More

    ಸಾರಿಗೆ ನಿಗಮಗಳನ್ನು ಲಾಭಕ್ಕೆ ತರಲು ತಜ್ಞರ ಸಮಿತಿ: ಸಿಎಂ ಬೊಮ್ಮಾಯಿ ಘೋಷಣೆ

    ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ನಷ್ಟದಲ್ಲಿರುವುದು ನಿಜ. ಆದರೆ ಅದನ್ನು ಸರಿದೂಗಿಸಲು ಹಲವು ದಾರಿಗಳಿವೆ. ರೆವಿನ್ಯೂ ಮಾಡೆಲ್ ಸರ್ವೀಸ್ ಹೊಂದಿರುವ ಸಾರಿಗೆ ನಿಗಮಗಳನ್ನು ಯಾವ ರೀತಿ ಲಾಭಕ್ಕೆ ತರಬೇಕು ಎಂದು ಚರ್ಚಿಸಲು ಶೀಘ್ರವೇ ತಜ್ಞರ ಸಮಿತಿ ರಚಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ೬೦ ವಸಂತಗಳ ಸಂಭ್ರಮ’ ಕಾರ್ಯಕ್ರಮಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಿದ ಬೊಮ್ಮಾಯಿ, ಕೆಎಸ್​ಆರ್​ಟಿಸಿ ನಷ್ಟದಲ್ಲಿರುವ ಬಗ್ಗೆ ನಾನು ಬಹಳ ಚಿಂತನೆ ಮಾಡಿದ್ದೇನೆ. ಜೊತೆಗೆ ಹಲವು ನೌಕರರು ಕೂಡ ನನ್ನನ್ನು ಭೇಟಿ ಮಾಡಿ ಸಮಸ್ಯೆ ಹೇಳಿದ್ದಾರೆ. ರೆವಿನ್ಯೂ ಮಾಡೆಲ್ ಇರುವ ಸಾರಿಗೆಯನ್ನು ಲಾಭದಾಯಕವಾಗಿಸಲು ಯಾವ ವಿಧಾನಗಳಿವೆ ಎಂದು ಅಧ್ಯಯನ ಮಾಡಲು ಅತಿ ಶೀಘ್ರದಲ್ಲಿ ತಜ್ಞರ ಸಮಿತಿ ರಚಿಸುತ್ತೇನೆ. ಸಮಿತಿ ಆರು ತಿಂಗಳಲ್ಲಿ ವರದಿ ಕೊಟ್ಟರೆ, ಕೆಎಸ್ಆರ್ಟಿಸಿಯನ್ನು ಮತ್ತೆ ಪುನಃಶ್ಚೇತನ ಮಾಡಲು ಪ್ರಯತ್ನ ಮಾಡುತ್ತೇನೆ. ಈ ಸಂಸ್ಥೆಯನ್ನು ಲಾಭದಾಯಕವಾಗಿ ಮಾಡಿಯೇ ತೀರುತ್ತೇವೆ ಎಂದರು.

    ಇದನ್ನೂ ಓದಿ: ಸೂಪರ್​ ಮಾರ್ಕೆಟ್​ನಲ್ಲಿ 6 ಜನರಿಗೆ ಚಾಕು ಇರಿತ… ‘ಉಗ್ರವಾದಿ’ಗೆ ಅಂತ್ಯ ಹಾಡಿದ ಪೊಲೀಸರು

    ನಮ್ಮ ಕೆಎಸ್​ಆರ್​ಟಿಸಿ 60 ವರ್ಷ ಸಂಭ್ರಮ ಆಚರಿಸುತ್ತಿದೆ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ 50 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಕೆಎಸ್​ಆರ್​ಟಿಸಿ ಉದ್ಯೋಗಿಗಳ ಮಕ್ಕಳ ಕಲಿಕೆಗಾಗಿ ಇನ್ಫೋಸಿಸ್ ಕಂಪೆನಿಯೊಂದಿಗೆ ಡಿಜಿಟಲ್​ ಲರ್ನಿಂಗ್​ ಆ್ಯಪ್​​ ಒಡಂಬಡಿಕೆ ಮಾಡಿರುವುದು, ಕುಂದುಕೊರತೆ ಆಲಿಸೋ ವೆಬ್‌ಸೈಟ್ ಬಿಡುಗಡೆ ಮಾಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಬೊಮ್ಮಾಯಿ ಹೇಳಿದರು.

    ನಾಲ್ಕು ಸಾರಿಗೆ ನಿಯಮಗಳಲ್ಲಿನ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕೆಎಸ್ಆರ್​​ಟಿಸಿ ಅಧ್ಯಕ್ಷ ಚಂದ್ರಪ್ಪ, ಶಾಸಕ ರಿಜ್ವಾನ್ ಅರ್ಷದ್, ಕೆಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮತ್ತಿತರರು ಉಪಸ್ಥಿತರಿದ್ದರು.

    ರೈಲಿನಲ್ಲಿ ಬನಿಯನ್​, ಅಂಡರ್​ವೇರ್​ನಲ್ಲಿ ಓಡಾಡಿದ ಶಾಸಕ!

    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಡ್ರಗ್​​ಪೆಡ್ಲರ್ ಬೆಂಗಳೂರು ಪೊಲೀಸ್ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts