More

    ಬ್ರ್ಯಾಂಡ್ ಬೆಂಗಳೂರು ಅಧ್ಯಯನಕ್ಕೆ ತಜ್ಞರ ಸಮಿತಿ: ಬಿಬಿಎಂಪಿ ಪುನಾರಚನೆ ಸಮಿತಿಯಲ್ಲಿದ್ದವರಿಗೆ ಮಣೆ

    ಬೆಂಗಳೂರು: ರಾಜಧಾನಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ‘ಬ್ರ್ಯಾಂಡ್ ಬೆಂಗಳೂರು’ ಆಶಯಕ್ಕೆ ಪೂರಕವಾಗಿ ನಗರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಹಿನ್ನೆಲೆಯಲ್ಲಿ ಅಧ್ಯಯನ ಕೈಗೊಂಡು ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಮಾಜಿ ಮುಖ್ಯಕಾರ್ಯದರ್ಶಿ ಬಿ.ಎಸ್.ಪಾಟೀಲ್ ಅಧ್ಯಕ್ಷತೆಯಲ್ಲಿ ರಚಿಸಿರುವ ತಜ್ಞರ ಸಮಿತಿಯಲ್ಲಿ ಐಎಎಸ್ ನಿವೃತ್ತ ಅಧಿಕಾರಿ ಸಿದ್ದಯ್ಯ, ಮಾಜಿ ಸಂಸದ ಪ್ರೊ.ಎಂ.ವಿ.ರಾಜೀವ್ ಗೌಡ ಹಾಗೂ ನಗರ ಪರಿಣತ ರವಿಚಂದರ್ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಸಮಿತಿಯ ಸಮನ್ವಯ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಸಮಿತಿಯು 7 ಅಂಶಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಸೂಕ್ತ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಆದರೆ, ಯಾವುದೇ ಕಾಲಮಿತಿಯನ್ನು ಹಾಕಿಲ್ಲ.

    ಇದನ್ನೂ ಓದಿ: ಬೆಂಗಳೂರಲ್ಲಿ ಇದೇ ಭಾನುವಾರ ಕುಂದಾಪ್ರ ಕನ್ನಡ ಹಬ್ಬ: ಸಿಎಂ ಉಪಸ್ಥಿತಿ, ಸಂಭ್ರಮಕ್ಕೆ ಸ್ಟಾರ್ ಕಳೆ

    ಇತ್ತೀಚಿಗಷ್ಟೇ ಸರ್ಕಾರ ರಚಿಸಿರುವ ಬಿಬಿಎಂಪಿ ಪುನಾರಚನೆ ಸಮಿತಿಯಲ್ಲಿ ಇರುವವರನ್ನೇ ಬ್ರ್ಯಾಂಡ್ ಬೆಂಗಳೂರು ಅಧ್ಯಯನ ಸಮಿತಿಗೆ ನಿಯೋಜಿಸಿದೆ. ಈ ಸಮಿತಿಗೆ ರಾಜೀವ್‌ ಗೌಡ ಮಾತ್ರ ಹೊಸ ಸದಸ್ಯರಾಗಿದ್ದಾರೆ.

    ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಧಾನಿ ಅಭಿವೃದ್ಧಿಗೆ ಸಂಬಂಧಿಸಿದ ಹೊಸ ನಿರ್ಧಾರಗಳನ್ನು ಕೈಗೊಳ್ಳಲು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಮುಂಚೂಣಿಗೆ ತಂದಿದ್ದಾರೆ.

    ಜತೆಗೆ ಇದಕ್ಕೆ ಸಂಬಂಧಿಸಿದ ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರು, ಗಣ್ಯರು, ಪಾಲುದಾರರು ಹಾಗೂ ಸಾರ್ವಜನಿಕರೊಂದಿಗೆ ವಿವಿಧ ಹಂತಗಳಲ್ಲಿ ಸಭೆ, ಚರ್ಚೆ-ಸಂವಾದ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಈಗ ತಜ್ಞರ ಸಮಿತಿ ರಚಿಸುವ ಮೂಲಕ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಸ್ಪಷ್ಟರೂಪ ನೀಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ.

    ಇದನ್ನೂ ಓದಿ: ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಸಮಿತಿಗೆ ವಹಿಸಿರುವ 7 ಅಂಶಗಳ ಸಂಕ್ಷಿಪ್ತತೆ

    1. ಬೆಂಗಳೂರು ಅಭಿವೃದ್ಧಿ ವ್ಯಾಪ್ತಿಗೆ ಬರುವ ಬಿಬಿಎಂಪಿ ಸಹಿತ ಇನ್ನಿತರ ಇಲಾಖೆ ಒಳಗೊಂಡ ನಗರ ಆಡಳಿತ ಹಾಗೂ ಆಡಳಿತ ಮರು ಇಮೇಜಿಂಗ್ ಮಾಡುವುದು.
    2. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಗೆ ಬರುವ ಸಂಸ್ಥೆ-ನಿಗಮಗಳ ಸಮನ್ವಯ ಸಾಧಿಸುವುದು.
    3. ಬ್ರ್ಯಾಂಡ್ ಬೆಂಗಳೂರಿನಲ್ಲಿ ಉಲ್ಲೇಖಿತ 9 ಅಂಶಗಳ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಸವಾಲು ಎದುರಿಸಲು ಅಗತ್ಯ ಕ್ರಮದ ಶಿಫಾರಸು.
    4. ಹೊಸ ಉಪಕ್ರಮಗಳನ್ನು ಆಧರಿಸಿ ಬ್ರ್ಯಾಂಡ್ ಬೆಂಗಳೂರು ಬಲಿಷ್ಠಗೊಳಿಸುವುದು.
    5. ವಾರ್ಡ್ ಮಟ್ಟದಲ್ಲಿ ವಿಕೇಂದ್ರೀಕರಣದ ಖಚಿತತೆ ಮತ್ತು ಉನ್ನತ ಮಟ್ಟದಲ್ಲಿ ಸೂಕ್ತ ಕೇಂದ್ರೀಕರಣದ ಖಚಿತಪಡಿಸುವುದು.
    6. ಉತ್ತಮ ಸೇವೆಗಳ ಮೂಲಕ ಆಡಳಿತ ಹಾಗೂ ನಿರ್ವಹಣೆ (ಗವರ್ನೆನ್ಸ್) ಸುಧಾರಿಸುವುದು.
    7. ಸರ್ಕಾರ ನಿರ್ದೇಶಿಸಿ ವಹಿಸಬಹುದಾದ ಇನ್ನಿತರ ಮಹತ್ವವೆನಿಸುವ ವಿಷಯ.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts