More

    ಮಕ್ಕಳಿಗೆ ರಾಮಾಯಣದ ಮಹತ್ವ ತಿಳಿಸಿ

    ಸಾಗರ: ರಾಮಾಯಣ ಪುರಾಣದ ಕಥಾನಕವಲ್ಲ. ಎಲ್ಲ ವಿಚಾರಗಳು ನಮಗೆ ಬದುಕಲು ಕಲಿಸುತ್ತವೆ. ಸದಾ ಆತ್ಮಾವಲೋಕನ ಮಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತವೆ ಎಂದು ವೇದಮೂರ್ತಿ ಅನಂತ ಭಟ್ ಮೂರುಕಟ್ಟಾ ಹೇಳಿದರು.
    ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನಗರದ ಗೀರ್ವಾಣ ಭಾರತಿ ಟ್ರಸ್ಟ್ ಮತ್ತು ವೇದಾಗಮ ಸಂಸ್ಕೃತ ಸಂವಽðನಿ ಪಾಠಶಾಲೆಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ರಾಮತಾರಕ ಮಂತ್ರ ಹವನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
    ರಾಮತಾರಕ ಮಂತ್ರ ಮಾನಸಿಕ ನೆಮ್ಮದಿ ಜತೆಗೆ ಸಮೃದ್ಧ ಜೀವನ ನಡೆಸಲು ಸಹಕಾರಿಯಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಭಾರತೀಯರ ಪಾಲಿಗೆ ಸುಂದರ ಕ್ಷಣವಾಗಿದೆ. ಪ್ರತಿ ಮನೆಯಲ್ಲೂ ವಾಲ್ಮೀಕಿ ರಾಮಾಯಣ ಪಠಣ ಮಾಡಬೇಕು. ಮಕ್ಕಳಿಗೆ ರಾಮಾಯಣದ ಮಹತ್ವ ತಿಳಿಸಬೇಕು. ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ಮಹತ್ವ ಪರಿಚಯಿಸಬೇಕು ಎಂದರು.
    ಟ್ರಸ್ಟ್ ಅಧ್ಯಕ್ಷ ಜಿ.ಎಂ.ಸುಬ್ರಹ್ಮಣ್ಯ ಮಾತನಾಡಿ, ರಾಮಾಯಣದ ಪ್ರತಿ ಅಧ್ಯಾಯವೂ ಒಂದೊAದು ಗುಣವಿಶೇಷತೆಯನ್ನು ತನ್ನೊಳಗೆ ಅಳವಡಿಸಿಕೊಂಡಿದೆ. ಭಾರತೀಯರ ಬಹುಕಾಲದ ಬೇಡಿಕೆಯಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿದೆ. ರಾಮನಾಮ ಅಕ್ಷರವೇ ನಮ್ಮ ಇಡೀ ಬದುಕಿಗೆ ದಾರಿ ತೋರಿ ಮೋಕ್ಷ ಪಡೆಯಲು ರಹದಾರಿಯಾಗಿದೆ ಎಂದರು.
    ಎA.ಎ.ಗೌತಮ ಭಾರ್ಗವ ಬಾಪಟ್, ಅತ್ರಿ ಮೂರುಕಟ್ಟಾ, ಎಕ್.ಶ್ರೀಧರ್, ಅಭಿರಾಮ, ಕೆ.ಟಿ.ಮಹಾಬಲೇಶ್ವರ, ದತ್ತ ಹೆಗಡೆ, ಅಚ್ಯುತ್, ಗಜಾನನ ಭಟ್ ರೇವಣಕಟ್ಟಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts