಧಿಸಲಾದ ನಿರ್ಬಂಧವನ್ನು ವಿಸ್ತರಿಸಿದೆ.

    ಇದನ್ನೂ ಓದಿ: ಮತ್ತೊಮ್ಮೆ ಅದೇ ಬಟ್ಟೆ ಧರಿಸಿ ಸಿಕ್ಕಿಬಿದ್ದ ಕಳ್ಳ; ಕದಿಯಲು ಯತ್ನಿಸಿ ಬರಿಗೈಲಿ ವಾಪಸ್ ಆದವ ಈಗ ಪೊಲೀಸರ ವಶಕ್ಕೆ..

    ಈ ಹಿಂದಿನ ಆದೇಶದ ಪ್ರಕಾರ ಡಿ. 15ರ ವರೆಗೆ ನಿರ್ಬಂಧವಿದ್ದು, ಆ ಬಳಿಕ ಅದು ಮರು ಆರಂಭವಾಗುವುದಿತ್ತು. ಆದರೆ ಇದೀಗ ನಿರ್ಬಂಧವನ್ನು 2022ರ ಜ. 31ರ ವರೆಗೂ ವಿಸ್ತರಿಸಲಾಗಿದೆ. ಆದರೆ ಈ ನಿರ್ಬಂಧ ಕಾರ್ಗೋ ಆಪರೇಷನ್​ಗೆ ಅನ್ವಯಿಸುವುದಿಲ್ಲ. ಅಲ್ಲದೆ ಕೆಲವೊಂದು ಮಾರ್ಗಗಳಲ್ಲಿ ಸಂದರ್ಭಾನುಸಾರ ಅನುಮತಿ ನೀಡುವ ಸಾಧ್ಯತೆ ಇರುತ್ತದೆ ಎಂದೂ ಈ ಆದೇಶದಲ್ಲಿ ತಿಳಿಸಲಾಗಿದೆ.

    ಇಲ್ಲಿ ಹುತ್ತಕ್ಕೆ ಹಾಲೆರೆಯಲ್ಲ, ಕೋಳಿಯನ್ನೇ ಬಲಿ ಕೊಡ್ತಾರೆ!; ವಿಶಿಷ್ಟವಾಗಿ ಷಷ್ಠಿ ಆಚರಣೆ…

    ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts